-ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ

---

ಕನ್ನಡಪ್ರಭ ವಾರ್ತೆ ಹುಣಸಗಿ

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಧ್ವಜ ಅಂಗೀಕಾರ ದಿನ ಆಚರಣೆ ಮಾಡಲಾಯಿತು.

ತಾಲೂಕ ಭಾರತ್ ಸೇವಾದಳ ಅಧಿನಾಯಕ ಬಸನಗೌಡ ಬಿರಾದಾರ್ ಮಾತಾನಾಡಿ, ರಾಷ್ಟ್ರಧ್ವಜವು 1947 ಜುಲೈ 22ರಂದು ಭಾರತದ ರಾಷ್ಟ್ರೀಯ ಧ್ವಜವಾಗಿ ಅಂಗೀಕಾರವಾದ ದಿನ ಈ ದಿನ ದೇಶಭಕ್ತಿ, ಏಕತೆ, ಸ್ವತಂತ್ರ ಭಾರತದ ನೆನಪಾಗುವ ದಿನ. ಕೇಸರಿ ಬಣ್ಣ ತ್ಯಾಗ, ಬಿಳಿ ಬಣ್ಣ ಶಾಂತಿ, ಹಸಿರು ಬಣ್ಣ ಸಮೃದ್ಧಿಯ ಸಂಕೇತವಾಗಿ ತಿಳಿಸುತ್ತದೆ. ಮಧ್ಯದಲ್ಲಿರುವ ಅಶೋಕ ಚಕ್ರ ಅಭಿವೃದ್ಧಿಯ ನಿರಂತರ ಪ್ರಗತಿಯ ಸಂಕೇತವಾಗಿದೆ


ಮಕ್ಕಳು ಧ್ವಜದ ಬಗ್ಗೆ, ರಾಷ್ಟ್ರದ ಬಗ್ಗೆ, ದೇಶದ ಬಗ್ಗೆ ರಾಷ್ಟ್ರಗೀತೆಯ ಬಗ್ಗೆ ಹೆಚ್ಚು ತಿಳಿದುಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದು ಹೇಳಿದರು‌.

ಮುಖ್ಯೋಪಾಧ್ಯ ವಿಠಲ್ ಬಿ ಚೌಹಾನ್ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ದೇಶಾಭಿಮಾನ ಮತ್ತು ರಾಷ್ಟ್ರಾಭಿಮಾನ ಇರಬೇಕು ರಾಷ್ಟ್ರಧ್ವಜದ ರಾಷ್ಟ್ರಗೀತೆ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು.

ವಿದ್ಯಾರ್ಥಿ ಜೀವನದಲ್ಲಿಯೇ ದೇಶ ಸೇವೆ ಈಶ ಸೇವೆ ಎಂಬುದನ್ನು ಅರಿತು ಈ ದೇಶ ಪ್ರೇಮವನ್ನು ಬೆಳೆಸಿಕೊಳ್ಳ ಬೇಕೆಂಬ ಆಶಯ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಶರಣಗೌಡ ಬಾನಾಳ್, ಸರ್ಕಾರಿ ನೌಕರರ ಸಂಘದ ಖಜಾಂಚಿ ಭೀಮಣ್ಣ ವಾಲ್ಮೀಕಿ, ಜಿಲ್ಲಾ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣ ಗುಡಿಹಾಳ್, ಮಶಾಕ ಯಾಳಗಿ, ನಿಂಗಪ್ಪ ಚೌಹಾಣ್ ಗುರುರಾಜ್ ಜೋಶಿ, ಸೋಮನ್ ಗೌಡ ಬಳವಾಟ, ವಿಜಯಲಕ್ಷ್ಮಿ ಕುಂಬಾರ್, ಲಾಲ್‌ ಬಿಎಂ ಖಾಜಿ, ಲಲಿತಾಬಾಯಿ ಮಠ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳೆಲ್ಲರೂ ಭಾಗವಹಿಸಿದ್ದರುತಾಲೂಕ ಭಾರತ ಸೇವಾದಳದ ಕಾರ್ಯದರ್ಶಿ ನಾಗನಗೌಡ ಪಾಟೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.