ಪೌರ ಕಾರ್ಮಿಕರು ತಮ್ಮ ಆರೋಗ್ಯಕ್ಕೂ ಆದ್ಯತೆ ನೀಡಬೇಕು: ಪ್ರಶಾಂತಶೆಟ್ಟಿ

| Published : Jul 21 2024, 01:27 AM IST

ಪೌರ ಕಾರ್ಮಿಕರು ತಮ್ಮ ಆರೋಗ್ಯಕ್ಕೂ ಆದ್ಯತೆ ನೀಡಬೇಕು: ಪ್ರಶಾಂತಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಪಟ್ಟಣವನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಯೂ ಗಮನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಸಲಹೆ ನೀಡಿದರು.

- ಪಟ್ಟಣ ಪಂಚಾಯಿತಿಯಿಂದ ಪೌರ ಕಾರ್ಮಿಕರಿಗೆ ರೈನ್ ಕೋಟು ,ಬೂಡ್ಸ್‌, ಹ್ಯಾಂಡ್ ಗ್ಲೋಸ್ ವಿತರಣೆ

--

- ಡೆಂಘೀ ಹಿನ್ನಲೆ ಪೌರ ಕಾರ್ಮಿಕರು ಜಾಗೃತಿ ವಹಿಸಿ

- ಪೌರ ಕಾರ್ಮಿಕರು ಬೂಡ್ಸ್‌, ಹ್ಯಾಂಡ್‌ ಗ್ಲೌಸ್‌ ಧರಿಸಿ ಕೆಲಸ ನಿರ್ವಹಿಸ

- ಸಂತೆ , ಮೀನು ಮಾರುಕಟ್ಟೆ , ಜನ ನಿಬಿಡ ಪ್ರದೇಶಗಳಲ್ಲೂ ಸ್ವಚ್ಛತೆ ಅಗತ್ಯ

- ಕೆರೆಗೆ ಕಸ ಹಾಕುವವರನ್ನು ಪತ್ತೆ ಹಚ್ಚಿ ಕನಿಷ್ಟ 5 ಸಾವಿರ ರು.ವರೆಗೆ ದಂಡ

ಕನ್ನಡಪ್ರಭವಾರ್ತೆ, ನರಸಿಂಹರಾಜಪುರ

ಪಟ್ಟಣವನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಯೂ ಗಮನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಸಲಹೆ ನೀಡಿದರು.

ಶನಿವಾರ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಿಗೆ ರೈನ್‌ ಕೋಟು, ಬೂಡ್ಸ್‌, ಹ್ಯಾಂಡ್‌ ಗ್ಲೌಸ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಈ ವರ್ಷ ಎಲ್ಲೆಡೆ ಡೆಂಘೀ ಜ್ವರ ವ್ಯಾಪಿಸಿರುವುದರಿಂದ ಪೌರ ಕಾರ್ಮಿಕರು ಬೂಡ್ಸ್‌, ಹ್ಯಾಂಡ್‌ ಗ್ಲೌಸ್‌ ಧರಿಸಿ ಕೆಲಸ ನಿರ್ವಹಿಸ ಬೇಕು. ಹೆಚ್ಚು ಜಾಗೃತಿ ವಹಿಸಬೇಕು. ಸಾರ್ವಜನಿಕರು ಎಲ್ಲಾ ಕಡೆ ಕಸ ಬಿಸಾಡದೆ ಕಸದ ವಾಹನ ಬಂದಾಗ ಅದರಲ್ಲಿ ಕಸ ಹಾಕಬೇಕು ಎಂದು ಹೇಳಿದರು.

ಪ್ರತಿ 3 ತಿಂಗಳಿಗೊಮ್ಮೆ ಪೌರ ಕಾರ್ಮಿಕರಿಗೆ ಮಣಿಪಾಲ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಅವರಿಗೆ ಬೇಕಾದ ಔಷಧಿಯನ್ನು ಪಟ್ಟಣ ಪಂಚಾಯಿತಿಯಿಂದ ಭರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಟ್ಟಣ ಪಂಚಾಯ್ತಿ ಸದಸ್ಯೆ ಜುಬೇದ ಮಾತನಾಡಿ, ನಗರದ ಖಾಲಿ ನಿವೇಶನಗಳಲ್ಲಿ ಗಿಡ, ಗಂಟಿಗಳು ಬೆಳೆದಿವೆ. ಆ ಜಾಗ ಸೊಳ್ಳೆ ಉತ್ಪತ್ತಿ ತಾಣವಾಗಿದೆ. ಅಂತಹ ಖಾಲಿ ನಿವೇಶನಗಳು ಯಾರಿಗೆ ಸೇರಿ ಎಂಬುದನ್ನು ಪತ್ತೆ ಹಚ್ಚಿ ಆಯಾ ಮಾಲೀಕ ರಿಂದಲೇ ಸ್ವಚ್ಛ ಮಾಡಿಸಬೇಕು ಎಂದು ತಿಳಿಸಿದರು.

ಸಂತೆ ಮಾರುಕಟ್ಟೆ, ಮೀನು ಮಾರುಕಟ್ಟೆ ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲೂ ಸ್ವಚ್ಛತೆ ಬಗ್ಗೆ ಗಮನ ನೀಡಬೇಕು. ಕೆಲವರು ಕೆರೆಗಳಿಗೆ ಕಸ ಹಾಕುತ್ತಿದ್ದಾರೆ. ಇದರಿಂದ ಕೆರೆಗಳಲ್ಲೂ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಕೆರೆಗೆ ಕಸ ಹಾಕುವವರನ್ನು ಪತ್ತೆ ಹಚ್ಚಿ ಕನಿಷ್ಟ 5 ಸಾವಿರ ರು.ವರೆಗೆ ದಂಡ ಹಾಕಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೈಯಾ ಭಾನು, ಮುಕಂದ, ಮುನಾವರ್‌ ಪಾಷಾ, ಕುಮಾರ ಸ್ವಾಮಿ, ಸೋಜ, ಮಹಮ್ಮದ್‌ ವಸೀಂ, ಮುಖ್ಯಾಧಿಕಾರಿ ಆರ್‌.ವಿ.ಮಂಜುನಾಥ್‌,ರೆನಿನ್ಯೂ ಇನ್ಸಪೆಕ್ಟರ್ ವಿಜಯಕುಮಾರ್‌ ಇದ್ದರು.

ನಂತರ ಪಟ್ಟಣ ಪಂಚಾಯಿತಿ ಸದಸ್ಯರು, ಮುಖ್ಯಾಧಿಕಾರಿಗಳು, ಸಿಬ್ಬಂದಿ ಪಟ್ಟಣ ಪಂಚಾಯಿತಿಯ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾಲಿ ನಿವೇಶನಗಳಲ್ಲಿ ಗಿಡ, ಗುಂಟೆ ಬೆಳೆದಿರುವ ನಿವೇಶನದ ಮಾಲೀಕರಿಗೆ ನೋಟೀಸ್‌ ನೀಡಲು ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.