ಉತ್ತಮ ಸಾಧನೆಗೆ ಸ್ನೇಹಿತರ ಆಯ್ಕೆ ಅತಿ ಮುಖ್ಯ: ವೇಣುಗೋಪಾಲ

| Published : Mar 17 2024, 01:49 AM IST

ಉತ್ತಮ ಸಾಧನೆಗೆ ಸ್ನೇಹಿತರ ಆಯ್ಕೆ ಅತಿ ಮುಖ್ಯ: ವೇಣುಗೋಪಾಲ
Share this Article
  • FB
  • TW
  • Linkdin
  • Email

ಸಾರಾಂಶ

ಗುರುಮಠಕಲ್‌ದ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಂಸ್ಥೆ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಪ್ರೌಢಶಾಲಾ ಹಂತದ ನಂತರದಲ್ಲಿ ಉತ್ತಮ ಸಾಧನೆ ನಾವು ಪಡೆದುಕೊಳ್ಳಬೇಕಾಗಿದರೆ ಸ್ನೇಹಿತರ ಆಯ್ಕೆ ಅತಿ ಮುಖ್ಯವಾಗಿದೆ ಎಂದು ಯಾದಗಿರಿ ಹಾಗೂ ರಾಯಚೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪಿ. ವೇಣುಗೋಪಾಲ ಹೇಳಿದರು.

ಸೈದಾಪುರ ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ತಂದೆ-ತಾಯಿ, ಗುರುಗಳನ್ನು ಗೌರವದಿಂದ ಕಾಣುವರು ಮನುಷ್ಯನಾಗಿ ಪ್ರಕೃತಿ ಎದುರಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತಾನೆ. ನಮಗೆ ಸಮಾನರು, ಧೀರರೊಡನೆ ಸ್ಪರ್ಧೆ ಮಾಡಿದಾಗ ಮಾತ್ರ ನಾವು ಜಾಗೃತರಾಗುತ್ತೇವೆ ಎಂದರು.

ಸಂಸ್ಥೆ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಮಾತನಾಡಿ, ಜೀವನದಲ್ಲಿ ಯಾವುದೂ ಅಸಾಧ್ಯವಾದುದಲ್ಲ. ಕೀಳಿರಿಮೆ ದೂರವಾಗಿಸಿಕೊಂಡು ಉನ್ನತ ಗುರಿಯೊಂದಿಗೆ ಕಠಿಣ ಪರಿಶ್ರಮದಿಂದ ಪ್ರಯತ್ನ ಮಾಡಿದರೆ ಉತ್ತಮ ಸಾಧನೆ ನಮ್ಮದಾಗುತ್ತದೆ. ಪ್ರತಿಯೊಬ್ಬರಿಗೂ ಸಂಸ್ಕಾರ ಅತಿ ಮುಖ್ಯವಾಗಿದೆ. ಇದಕ್ಕಾಗಿ ಪುಸ್ತಕ ಸಂಸ್ಕೃತಿ ನಮ್ಮದಾಗಬೇಕು ಎಂದು ಹೇಳಿದರು.

ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಸಹ ಕಾರ್ಯದರ್ಶಿ ಕೆ.ಬಿ. ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಸಿದ್ರಾಮಪ್ಪಗೌಡ ಗೊಂದಡೆಗಿ, ಸುರೇಶ ಆನಂಪಲ್ಲಿ, ಪ್ರಾಂಶುಪಾಲರಾದ ಹಂಪಣ್ಣ ಸಜ್ಜನಶೆಟ್ಟಿ, ವಿಶ್ವನಾಥರೆಡ್ಡಿ ಪಾಟೀಲ್ ಕಣೇಕಲ್, ಸಂಗಾರೆಡ್ಡಿ, ರಾಚಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಇತರರಿದ್ದರು.

ಪದ್ಮಾ, ರೇಣುಕಾ ಪ್ರಾರ್ಥಾನಾಗೀತೆ ಹಾಡಿದರು. ಆಯುನ ಅಲಿ ಸ್ವಾಗತಿಸಿ, ತಾಯಮ್ಮ ನಿರೂಪಿಸಿ, ಕಾವೇರಿ ವಂದಿಸಿದರು.