ಸಾರಾಂಶ
ಬೇಸಿಗೆಯ ಉಷ್ಣತೆ ಏರಿಕೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ.
ಚಿಕ್ಕಬಳ್ಳಾಪುರ: ಬೇಸಿಗೆಯ ಉಷ್ಣತೆ ಏರಿಕೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ.
ಕಳೆದ 2 ತಿಂಗಳಲ್ಲಿ 85 ಜನರಿಗೆ ಹಾವುಗಳು ಕಚ್ಚಿದ್ದು, ಕಳೆದ 1 ವರ್ಷದಲ್ಲಿ 4 ಜನರು ಹಾವಿನ ಕಡಿತಕ್ಕೆ ಬಲಿಯಾಗಿದ್ದಾರೆ. ಈ ಸಂಬಂಧ ಆರೋಗ್ಯ ಇಲಾಖೆ ಎಚ್ಚರಗೊಂಡಿದ್ದು, ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆಸ್ಪತ್ರೆಗಳಲ್ಲಿ ತಲಾ 10 ಹಾವಿನ ವಿಷ ನಿರೋಧಕ ಚುಚ್ಚು ಮದ್ದುಗಳನ್ನು ಸಂಗ್ರಹಿಸಿದೆ.
ಜಿಲ್ಲೆಯಲ್ಲಿ ನಾಯಿಗಳ ಕಾಟ್ಟಕ್ಕಿಂತ ಹಾವುಗಳ ಹಾವಳಿಯೇ ಹೆಚ್ಚಾಗಿದ್ದು, ಅದರಲ್ಲೂ ಗ್ರಾಮಾಂತರ ಮತ್ತು ನೂತನ ಬಡಾವಣೆಗಳಲ್ಲಿ ಹೆಚ್ಚಾಗಿದೆ. ಅಲ್ಲಿನ ಜನ ಹಾವುಗಳ ಹೆಸರು ಕೇಳಿದರೆ ಬೆಚ್ಚಿ ಬಿಳುವಂತ ಪರಿಸ್ಥಿತಿ ಎದುರಾಗಿದೆ. ರಸ್ತೆ, ಮನೆ, ಶೌಚಾಲಯಗಳು, ಪಾರ್ಕ್ಗಳು, ಹೊಲ,ಗದ್ದೆ, ತೋಟಗಳು, ಬಾವಿಗಳು,ಕೆರೆ-ಕುಂಟೆಗಳು, ಕೃಷಿ ಹೊಂಡಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. 2 ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ 85 ಜನರಿಗೂ ನಾಗರ ಹಾವುಗಳೇ ಕಚ್ಚಿರುವುದು ವಿಪರ್ಯಾಸವೇ ಆಗಿದೆ. 1 ವರ್ಷದಲ್ಲಿ 813 ಜನರಿಗೆ ಹಾವು ಕಚ್ಚಿದ್ದು, 4 ಜನ ಮೃತಪಟ್ಟಿದ್ದಾರೆ. ಈಗ ಬೇಸಿಗೆ ಹಿನ್ನಲೆ ಹಾವು ಕಡಿತಗಳು ಹೆಚ್ಚಾಗುವ ಸಂಭವ ಇರುವ ಕಾರಣ .