ಉಪ ಜಾತಿ ಕಾಲಂನಲ್ಲಿ ಕುರುಬ ಎಂದು ಕಡ್ಡಾಯ ಬರೆಯಿಸಿ

| Published : Sep 21 2025, 02:00 AM IST

ಸಾರಾಂಶ

ಪ್ರಸ್ತುತ ನಾವು ಮಹತ್ವದ ಕಾಲಘಟ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ ಕುರುಬ ಸಮಾಜದ ಮುಖಂಡರು ಮತ್ತು ಪ್ರಮುಖರು ಸಮೀಕ್ಷಾ ಕಾರ್ಯದಲ್ಲಿ ಗಂಭೀರವಾಗಿ ಪಾಲ್ಗೊಂಡು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ರಾಜ್ಯದಲ್ಲಿ ಕುರುಬ ಸಮಾಜದವರ ಜನಸಂಖ್ಯೆ ನಿಖರವಾಗಿ ತಿಳಿಯಬೇಕಾದರೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂ 9 ರ ಗೆಜೆಟ್ ನಂ. 0809 ರಲ್ಲಿ ಕುರುಬ ಮತ್ತು ಉಪಜಾತಿ ಕಾಲಂ ನಲ್ಲಿಯು ಕುರುಬ ಎಂದು ಕಡ್ಡಾಯವಾಗಿ ಬರೆಯಿಸಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ಚೀರನಹಳ್ಳಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪೂರ್ವ ಭಾವಿ ಮತ್ತು ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ನಾವು ಮಹತ್ವದ ಕಾಲಘಟ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ ಕುರುಬ ಸಮಾಜದ ಮುಖಂಡರು ಮತ್ತು ಪ್ರಮುಖರು ಸಮೀಕ್ಷಾ ಕಾರ್ಯದಲ್ಲಿ ಗಂಭೀರವಾಗಿ ಪಾಲ್ಗೊಂಡು ಪ್ರತಿಯೊಂದು ಕುರುಬರ ಕುಟುಂಬದವರಲ್ಲಿಯೂ ಈ ಸಂಬಂದ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.ಸೆ. 22 ರಿಂದ ಅ. 7 ರವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಯಲಿದ್ದು, ಈ ಸಮಯದಲ್ಲಿ ಅತ್ಯಂತ ಜಾಗೃತೆಯಿಂದ ಕುರುಬ ಸಮಾಜದ ಎಲ್ಲರೂ ಕೆಲಸಮಾಡಬೇಕು ಎಂದು ಕೋರಿಕೊಂಡ ಅವರು, ಯಾರೊಬ್ಬರೂ ಜಾತಿ ಕಾಲಂನಲ್ಲಿ ತಪ್ಪಾಗಿ ಬರೆಸದಂತೆ ನೋಡಿಕೊಂಡು ಸಂಘಟನೆಗೆ ಕೈಜೋಡಿಸಬೇಕು ಎಂದರು. ಜಿಪಂ ಮಾಜಿ ಸದಸ್ಯ ಅಮಿತ್.ವಿ.ದೇವರಹಟ್ಟಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ ಮಾತನಾಡಿ, ಸಮೀಕ್ಷೆ ನಡೆಯುವ ಸಮಯದಲ್ಲಿ ಕುರುಬ ಸಮಾಜದ ಮುಖಂಡರು ಮತ್ತು ಶಿಕ್ಷಿತರು ಸಂಘದೊಂದಿಗೆ ಸಹಕರಿಸಿ ಹಳ್ಳಿಗಳಿಗೆ ತೆರಳಿ ಬೆಂಬಲ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ಸಾಕರಾಜು, ನಿರ್ದೇಶಕರಾದ ಕೆ.ಎಚ್. ಬುಡೀಗೌಡ, ಕೆ.ಎಂ. ಶ್ರೀನಿವಾಸ್, ಎಂ. ಅಪ್ಪಾಜೀಗೌಡ, ಬಾಲಮನೋಹರ, ಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯರಾದ ಜಿ.ಆರ್. ರಾಮೇಗೌಡ, ಜಯರಾಮೇಗೌಡ, ಪುರಸಭೆ ಸದಸ್ಯ ನಟರಾಜು, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಸ್. ಸಿದ್ದೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ನಾಗರಾಜು, ಮಾಜಿ ಸದಸ್ಯ ರಾಜಶೇಖರ್, ತಾಪಂ ಮಾಜಿ ಅಧ್ಯಕ್ಷ ಬಿ.ಸಿ. ಮಹದೇವ್, ಮಾಜಿ ಸದಸ್ಯ ಸಣ್ಣತಮ್ಮೇಗೌಡ, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಎಸ್. ಚಂದಹಾಸ, ಕುರುಬ ಸಮಾಜದ ಮುಖಂಡರಾದ ರವಿ, ಪುಟ್ಟರಾಜು, ಹೇಮಂತ್, ಎಂ. ರಮೇಶ್, ಆನಂದ್, ಮಹೇಶ್ ಗೌಡ, ವೆಂಕಟರಾಮು, ಚಂದ್ರು ಇದ್ದರು.