- ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್‌ರಿಂದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ
---ಕನ್ನಡಪ್ರಭ ವಾರ್ತೆ ಹನೂರು
‘ಮಕ್ಕಳಿಗೆ ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.ತಾಲೂಕಿನ ದಿನ್ನಳ್ಳಿ ಉರ್ದು ಶಾಲೆಯಲ್ಲಿ ‘ದಿ ಯುನಿವರ್ಸ್ ಇನ್ ಎ ನಟ್ಷೆಲ್’ ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಲಾಗಿದ್ದ ಶಾಲಾ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ, ‘ಶಾಲಾ ಹಂತದಲ್ಲಿ ಮಕ್ಕಳಿಗೆ ಹೆಚ್ಚು ಹೆಚ್ಚು ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವೈಜ್ಞಾನಿಕ ಮನೋಭಾವನೆ ಹುಟ್ಟು ಹಾಕುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಆ ಮೂಲಕ ಮಕ್ಕಳನ್ನು ಮೂಢನಂಬಿಕೆಯಿಂದ ಹೊರ ತರಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ ಶಿಕ್ಷಕರು ಮತ್ತು ಮಕ್ಕಳಿಗೆ ಅಭಿನಂದನೆಗಳು ಎಂದು ತಿಳಿಸಿದರು.ಬ್ರಹ್ಮಾಂಡದ ತತ್ವ ಇನ್ನು ಸುಲಭ:
ಬ್ರಹ್ಮಾಂಡದ ಪ್ರಮುಖ ವೈಜ್ಞಾನಿಕ ತತ್ವಗಳನ್ನು ಮಕ್ಕಳಿಗೆ ಸರಳ ರೀತಿಯಲ್ಲಿ ಪರಿಚಯಿಸಲು ಉನ್ನತ ಗುಣಮಟ್ಟದ ಅಕ್ರಿಲಿಕ್ ದೃಶ್ಯಾವಳಿಗಳು, ಮಾಹಿತಿ ಫಲಕಗಳು ಹಾಗೂ ಸುಂದರವಾಗಿ ವಿನ್ಯಾಸಗೊಳಿಸಲಾದ ಮಾದರಿಗಳ ಮೂಲಕ ಸರಳವಾಗಿ ಪರಿಚಯಿಸಲಾಗುತ್ತಿದೆ. ವಿದ್ಯಾರ್ಥಿಗಳು ಸೌರಮಂಡಲ, ಗ್ಯಾಲಕ್ಸಿಗಳು, ಗ್ರಹಣಗಳು, ಭೂಮಿ ಮತ್ತು ಸೂರ್ಯನ ರಚನೆ ಸೇರಿ ಅನೇಕ ವಿಚಾರಗಳನ್ನು ಆತ್ಮವಿಶ್ವಾಸದಿಂದ ವಿವರಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು. ಇಂಥಹ ಕಾರ್ಯ ಇತರರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಉಜ್ಮಾ ಮೊಹಮ್ಮದಿ ಅವರ ದೃಢ ನಾಯಕತ್ವ ಮತ್ತು ಸಮರ್ಪಿತ ಸೇವೆಯನ್ನು ಎಲ್ಲರೂ ಮೆಚ್ಚಿಕೊಂಡರು.
ಈ ಸಂದರ್ಭದಲ್ಲಿ ಬಿಆರ್‌ಸಿ ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೆಗೌಡ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು,ಮುಖ್ಯೋಪಾಧ್ಯಾಯಿನಿ ಉಜ್ಮಾ ಮೊಹಮ್ಮದಿ, ಶಿಕ್ಷಕರಾದ ಪೊನ್ನು ಸ್ವಾಮಿ, ಅಭಿಲಾಷ, ಮಾಲಾಶ್ರೀ, ಹಾಗೂ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.---ಈ ವಿಜ್ಞಾನ ಪ್ರದರ್ಶನವು ಫೆ.12ಕ್ಕೆ ತಾಲ್ಲೂಕಿನ ಎಲ್ಲಾ ಶಾಲೆಗಳಿಗಾಗಿ ಮುಕ್ತವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ. ಅಕ್ಕ-ಪಕ್ಕದ ಶಾಲೆಯವರೂ ಇದರ ಲಾಭ ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು.
---11ಸಿಎಚ್‌ಎನ್11