ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರು ಹೋಬಳಿ ಮಟ್ಟದ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಮಳವಳ್ಳಿ ಕನಕದಾಸ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಲೆಯಲ್ಲಿ ಎರಡು ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇದ್ದರೂ ವಿಷಯ ಶಿಕ್ಷಕರು ಮತ್ತು ಸ್ಥಳೀಯ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಪಡೆದು ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಖುಷಿ ತಂದಿದೆ ಎಂದು ಮುಖ್ಯ ಶಿಕ್ಷಕಿ ಶಕುಂತಲಾ ಪ್ರಶಂಸೆ ವ್ಯಕ್ತಪಡಿಸಿದರು.
ಬಾಲಕರ ವಿಭಾಗದಲ್ಲಿ ವೈಯಕ್ತಿಕ ಅಥ್ಲೆಟಿಕ್ ವಿಭಾಗದಲ್ಲಿ 100 ಮೀ. ಓಟ ವಿಶ್ವಾಸ್ ಪ್ರಥಮ, 200 ಮೀ. ಓಟ ಲೇಖನ್ ಪ್ರಥಮ, ಮುತ್ತು ಕುಮಾರ್ ತೃತೀಯ, 400 ಮೀ ಓಟ ಯಶ್ವಂತ್ ಪ್ರಥಮ, 800 ಮೀ. ಓಟ ಎಚ್.ಆರ್.ಸುದೀಪ್ ಪ್ರಥಮ, ಎಸ್.ಎಂ.ಕಿಶೋರ್ ಗೌಡ ದ್ವೀತಿಯ, 1500 ಮೀಟರ್ ಓಟ ಎಚ್.ಎಸ್.ಚೇತನ್ ಪ್ರಥಮ, ಪ್ರಮೋದ್ ಪಟೇಲ್ ದ್ವಿತೀಯ, ಗುಂಡು ಎಸೆತ - ದರ್ಶನ್ ಪ್ರಥಮ, ಎತ್ತರ ಜಿಗಿತ - ಎಂ.ಎಸ್.ಕಿಶೋರ್ ಗೌಡ ಪ್ರಥಮ, ತ್ರಿವಿಧ ಜಿಗಿತ - ಪೂರ್ಣ ಪ್ರಜ್ಞಾ ತೃತೀಯ, ಭರ್ಜಿ ಎಸೆತ - ತರುಣ್ ತೃತೀಯ ಮತ್ತು ಕಬಡ್ಡಿ ಪ್ರಥಮ, ಖೋಖೋ ದ್ವಿತೀಯ, ಥ್ರೋ ಬಾಲ್ ದ್ವೀತಿಯ, 4×100 ರಿಲೇ ದ್ವಿತೀಯ, 4×400 ಪ್ರಥಮ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಅಥ್ಲೆಟಿಕ್ ವಿಭಾಗದಲ್ಲಿ 100 ಮೀ. ಓಟ ಎಸ್.ಕೆ.ಮಾನ್ಯ ದ್ವೀತಿಯ, 200 ಮೀ. ಓಟ ಮಾನ್ಯ ದ್ವೀತಿಯ ಲಿಖಿತ ತೃತೀಯ, 400 ಮೀ ಓಟ ತನುಶ್ರೀ ದ್ವಿತೀಯ, 400 ಮೀ. ಓಟ ತನುಶ್ರೀ ದ್ವೀತಿಯ, 800 ಮೀ. ಓಟ ಜೆ.ಆರ್. ಸಹನ ಪ್ರಥಮ, ಕೌಶಲ ದ್ವೀತಿಯ, 1500 ಮೀ.ಓಟ ಮೋನಿಕಾ ಪ್ರಥಮ, ಸಹನಾ ತೃತೀಯ, 3000 ಮೀ.ಓಟ ಕೌಶಲ್ಯ ಪ್ರಥಮ, ಮೊನಿಕಾ ದ್ವೀತಿಯ, ನಡಿಗೆ ಸ್ಪರ್ಧೆ ಮಾನಸ ದ್ವಿತೀಯ, ಲಕ್ಷ್ಮೀ ತೃತೀಯ, ತ್ರಿವಿಧ ಜಿಗಿತ ಮನಿಷ ಪ್ರಥಮ, ಶಾಟ್ ಪುಟ್ ತೇಜಶ್ವಿನಿ ಪ್ರಥಮ, ಚಕ್ರ ಎಸೆತ ಬಿಂದು ಪ್ರಥಮ, ಉದ್ದ ಜಿಗಿತ ತೇಜಸ್ವಿನಿ ತೃತೀಯ, 4×100 ರಿಲೇ ಪ್ರಥಮ, 4×400 ರಿಲೇ ಪ್ರಥಮ ಮತ್ತು ಕಬಡ್ಡಿ ಪ್ರಥಮ ಮತ್ತು ತ್ರೋ ಬಾಲ್ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾರೆ.
ಇದೇ ವೇಳೆ ಕ್ರೀಡೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಸ್ ಡಿಎಂಸಿ ಅಧ್ಯಕ್ಷ ನಂದೀಶ್, ಶಿಕ್ಷಕರಾದ ನಿಂಗೇಗೌಡ, ಸಿದ್ದರಾಜು, ಶಾಂತಮ್ಮ, ಕೃಷ್ಣಸ್ವಾಮಿ, ಕೆ.ಎಂ.ಬಸವರಾಜು, ಡಿ.ಪಿ.ಮಹೇಶ್, ಬಿ.ಎಸ್.ಮಹೇಶ್ ಕುಮಾರ್, ಶಿವಣ್ಣ, ಬಸಂತ್ ಕುಮಾರ್, ಕಾವ್ಯ, ಹನುಮಯ್ಯ, ಸೌಜನ್ಯ, ಸೇರಿದಂತೆ ಹಲವರು ಇದ್ದರು.