ಮಕ್ಕಳ ಸಂತೆ ಭೌದ್ಧಿಕ ವಿಕಸನಕ್ಕೆ ಮಕ್ಕಳು ಮಾಡುವ ಚುರುಕು, ಚಾಣಾಕ್ಷತನದ ವ್ಯವಹಾರ ಸಹಕಾರಿ. ಎಚ್ಚರಿಕೆಯ ವ್ಯವಹಾರದಿಂದ ಲಾಭ ನಷ್ಟ ಎಲ್ಲವನ್ನು ಎಳೆಯ ವಯಸ್ಸಿನಲ್ಲಿ ತಿಳಿಯಲಿದ್ದಾರೆ. ಇಂತಹ ವಿವಿಧ ಚಟುವಟಿಕೆಗಳು ಮಕ್ಕಳಿಗೆ ಕಲ್ಪಿಸುವುದರಿಂದ ಮಕ್ಕಳಲ್ಲಿ ಓದುವ ಹಂಬಲ ಹೆಚ್ಚಲಿದೆ.
ಕಿಕ್ಕೇರಿ:
ಎಳೆಯ ಮನಸ್ಸು ಕೇವಲ ಓದಿಗಷ್ಟೆ ಮೀಸಲಾಗದೆ, ವ್ಯಾವಹಾರಿಕ ಜ್ಞಾನಕ್ಕೂ ಬಳಕೆಯಾದರೆ ಭವಿಷ್ಯ ಉತ್ತಮವಾಗಲಿದೆ ಎಂದು ರಾಯಲ್ ಸ್ಕೂಲ್ ಕಾರ್ಯದರ್ಶಿ ಮಹೇಶ್ ಬಿ.ಗೌಡ ಹೇಳಿದರು.ಪಟ್ಟಣದ ರಾಯಲ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯಲ್ಲಿ ಮಾತನಾಡಿ, ಭೌದ್ಧಿಕ ವಿಕಸನಕ್ಕೆ ಮಕ್ಕಳು ಮಾಡುವ ಚುರುಕು, ಚಾಣಾಕ್ಷತನದ ವ್ಯವಹಾರ ಸಹಕಾರಿ. ಎಚ್ಚರಿಕೆಯ ವ್ಯವಹಾರದಿಂದ ಲಾಭ ನಷ್ಟ ಎಲ್ಲವನ್ನು ಎಳೆಯ ವಯಸ್ಸಿನಲ್ಲಿ ತಿಳಿಯಲಿದ್ದಾರೆ. ಇಂತಹ ವಿವಿಧ ಚಟುವಟಿಕೆಗಳು ಮಕ್ಕಳಿಗೆ ಕಲ್ಪಿಸುವುದರಿಂದ ಮಕ್ಕಳಲ್ಲಿ ಓದುವ ಹಂಬಲ ಹೆಚ್ಚಲಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಬದುಕುವ ಕಲೆಗೆ ಮಕ್ಕಳ ಸಂತೆ ಪೂರಕವಾಗಿದೆ. ಪೋಷಕರು ನಿತ್ಯಬಳಕೆ ವಸ್ತುಗಳನ್ನು ಖರೀದಿಸಲು ಮಕ್ಕಳನ್ನು ಅಂಗಡಿಗಳಿಗೆ ಕಳಿಸುವುದು ವಾಡಿಕೆ. ಕಳಪೆ ವಸ್ತು ಖರೀದಿಸುವುದು ತಪ್ಪಲಿದೆ. ಸರಿಯಾದ ಲೆಕ್ಕಾಚಾರ ಕೂಡ ಕಲಿಯಬಹುದಾಗಿದೆ ಎಂದು ಮಕ್ಕಳನ್ನು ಹುರಿದುಂಬಿಸಿದರು.ಮಕ್ಕಳು ಮನೆಯಿಂದಲೇ ಪೋಷಕರಿಂದ ತಯಾರಿಸಿಕೊಂಡು ತಂದಿದ್ದ ಗೋಬಿ ಮಂಚೂರಿ, ವಡೆಪಾವ್, ಚುರುಮುರಿ, ಬೋಂಡಾ, ಸಮೋಸಾ, ಚಕ್ಕುಲಿ, ನಿಪ್ಪಟ್ಟು, ಮದ್ದೂರು ವಡೆರೀತಿ ಬಗೆಬಗೆಯ ತಿನಿಸು, ಮೆಣಸಿನಕಾಯಿ, ಬದನೆಕಾಯಿ, ಪಪ್ಪಾಯಿ, ಕೀರೆಸೊಪ್ಪು, ಪಾಲಾಕ್ ರೀತಿಯ ತರಾವರಿ ಸೊಪ್ಪು, ತರಕಾರಿ ತಂದು ಖುಷಿಯಿಂದ ಮಾರಾಟ ಮಾಡಿದರು.
ಪಾಲಕರು, ಶಿಕ್ಷಕರು, ನಾಗರೀಕರುಖುಷಿಯಿಂದ ಮಕ್ಕಳು ತಂದು ಜೋಡಿಸಿಟ್ಟಿದ್ದ ಸಂತೆಯಲ್ಲಿ ಚೌಕಾಸಿ ಮಾಡಿ ಖರೀದಿಸಿ ಉತ್ತೇಜಿಸಿದರು. ವ್ಯವಸ್ಥಾಪಕ ದಿನೇಶ್, ಮುಖ್ಯಶಿಕ್ಷಕಿ ಅಂಬಿಕಾ, ಮೇಘನಾ, ಅರ್ಪಿತಾ, ಗೀತಾ, ದಿವ್ಯಾ, ಕಾಂತಮಣಿ ಭಾಗವಹಿಸಿದ್ದರು.ಜ.13 ರಿಂದ 18ರವರೆಗೆ ಭೈರವೈಕ್ಯ ಶ್ರೀಗಳ ಜಯಂತ್ಯುತ್ಸವ, ಸಂಸ್ಮರಣಾ ಮಹೋತ್ಸವ
ನಾಗಮಂಗಲ:ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜ.13ರಿಂದ 18ರ ವರೆಗೆ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವ ನಡೆಯಲಿದೆ.
ಶ್ರೀಕ್ಷೇತ್ರದ ಬಿಜಿಎಸ್ ಸಭಾಂಗಣದಲ್ಲಿ ಆರು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ವಹಿಸುವರು. ಜ.13 ಮತ್ತು 14 ರಂದು ಹೋಮ, ಹವನಾದಿ ಧಾರ್ಮಿಕ ಕಾರ್ಯಕ್ರಮಗಳು ಮತ್ತು ವಿವಿಧ ಪೂಜಾ ಮಹೋತ್ಸವ ನೆರೆವೇರಲಿದೆ. ಜ.14ರಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಾರ್ಯಾಗಾರ ನಡೆಯಲಿದೆ.ಜ.15ರಂದು ಹಿರಿಯ ವಿದ್ಯಾರ್ಥಿಗಳ ಸಮಾವೇಶ. ಜ.16ರಂದು ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ. ಆ.17 ರಂದು ರಾಜ್ಯ ಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶ ನಡೆಯಲಿದೆ. ಜ.18 ರಂದು ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ, ಸಂತ ಭಕ್ತ ಸಂಗಮ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವವು ಬಹಳ ಶ್ರದ್ಧಾಭಕ್ತಿಯಿಂದ ಜರುಗಲಿದೆ.
ಈ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗುರುದೇವತಾ ದರ್ಶನಾಶೀರ್ವಾದ ಪಡೆದು ಪುಣ್ಯ ಭಾಜನರಾಗಬೇಕೆಂದು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.