ದೇವಾಲಯಕ್ಕೆ ಧಗ್ರಾಯೋದಿಂದ ಒಂದು ಲಕ್ಷ ರು. ವಿತರಣೆ

| Published : Aug 03 2024, 12:33 AM IST

ದೇವಾಲಯಕ್ಕೆ ಧಗ್ರಾಯೋದಿಂದ ಒಂದು ಲಕ್ಷ ರು. ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಗೆಲ್ಲರಿಗೂ ತಿಳಿದಿರುವಂತೆ ಶ್ರೀ ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು,

ಕನ್ನಡಪ್ರಭ ವಾರ್ತೆ ಮೂಗೂರು

ಟಿ. ನರಸೀಪುರ ವಲಯದ ಬೆನಕನಹಳ್ಳಿ ಕಾರ್ಯ ಕ್ಷೇತ್ರದ ಚಿಕ್ಕಭುಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ಮಾರಮ್ಮ ದೇವಿ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಿಂದ ಗ್ರಾಮಸ್ಥರು ಹಾಗೂ ಸಮಿತಿಯವರ ಬೇಡಿಕೆಯಂತೆ ವರಪ್ರಸಾದ ರೂಪದಲ್ಲಿ ಒಂದು ಲಕ್ಷ ರು. ಡಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ವಿತರಿಸಿದರು.

ನಂತರ ಮಾತನಾಡಿದ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ, ತಮಗೆಲ್ಲರಿಗೂ ತಿಳಿದಿರುವಂತೆ ಶ್ರೀ ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು, ಅಂದಿನಿಂದ ಇಂದಿನವರೆಗೂ ಚತುರ್ವಿಧ ದಾನಗಳಾದ, ಅನ್ನದಾನ, ಅಭಯದಾನ, ಔಷಧ ದಾನ, ಅಕ್ಷರ ದಾನ, ನಡೆಸಿಕೊಂಡು ಬರುತ್ತಿದ್ದು, ಕಳೆದ ನಾಲ್ಕು ದಶಕಗಳಿಂದ, ಗ್ರಾಮ ಅಭಿವೃದ್ಧಿಗೆ ಬೇಕಾದಂತಹ, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಜನ ಮಂಗಳ ಕಾರ್ಯಕ್ರಮ, ಸುಜ್ಞಾನ ನಿಧಿ ಕಾರ್ಯಕ್ರಮ ಹಾಗೂ ಇನ್ನೂ ಅನೇಕ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ದೇವಾಲಯದ ಸಮಿತಿ ಅಧ್ಯಕ್ಷ ಶಿವಸ್ವಾಮಿ. ವಲಯ ಮೇಲ್ವಿಚಾರಕರು ದೇವರಾಜು. ಸೇವಾ ಪ್ರತಿನಿಧಿ ಪ್ರಕಾಶ್ ಹಾಗೂ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.