ಕಂಡಕ್ಟರ್‌ಗೆ ಎದೆ ನೋವು: ಕೆಎಸ್‌ಆರ್‌ಟಿಸಿ ಬಸ್ ಸಮೇತ ಆಸ್ಪತ್ರೆಗೆ ಬಂದ ಚಾಲಕ

| Published : Mar 29 2024, 12:47 AM IST

ಕಂಡಕ್ಟರ್‌ಗೆ ಎದೆ ನೋವು: ಕೆಎಸ್‌ಆರ್‌ಟಿಸಿ ಬಸ್ ಸಮೇತ ಆಸ್ಪತ್ರೆಗೆ ಬಂದ ಚಾಲಕ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಬಸ್ ಸಮೇತ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ ಘಟನೆ ಗುರುವಾರ ನಡೆಯಿತು.

ತಿಪಟೂರು : ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಬಸ್ ಸಮೇತ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ ಘಟನೆ ಗುರುವಾರ ನಡೆಯಿತು.ಶಿವಮೊಗ್ಗ ಡಿಪೋ ಬಸ್ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ತಿಪಟೂರು ಸಮೀಪಿಸುತ್ತಿದ್ದಂತೆ ಕಂಡಕ್ಟರ್ ರಮೇಶ್‌ ನಾಯ್ಕ ಎಂಬುವವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಕಿರಣ್‌ಗೌಡ ಬಸ್ ಸಮೇತ ತಿಪಟೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ರಮೇಶ್ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿರುವುದಾಗಿ ಚಾಲಕ ಕಿರಣ್ ತಿಳಿಸಿದ್ದಾರೆ.