ಮೊಬೈಲ್‌ ಗೀಳಿನಿಂದ ಮಕ್ಕಳು ಹಾಳು: ಗುರುಮಹಾಂತ ಶ್ರೀ

| Published : May 22 2024, 12:50 AM IST / Updated: May 22 2024, 12:51 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲ: ಪ್ರತಿಯೊಂದು ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರಿಗೆ ಸಂಸ್ಕಾರವನ್ನು ಸಹ ಕಲಿಸಬೇಕಾಗಿದೆ. ಇಂದು ಮೊಬೈಲ್‌ ಗೀಳಿನಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಇಳಕಲ್ಲನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ:

ಪ್ರತಿಯೊಂದು ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರಿಗೆ ಸಂಸ್ಕಾರವನ್ನು ಸಹ ಕಲಿಸಬೇಕಾಗಿದೆ. ಇಂದು ಮೊಬೈಲ್‌ ಗೀಳಿನಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಇಳಕಲ್ಲನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ಇಳಕಲ್ಲ ಪಟ್ಟಣದ ಇಬ್ರಾಹಿಂ ಮಸೀದಿಯಲ್ಲಿ ನಡೆದ ಎಸ್ಐಒದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿವಿಧ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎಸ್ಐಒ ಸಂಘಟನೆಯು ಉತ್ತಮ ಕಾರ್ಯಗಳನ್ನು ಮಾಡಿ ಜನರ ಮನಸನ್ನು ಗೆದ್ದಿದೆ ಎಂದು ಮೆಚ್ಚು ವ್ಯಕ್ತಪಡಿಸಿದರು.

ಅತಿಥಿಗಳಾಗಿ ಸಾಕಾ ಕಾಲೇಜ್‌ ಚೇರಮನ್ ವೆಂಕಟೇಶ ಸಾಕಾ ಮಾತನಾಡಿ, ಗುಣಮಟ್ಟದ ಶಿಕ್ಷಣ ಕೊಡುವ ಶಾಲೆ ಕಾಲೇಜುಗಳಿಗೆ ಇಂದು ಗೌರವ ಹಾಗು ಬೇಡಿಕೆ ಇದೆ. ಆದ್ದರಿಂದ ಪ್ರತಿಯೊಬ್ಬರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಸಮಾರಂಭದಲ್ಲಿ, ಎಸ್ಐಒ ರಾಜ್ಯ ಕಾರ್ಯಕಾರಿ ಮಹಮ್ಮದ್ ಪೀರ್ ಲಟಗೇರಿ, ಜಮಾತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಸಯೀದ್ ಅಹ್ಮದ್ ಕೊತ್ವಾಲ್, ವಲಯ ಸಂಚಾಲಕ ಮೆಹಬೂಬ್ ಆಲಂ ಬಡಗನ್ ಹಾಗೂ ಎಸ್ಐಒ ಸ್ಥಾನೀಯ ಅಧ್ಯಕ್ಷ ಆಸಿಫ್ ಹುಣಚಗಿ, ಎಸ್ಐಒಸದಸ್ಯರು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕೂಡ ಭಾಗವಹಿಸಿದ್ದರು.