ಸಾರಾಂಶ
ನಿತ್ಯ ನಗರವನ್ಮು ಸ್ವಚ್ಛವಾಗಿಡುವ ಪೌರಕಾರ್ಮಿಕರನ್ನು ಸನ್ಮಾನ ಮಾಡುವುದು ಪುಣ್ಯದ ಕೆಲಸ. ಅವರಿಗೆ ಎಷ್ಟು ಸನ್ಮಾನ ಮಾಡಿದರೂ ಕಡಿಮೆ.
ಮುಂಡಗೋಡ: ನಗರ ಪ್ರದೇಶಗಳು ಸುಂದರವಾಗಿ ಕಾಣುವಲ್ಲಿ ಪೌರಕಾರ್ಮಿಕರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಬುಧವಾರ ಪಟ್ಟಣದ ನಗರಸಭಾ ಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಬಳಿಕ ಮಾತನಾಡಿ, ನಿತ್ಯ ನಗರವನ್ಮು ಸ್ವಚ್ಛವಾಗಿಡುವ ಪೌರಕಾರ್ಮಿಕರನ್ನು ಸನ್ಮಾನ ಮಾಡುವುದು ಪುಣ್ಯದ ಕೆಲಸ. ಅವರಿಗೆ ಎಷ್ಟು ಸನ್ಮಾನ ಮಾಡಿದರೂ ಕಡಿಮೆ. ಅವರಿಗೆ ಸೂಕ್ತ ಗೌರವ ಕೊಡುವುದು ಸಮಾಜದಲ್ಲಿರುವ ಪ್ರತಿಯೊಬ್ಬರ ಕರ್ತವ್ಯ. ನಗರದ ಆರೋಗ್ಯದೊಂದಿಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪೌರಕಾರ್ಮಿಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಉಪಾಧ್ಯಕ್ಷೆ ರಹೀಮಾಬಾನು ಕುಂಕೂರ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ, ಧುರೀಣ ಕೃಷ್ಣ ಹಿರೇಹಳ್ಳಿ ಎಂ.ಎನ್. ದುಂಡಸಿ, ಪಪಂ ಸದಸ್ಯ ಶ್ರೀಕಾಂತ ಸಾನು, ಅಶೋಕ್ ಚಲವಾದಿ, ಪಣಿರಾಜ ಹದಳಗಿ, ಮಹ್ಮದರಜಾ ಪಠಾಣ, ಬೀಬಿಜಾನ ಮುಲ್ಲಾನವರ, ಜಾಪರ್ ಹಂಡಿ, ಮಹ್ಮದಗೌಸ ಮಖಾದನಾರ, ವಿಶ್ವನಾಥ ಪವಾಡಶೆಟ್ಟರ, ಗುಡ್ಡಪ್ಪ ಕಾತೂರ್, ಜ್ಞಾನೇಶ್ವರ್ ಗುಡಿಯಾಳ, ಸಿದ್ದಪ್ಪ ಹಡಪದ, ಎಂ.ಪಿ. ಕುಸೂರ, ಪಪಂ ಸದಸ್ಯರು, ಮುಖಂಡರು ಇದ್ದರು. ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ಹೆಬ್ಬಾರ ಚಾಲನೆ
ಮುಂಡಗೋಡ: ಬುಧವಾರ ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾದ ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ್, ಪಪಂ ಅಧ್ಯಕ್ಷರಾದ ಜಯಸುಧಾ ಬೋವಿ, ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿಗೌಡ ಪಾಟೀಲ್, ಬ್ಲಾಕ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಪ್ರಮುಖರಾದ ಕೃಷ್ಣ ಹಿರೇಹಳ್ಳಿ, ಗುಡ್ಡಪ್ಪ ಕಾತೂರ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಫೀಕ್ ಮಿರಾ ನಾಯ್ಕ, ಶಾಲೆ ಮುಖ್ಯಾಧ್ಯಾಪಕ ವಿನೋದ ನಾಯಕ ಇತರರು ಇದ್ದರು.