ಸಾರಾಂಶ
ಕೊಪ್ಪಳ: ಮಕ್ಕಳೇ ನಿಜವಾದ ದೇವರು. ಶಿಕ್ಷಕರು ಅವರಿಗೆ ಕಲಿಸುವುದಕ್ಕಿಂತ ಅವರಿಂದಲೂ ಕಲಿಯುವುದು ಬಹಳ ಇದೆ ಎಂದು ಶಿಕ್ಷಕ ಸುರೇಶಬಾಬು ಚಿನ್ನೂರು ಹೇಳಿದ್ದಾರೆ.ತಾಲೂಕಿನ ಕನಕಾಪುರ ಗ್ರಾದಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಅವರು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಶಿಕ್ಷಕ ವೃತ್ತಿ ನನಗೆ ದೊರೆತಿದ್ದು ಪೂರ್ವಜನ್ಮದ ಪುಣ್ಯ. ಏನು ಅರಿಯದ ಮುಗ್ಧ ಮಕ್ಕಳನ್ನು ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ನಿರ್ಮಾಣ ಮಾಡಲು ಅವಕಾಶ ಸಿಕ್ಕಿತು. ಮಕ್ಕಳೊಂದಿಗೆ ಕಳೆದ ದಿನಗಳು ಯಾವಾಗಲು ಸ್ಮರಣೀಯ. ಶಾಲಾ ಮಕ್ಕಳೇ ನನಗೆ ನಿಜವಾದ ದೇವರು. ಅವರ ಸೇವೆ ಸಾರ್ಥಕತೆ ತಂದಿದೆ ಎಂದರು.ಈ ಸಂದರ್ಭದಲ್ಲಿ ಕ.ರಾ.ಪ್ರಾ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸನಗೌಡ ಪಾಟೀಲ, ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಕಮಲಾಪುರ, ತಾಲೂಕು ಘಟಕದ ಕೊಟ್ರಪ್ಪ ಗಡಗಿ, ಮಹೇಶ ಟಂಕಸಾಲಿ, ಗವಿಸಿದ್ಧಪ್ಪ ಕೆ., ಶಾಲೆಯ ಮುಖ್ಯಗುರು ಮಹೇಶ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹನುಮಪ್ಪ ನೆವಳಿ, ಹಿರಿಯ ಶಿಕ್ಷಕರಾದ ಬಾಳಪ್ಪ ತಳವಾರ, ಭರಮಪ್ಪ ಘೋರಿಯವರು, ನಿವೃತ್ತ ಶಿಕ್ಷಕರಾದ ಚನ್ನಬಸಪ್ಪ ಮೇಟಿ, ಸುರೇಶ ಚಿನ್ನೂರವರ ಕುಟುಂಬ, ಶಿಕ್ಷಕ ಬಳಗ ಇದ್ದರು.