ಅಗ್ರಶ್ರೇಣಿಯಲ್ಲಿ ಪಾಸಾದ ಮಕ್ಕಳಿಗೆ ಪೂಜ್ಯರಿಂದ ಸನ್ಮಾನ

| Published : May 15 2024, 01:31 AM IST

ಸಾರಾಂಶ

ಭಾಲ್ಕಿಯ ಗುರುಪ್ರಸಾದ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಗ್ರಶೇಣಿಯಲ್ಲಿ ಶಾಲೆಗೆ ಪ್ರಥಮ ಬಂದಿರುವ ಸುಶ್ಮಿತಾ ಜೈರಾಜ ಖಂಡ್ರೆ, ಶ್ರದ್ಧಾ ಮಾರುತಿ ಹಾಗೂ ಶಿವಾಂಗಿನಿ ಮಹಾದೇವ ವಾಲೆ ಅವರನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೂಜ್ಯ ಗುರುಬಸವ ಪಟ್ಟದ್ದೇವರು ಆರ್ಶೀವದಿಸಿ ಸನ್ಮಾನಿಸಿದರು.

ಆಸಕ್ತಿ ವಹಿಸಿ ಓದಿದ ಮಕ್ಕಳಿಂದ ಸಂಸ್ಥೆ, ಶಾಲೆ, ಹೆತ್ತ ತಂದೆ-ತಾಯಿಗಳಿಗೆ ಕೀರ್ತಿ: ಗುರುಬಸವ ಪಟ್ಟದ್ದೇವರು

ಕನ್ನಡಪ್ರಭ ವಾರ್ತೆ ಭಾಲ್ಕಿ

ಇಲ್ಲಿನ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಗುರುಪ್ರಸಾದ ಪ್ರೌಢಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಅಗ್ರಶೇಣಿಯಲ್ಲಿ ಶಾಲೆಗೆ ಪ್ರಥಮ ಬಂದಿರುವ ಸುಶ್ಮಿತಾ ಜೈರಾಜ ಖಂಡ್ರೆ, ಶ್ರದ್ಧಾ ಮಾರುತಿ ದ್ವಿತೀಯ ಹಾಗೂ ಶಿವಾಂಗಿನಿ ಮಹಾದೇವ ವಾಲೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೂಜ್ಯ ಗುರುಬಸವ ಪಟ್ಟದ್ದೇವರು ಆರ್ಶೀವದಿಸಿ ಸನ್ಮಾನಿಸಿದರು.

ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂಬಂತೆ, ಮಕ್ಕಳು ಓದಿನಲ್ಲಿ ಆಸಕ್ತಿ ವಹಿಸಿ ಸಂಸ್ಥೆಗೆ ಹಾಗೂ ಶಾಲೆಗೆ ಮತ್ತು ಹೆತ್ತ ತಂದೆ-ತಾಯಿಗಳಿಗೆ ಕೀರ್ತಿ ತಂದಿದ್ದಾರೆ.

ಈ ಶಾಲೆಯಲ್ಲಿ ಬಡವ, ಅನಾಥ, ನಿರ್ಗತಿಕ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಅತಿ ಹಿಂದುಳಿದ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಪೂಜ್ಯರು ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರ ಸದುಪಯೋಗ ತೆಗೆದುಕೊಂಡು ಮಕ್ಕಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಕಲಿತ ಮಕ್ಕಳು ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದು ಉನ್ನತ ಹುದ್ದೆಯಲ್ಲಿದ್ದಾರೆ. ಮಕ್ಕಳ ಸರ್ವಾಂಗೀಣ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಕ ಸಿಬ್ಬಂದಿಯವರು ಶ್ರಮಿಸುತ್ತಿದ್ದಾರೆ. ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿ ಬೆಳೆಯಲಿ. ಇನ್ನೂ ಅವರು ಉತ್ತರೋತ್ತರವಾಗಿ ಬೆಳೆಯಲಿ. ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನೂ ಹೆಚ್ಚು ಬೆಳೆದು ರಾಜ್ಯಕ್ಕೆ ರಾಷ್ಟ್ರಕ್ಕೆ ಕೀರ್ತಿ ತರುವಂತರಾಗಲೆಂದು ಪೂಜ್ಯರು ನುಡಿದರು. ಮುಖ್ಯಗುರು ಬಾಬು ಬೆಲ್ದಾಳ ಸ್ವಾಗತಿಸಿದರು.