ಆದಿಮದಲ್ಲಿ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

| Published : May 15 2024, 01:31 AM IST

ಸಾರಾಂಶ

ಕೋಲಾರ ಜಿಲ್ಲೆಯ ಸುಮಾರು ನೂರೈವತ್ತು ಮಕ್ಕಳು ನಿಸರ್ಗದ ಮಡಿನಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪೋಷಕರು ಆದಿಮದಲ್ಲಿ ಹದಿಮೂರು ದಿನಗಳ ಕಾಲ ಬಿಟ್ಟು ಹೋದಾಗಿಂದ ಮಕ್ಕಳು ತಮ್ಮ ಪೋಷಕರನ್ನು ನೆನಪಿಸಿಕೊಳ್ಳದೆ ಆದಿಮದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕೋಲಾರಡೊಳ್ಳು ಕಲಿಯುವವರು ಒಂದು ಕಡೆ, ಮತ್ತೊಂದು ಜಾಗದಲ್ಲಿ ಕಂಸಾಳೆ ಕಲಿಕೆ, ಮಗದೊಂದು ಮಗ್ಗುಲಲ್ಲಿ ಮಣ್ಣಿನಲ್ಲಿ ಕಲೆ ಕಲಿಯುವ ಚಿಣ್ಣರು, ಮುಂದೆ ಹೋದರೆ ಕೋಲಾಟ, ಚಕ್ಕೆ ಕೋಲಾಟ ಹೇಳಿ ಕೊಡುವವರು, ತುಡುಮು ಕಲಿಯುವ ಮಕ್ಕಳು. ಹೀಗೆ ಕೋಲಾರ ತಾಲೂಕಿನ ಶಿವಗಂಗೆ ಸ್ಥಳವು ಆದಿಮ ಚಿಣ್ಣರ ಕಲರವದಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆದಿಮದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆರಂಭವಾಗಿದೆ, ಇದಕ್ಕೆ ಜನಪದ ಚುಕ್ಕಿ ಮೇಳ ಎಂದು ಶೀರ್ಷಿಕೆ ಇಟ್ಟು ಜನಪದ ಕಲೆಗಳನ್ನು ಕಲಿಸುವಂತಹ ನಿಟ್ಟಿನಲ್ಲಿ ಆದಿಮಾದ ಗುರುಗಳು ತೊಡಗಿಸಿಕೊಂಡಿದ್ದಾರೆ.

ಅವಿಭಜಿತ ಕೋಲಾರ ಜಿಲ್ಲೆಯ ಸುಮಾರು ನೂರೈವತ್ತು ಮಕ್ಕಳು ಯಾವುದೇ ಭೇದಭಾವ ಇಲ್ಲದೆ ನಿಸರ್ಗದ ಮಡಿನಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪೋಷಕರು ಆದಿಮದಲ್ಲಿ ಹದಿಮೂರು ದಿನಗಳ ಕಾಲ ಬಿಟ್ಟು ಹೋದಾಗಿಂದ ಮಕ್ಕಳು ತಮ್ಮ ಪೋಷಕರನ್ನು ನೆನಪಿಸಿಕೊಳ್ಳದೆ ಪರಿಪೂರ್ಣವಾಗಿ ಆದಿಮದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಮೊಬೈಲ್, ಟಿವಿ, ಇತರ ಒತ್ತಡಗಳಿಲ್ಲದೆ ಶೈಕ್ಷಣಿಕ ದಿನಗಳ ನಡುವೆ ನೆಮ್ಮದಿಯಾಗಿ, ಮುಕ್ತವಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಆದಿಮಾದಲ್ಲಿ ಮಕ್ಕಳಿಗೆ ಮುಕ್ತವಾದ ಮನೆಯ ವಾತಾವರಣ, ಶಾಲಾ ವಾತಾವರಣ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಿಕೊಟ್ಟಿದೆ. ಪ್ರತಿದಿನ ಮುಂಜಾನೆ ಮಕ್ಕಳನ್ನು ಬೆಟ್ಟ ಗುಡ್ಡಗಳ ನಡುವೆ ನಡೆಸಿ ಮಕ್ಕಳೇ ಅವುಗಳನ್ನು ಪರಿಚಯ ಮಾಡಿಕೊಳ್ಳುವಂತಹ ರೀತಿಯ ನಡೆ ಕಾಣಬಹುದು. ಬದುಕು ಬರಿ ಓದುವುದು ಮಾತ್ರವೇ ಅಲ್ಲ ಓದಿನ ಜೊತೆಗೆ ಸಂಬಂಧಗಳು ಮುಖ್ಯ ಎಂಬುದನ್ನು ಇಲ್ಲಿ ಮನವರಿಕೆ ಮಾಡಿಕೊಡಲಾಗುತ್ತಿದೆ.

ಕಲಾ ತಂಡದ ತರಬೇತುದಾರರು ತಳಿ ಮಂಜು, ಕ್ಲೆ ಮಾಡಲಿಂಗ್, ಚಕ್ಕೆ ಕೋಲಾಟ ಕೊಲದೇವಿ ನಾರಾಯಣಸ್ವಾಮಿ. ತಮಟೆ :ಜಯಮಂಗಲ ಸಂದೀಪ್. ತುಡುಮು. ನಗಾರಿ ಹರೀಶ ಆದಿಮ ಹಲಾಯಿ ನೃತ್ಯ ವಿಸ್ವಾನಾಥ ನಾಯಕ ಅಮಾಸ. ಡೊಳ್ಳು ಚಲಪಾತಿ ಕಂಸಾಳೆ ಈ ಧರೆ ಪ್ರಕಾಶ್. ಚಿತ್ರಕಲೆ ರಮೇಶ್,ಕಾಳಿದಾಸ ,ಡಿ.ನಾರಾಯಣಸ್ವಾಮಿ. ತಟ್ಟೆ ನೃತ್ಯ ಪ್ರೀಡಾ ಮಂಜು. ಹಾಡುಗಾರಿಕೆ ಮೋತಕಪಲ್ಲಿ ರತ್ನಮ್ಮ, ಡಿ.ಆರ್.ರಾಜಪ್ಪ, ಗಜಾನನ ಟಿ.ನಾಯಕ್ ವಿದ್ಯಾರ್ಥಿಗಳಿಗೆ ಕಲಾ ತರಬೇತಿ ನೀಡುತ್ತಿದ್ದಾರೆ.