ಸಾರಾಂಶ
ಶಾಲಾ ನಾಯಕ ಕೌಶಿಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಯಿತು. ಕುಂದಚೇರಿ ಗ್ರಾ.ಪಂ. ಅಧ್ಯಕ್ಷ ಪಿ.ಬಿ.ದಿನೇಶ್ ಮಕ್ಕಳ ಬೇಡಿಕೆಗಳ ಬಗ್ಗೆ ಹಿಂದಿನ ಸಭೆಯ ನಡಾವಳಿ ವಿವರಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕುಂದಚೇರಿ ಗ್ರಾ.ಪಂ. ವ್ಯಾಪ್ತಿಯ 2024-25ನೇ ಸಾಲಿನ ಮಕ್ಕಳ ಗ್ರಾಮಸಭೆ ಚೆಟ್ಟಿಮಾನಿ ಶಾಲಾ ಆವರಣದಲ್ಲಿ ನಡೆಯಿತು.ಶಾಲಾ ನಾಯಕ ಕೌಶಿಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಯಿತು. ಕುಂದಚೇರಿ ಗ್ರಾ.ಪಂ. ಅಧ್ಯಕ್ಷ ಪಿ.ಬಿ.ದಿನೇಶ್ ಮಕ್ಕಳ ಬೇಡಿಕೆಗಳ ಬಗ್ಗೆ ಹಿಂದಿನ ಸಭೆಯ ನಡಾವಳಿ ವಿವರಿಸಿದರು.
ಚರಂಡೆಟ್ಟಿ, ಕೋಪಟ್ಟಿ, ಕಾನಕಂಡಿ ಮತ್ತು ಚೆಟ್ಟಿಮಾನಿ ಶಾಲೆಯ ಮಕ್ಕಳು ವಿವಿಧ ಸಮಸ್ಯೆಗಳ ಕುರಿತು ಪಂಚಾಯ್ತಿ ಆಡಳಿತ ಮಂಡಳಿ ಗಮನ ಸೆಳೆದರು. ಎಲ್ಲಾ ಬೇಡಿಕೆಗಳನ್ನು ಕ್ರೀಯಾಯೋಜನೆಯಲ್ಲಿ ಅಳವಡಿಸಲಾಗುವುದೆಂದು ಆಡಳಿತ ಮಂಡಳಿ ತಿಳಿಸಿತು.ಕುಂದಚೇರಿ ಪಂಚಾಯಿತಿ ಆಡಳಿತ ಮಂಡಳಿ, ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಸಹ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.
ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ನಾಲ್ಕು ಶಾಲೆಗಳ ಮಕ್ಕಳಿಗಾಗಿ ಸ್ವಚ್ಛತೆ, ಛದ್ಮವೇಷ, ಏಕಪಾತ್ರಾಭಿನಯ, ರಸಪ್ರಶ್ನೆ, ಪ್ರಬಂಧ, ಗಟ್ಟಿ ಓದುವುದು, ಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಪಿಡಿಒ ಯಾದವ್, ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್, ಸದಸ್ಯ ಹ್ಯಾರಿಸ್, ಸಿ.ಯು.ಸವಿತ, ಎಸ್.ಎಲ್.ನಮಿತ, ಚೇತನ್, ದಮಯಂತಿ, ಕೆದಂಬಾಡಿ ಚೇತನ್ ತೀರ್ಪುಗಾರರಾಗಿದ್ದರು.
ವಿವಿಧ ಸ್ಪರ್ಧೆಗಳ ವಿಜೇತ 33 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಪಂಚಾಯಿತಿ ಸದಸ್ಯ ಹ್ಯಾರಿಸ್ ಸ್ವಾಗತಿಸಿದರು. ಚೆಟ್ಟಿಮಾನಿ ಶಾಲಾ ಮುಖ್ಯ ಶಿಕ್ಷಕಿ ಗೀತಾಂಜಲಿ ವಂದಿಸಿದರು.