ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕಾಮತ್ ಹೋಟೆಲ್‌ನ ಹಿಂಭಾಗದಲ್ಲಿನ ಒಳಚರಂಡಿ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ಐದು ನವಜಾತ ನಾಯಿ ಮರಿಗಳನ್ನು ಇಲ್ಲಿನ ಮಕ್ಕಳಾದ ಪ್ರಸಾದ.ಬಿ, ಶ್ಲೋಕ, ವೈಶು, ನಕ್ಷ, ದೀಪಾಲಿ, ಸೀಮಾಜಿ, ಕೀರ್ತಿ ರಕ್ಷಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕಾಮತ್ ಹೋಟೆಲ್‌ನ ಹಿಂಭಾಗದಲ್ಲಿನ ಒಳಚರಂಡಿ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ಐದು ನವಜಾತ ನಾಯಿ ಮರಿಗಳನ್ನು ಇಲ್ಲಿನ ಮಕ್ಕಳಾದ ಪ್ರಸಾದ.ಬಿ, ಶ್ಲೋಕ, ವೈಶು, ನಕ್ಷ, ದೀಪಾಲಿ, ಸೀಮಾಜಿ, ಕೀರ್ತಿ ರಕ್ಷಿಸಿದ್ದಾರೆ.ತಮ್ಮ ಜೀವವನ್ನೂ ಲೆಕ್ಕಿಸದೆ ಮಳೆಯಲ್ಲಿಯೇ ಧಾವಿಸಿ ನಾಯಿ ಮರಿಗಳನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಈ ಮಕ್ಕಳ ಧೈರ್ಯವನ್ನು ಎಲ್ಲರೂ ಮೆಚ್ಚಿದ್ದಾರೆ. ಜತೆಗೆ ಮಕ್ಕಳ ಕರುಣೆಯಿಂದಾಗಿ ಐದು ಮುಗ್ಧ ಜೀವಗಳು ಬದುಕುಳಿದಿವೆ. ಮಕ್ಕಳ ಈ ಸಾಹಸ ಕಾರ್ಯದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ.ಈ ಭೂಮಿ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಕಷ್ಟದಲ್ಲಿರುವ ಪ್ರತಿ ಜೀವಿಯನ್ನು ರಕ್ಷಿಸಿ, ಬದುಕು ಕಲ್ಪಿಸುವುದೇ ನಿಜವಾದ ಮಾನವೀಯತೆ. ಅಂತ ಮಾನವೀಯತೆಯನ್ನು ಮೆರೆದ ಈ ಪುಟ್ಟ ಪುಟಾಣಿಗಳ ಕಾರ್ಯ ಶ್ಲಾಘನೀಯ. ರಾಜ್ಯ ಸಾರಿಗೆ ಬಸ್‌ಗಳ ಹಿಂಭಾಗದ ಗಾಜುಗಳ ಮೇಲೆ ಪ್ರಾಣಿಗಳ ಮೇಲೆ ಕರುಣೆ ಇರಲಿ ಎನ್ನುವ ಘೋಷವಾಕ್ಯ ಅಕ್ಷರಶಃ ಸತ್ಯವಾಗಿಸಿದವರು ಈ ನಮ್ಮ ಹೆಮ್ಮೆಯ ಪುಟಾಣಿಗಳು.
-ಡಾ.ಅಶ್ವಿನಿ ಹಿರೇಮಠ, ಮೆದುಳು ಆ್ಯಂಡ್ ನರರೋಗ ತಜ್ಞರು, ಜೀವನಜ್ಯೋತಿ ಹೃದಯ ಮತ್ತು ಮೆದುಳಿನ ಕ್ಲಿನಿಕ್ ವಿಜಯಪುರ.