ಮಕ್ಕಳು ತಮ್ಮನ್ನು ಯಾರಿಗೂ ಹೋಲಿಸಿಕೊಳ್ಳದಿರಿ: ಲತಾ

| Published : Jun 24 2024, 01:30 AM IST / Updated: Jun 24 2024, 01:31 AM IST

ಸಾರಾಂಶ

ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಸಹ್ಯಾದ್ರಿ ಸಹೋದಯ ಶಾಲಾ ಸಂಕಿರಣ ಆಶ್ರಯದಲ್ಲಿ ಸಾಹಿತ್ಯದ ಚಟುವಟಿಕೆಗಳ ಸ್ಪರ್ಧೆಯನ್ನು ಶಾಲಾ ಸಂಕಿರ್ಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲತಾ ಉದ್ಘಾಟಿಸಿ, ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಶ್ರೇಷ್ಠ ಅನುಭವದ ಕಲಿಕೆಗಾಗಿ ಮಕ್ಕಳು ವೀಕ್ಷಿಸುವುದನ್ನು ಕಲಿಯಬೇಕು ಎಂದು ಜ್ಞಾನದೀಪ ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ.ಹೆಗಡೆ ಹೇಳಿದರು.

ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಸಹ್ಯಾದ್ರಿ ಸಹೋದಯ ಶಾಲಾ ಸಂಕಿರಣ ಆಶ್ರಯದಲ್ಲಿ ಸಾಹಿತ್ಯದ ಚಟುವಟಿಕೆಗಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸಹ್ಯಾದ್ರಿ ಸಹೋದಯ ಶಾಲಾ ಸಂಕಿರ್ಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಲತಾ ಮಾತನಾಡಿ, ಶಾಲೆಯಲ್ಲಿ ಪ್ರತಿ ತರಗತಿಗಳು ವಿಭಿನ್ನ. ಮಕ್ಕಳು ತಮ್ಮನ್ನು ಯಾರ ಜೊತೆ ಯೂ ಹೋಲಿಸಿಕೊಳ್ಳಬಾರದು. ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುವುದೇ ಅಂತಿಮ ಗುರಿಯಲ್ಲ. ಯಾವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತೇವೆಯೋ ಅದರಲ್ಲಿ ಸಾಧಕರಾಗಿ ಹೊರಹೊಮ್ಮುವುದೇ ಮುಖ್ಯ ಎಂದರು.

ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಪೋದಾರ್ ಶಾಲೆಯ ಅದಿತಿ ಡಿ.ಆರ್.ಪ್ರಥಮ, ಬಿಜಿಎಸ್ ಶಾಲೆಯ ಮಾನ್ಯ ವಿ. ದ್ವಿತೀಯ, ಜ್ಞಾನದೀಪ ಶಾಲೆಯ ಅಧಮ್ಯ ತೃತೀಯ ಸ್ಥಾನ ಪಡೆದರು. ಕಥಾ ನಿರೂಪಣೆ ಸ್ಪರ್ಧೆಯಲ್ಲಿ ಸೆಂಟ್ ನಾರ್ಬೆಟ್ ಶಾಲೆ ಆದ್ಯ ಎಸ್. ಶೆಟ್ಟಿ ಪ್ರಥಮ, ಜ್ಞಾನದೀಪ ಶಾಲೆಯ ಸುನಿಧಿ ದ್ವಿತೀಯ, ಡಿ.ಸಿ.ಎಮ್ ಶಾಲೆಯ ಆಕ್ಸ ವಿ.ವಿಜು ತೃತೀಯ ಸ್ಥಾನ ಪಡೆದರು.

ಕನ್ನಡ ಭಾಷಣ ಸ್ಪರ್ಧೆಯಲ್ಲಿ ಆರಾಧನಾ ಶಾಲೆಯ ಪ್ರತೀಕ್ಷಾ ಪ್ರಥಮ, ಡಿ.ಸಿ.ಎಮ್.ಸಿ ಶಾಲೆಯ ಅದಿತಿಗೌಡ ದ್ವಿತೀಯ, ಜ್ಞಾನದೀಪ ಶಾಲೆಯ ಇಂಚರಾ ತೃತೀಯ ಸ್ಥಾನ ಪಡೆದಿದ್ದಾರೆ. ಕವನ ವಾಚನ ಸ್ಪರ್ಧೆಯಲ್ಲಿ ಜ್ಞಾನದೀಪ ಶಾಲೆಯ ರಿಷಿತಾ ಭಟ್ ಪ್ರಥಮ, ನ್ಯಾಶನಲ್ ಪಬ್ಲಿಕ್ ಶಾಲೆಯ ದಿಯಾ ಪಿ. ದ್ವಿತೀಯ, ಪೋದಾರ್ ಶಾಲೆಯ ಪೌಲಮಿಪಾತ್ರ ತೃತೀಯ ಸ್ಥಾನ ಪಡೆದಿದ್ದಾರೆ.

ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಬಿ.ಜಿ.ಎಸ್ ಶಾಲೆಯ ಮಧುರಾ ಎಂ ಎಸ್. ಪ್ರಥಮ, ನ್ಯಾಶನಲ್ ಪಬ್ಲಿಕ್ ಶಾಲೆಯ ಶಿಶಿರ್ ವಿ ಅಕ್ಕಿ ದ್ವಿತೀಯ, ಪೋದಾರ ಶಾಲೆಯ ಶೌರ್ಯ ಕೆ ಡಿ ತೃತೀಯ ಸ್ಥಾನ ಪಡೆದಿದ್ದಾರೆ.

ಚಿತ್ರ ಕಲೆ ಸ್ಪರ್ದೇಯಲ್ಲಿ ಅಕ್ಷರ ಶಾಲೆಯ ಎನ್ವಿತಾ ವಿ ಪ್ರಥಮ, ಎನ್.ಪಿ.ಎಸ್ ಶಾಲೆಯ ಅದ್ವಿಕ್ ಶರ್ಮ ಕೆ.ಡಿ.ದ್ವಿತೀಯ, ಜ್ಞಾನದೀಪ ಶಾಲೆ ವನೀಷಾ ಜೈನ್ ತೃತೀಯ ಪಡೆದಿದ್ದಾರೆ. ಜ್ಞಾನ ದೀಪ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನೀಲಕಂಠಮೂರ್ತಿ, ಉಪ ಪ್ರಾಂಶುಪಾಲ ಡಾ.ರೆಜಿಜೋಸೇಫ್, ಉಪಪ್ರಾಂಶುಪಾಲೆ ವಾಣಿಕೃಷ್ಣಪ್ರಸಾದ್ ಇತರರಿದ್ದರು.