ನಿಟ್ಟೂರು ಗ್ರಾಮದ ವಿವಿಧೆಡೆ ಸ್ವಚ್ಚತಾ ಅಭಿಯಾನ

| Published : Feb 14 2024, 02:17 AM IST

ಸಾರಾಂಶ

ನಿಟ್ಟೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಪವಿ ‌ಸ್ವಯಂ ಸೇವಾ ಟ್ರಸ್ಟ್ , ಶಿವಶಕ್ತಿ ಸ್ವಸಹಾಯ ಸಂಘ ಕಾರ್ಮಾಡು, ನಿಟ್ಪೂರು ಗ್ರಾಮದ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ನಿಟ್ಟೂರು ಮುಖ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಬದಿಯಲ್ಲಿ ಎಸೆಯಲಾಗಿರುವ ಪ್ಲಾ‌ಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದಂತೆ ಮತ್ತು ಪ್ಲಾಸ್ಟಿಕ್ ಕೈ ಚೀಲಗಳನ್ನು ಬಳಸದಂತೆ ಅರಿವು ಮೂಡಿಸುವ ಕಾರ್ಯ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ನಿಟ್ಟೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಪವಿ ‌ಸ್ವಯಂ ಸೇವಾ ಟ್ರಸ್ಟ್ , ಶಿವಶಕ್ತಿ ಸ್ವಸಹಾಯ ಸಂಘ ಕಾರ್ಮಾಡು, ನಿಟ್ಪೂರು ಗ್ರಾಮದ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ನಿಟ್ಟೂರು ಮುಖ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಬದಿಯಲ್ಲಿ ಎಸೆಯಲಾಗಿರುವ ಪ್ಲಾ‌ಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದಂತೆ ಮತ್ತು ಪ್ಲಾಸ್ಟಿಕ್ ಕೈ ಚೀಲಗಳನ್ನು ಬಳಸದಂತೆ ಅರಿವು ಮೂಡಿಸುವ ಕಾರ್ಯ ನಡೆಸಲಾಯಿತು. ಪವಿ ಸ್ವಯಂ ಸೇವಾ ಸಂಸ್ಥೆಯ ಸಂಚಾಲಕಿ ಅಳಮೇಂಗಡ ಮಾಳವಿಕಾ ಮಾತನಾಡಿ ಕಸವನ್ನು ಕಂಡಕಂಡಲ್ಲಿ ಎಸಯದೆ ನಿಗದಿತ ಸ್ಥಳದಲ್ಲಿ ಹಾಕುವ ಹವ್ಯಾಸವನ್ನು ಮಕ್ಕಳಿಗೆ ಮನೆಗಳಲ್ಲಯೇ ಕಲಿಸುವ ಕೆಲಸ ಆರಂಭ ಆಗಬೇಕು. ಶಾಲೆಗಳಲ್ಲಿ ಈ ಕಾರ್ಯದ ಮುಂದುವರಿದ ಭಾಗವನ್ನು ಕಲಿಸುವ ಕೆಲಸ ನಡೆಯಬೇಕು ಮತ್ತು ಈ ರೀತಿಯ ಸ್ವಚ್ಚತಾ ಅಭಿಯಾನಗಳು ನಡೆಯುವಾಗ ಗ್ರಾಮದ ಪ್ರತಿ ಮನೆಯಿಂದ ಕನಿಷ್ಠ ಒಬ್ಬರಾದರು ಭಾಗವಹಿಸಿ ಸ್ವಚ್ಚ ಭಾರತ್ ಅಭಿಯಾನದ ಪರಿಕಲ್ಪನೆಯನ್ನು ತಮ್ಮ ತಮ್ಮ ಮನೆಗಳಿಗೆ ರವಾನಿಸಬೇಕೆಂದು ಕರೆ ನೀಡಿದರು.ನಿಟ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮ್ಮಣಿ, ಉಪಾಧ್ಯಕ್ಷ ಚಕ್ಕೇರ ಅಯ್ಯಪ್ಪ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಅಮ್ಮಯ್ಯ,ರಾಜು ಶಿವಶಕ್ತಿ ಸ್ವಸಹಾಯ ಸಂಘದ ಸಂಚಾಲಕ ರಾದ ಕವಿತಾ ಸಂಜೀವಿನಿ ಒಕ್ಕೂಟದ ಪ್ರಮುಖರಾದ , ಅಳಮೇಂಗಡ ಲಕ್ಷ್ಮೀರಾಜಪ್ಪ ,ಬೊಟ್ಪಂಗಡ ಸೀಮಾ, ಪೊನ್ನಿಮಾಡ ವಾಣಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.

ಮಣ್ಣು ಪರೀಕ್ಷಾ ಅಭಿಯಾನ

ನಿಟ್ಟೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗೊಣಿಕೊಪ್ಪ ಕಾಫಿ ಮಂಡಳಿಯಿಂದ ಇಗ್ಗುತಪ್ಪ ಸಂಘದ ಸಹಕಾರದೊಂದಿಗೆ ಮಣ್ಣು ಪರೀಕ್ಷಾ ಅಭಿಯಾನ ನಡೆಯಿತು.

ಭಾಗವಹಿಸಿದ್ದ 42 ಬೆಳೆಗಾರರಿಗೆ ಸ್ಥಳದಲ್ಲೇ ಸುಣ್ಣದ ಪ್ರಮಾಣದ ಶಿಫಾರಸಿನ ಫಲಿತಾಂಶ ನೀಡಲಾಯಿತು. ಮಣ್ಣು ಪರೀಕ್ಷಾ ವಿಜ್ಞಾನಿ ಪ್ರಪುಲಾ ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಗೊಬ್ಬರದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಿರಿಯ ಸಂಪರ್ಕ ಅಧಿಕಾರಿ ಮುಖಾರಿಬ್ ಮಾತನಾಡಿ, ಕಾಫಿ ಬೆಳೆಗಾರರಿಗೆ ಕಾಫಿ ಕಪಾತು ಮಾಡುವ ಬಗ್ಗೆ, ಕಾಫಿ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣದ ಬಗ್ಗೆ , ಸುಣ್ಣದ ಮತ್ತು ಗೊಬ್ಬರದ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು.

ಇಗ್ಗುತಪ್ಪ ಸಂಘದ ಅಧ್ಯಕ್ಷ ಮುಕ್ಕಾಟಿರ ಪ್ರಿನ್ಸ್ ಪೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಕ್ಕೇರ ಅಯ್ಯಪ್ಪ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಇಗ್ಗುತಪ್ಪ ಸಂಘದ ಕಾರ್ಯದರ್ಶಿ ಮುಕ್ಕಾಟಿರ ಸೋಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪೊರಂಗಡ ಪವನ್ ಚಿಟ್ಟಿಯಪ್ಪ, ಇಗ್ಗುತಪ್ಪ ಸಂಘದ ಪ್ರಮುಖರಾದ ಕಾಟಿಮಾಡ ಶಿವಪ್ಪ ,ಹೊಟ್ಟೇಂಗಡ ಅಜಿತ್ ಕಾಟಿಮಾಡ ಸುಜನ್ ಉತ್ತಪ್ಪ ಪೊನ್ನಿಮಾಡ ನಂಜಪ್ಪ ಹಾಜರಿದ್ದರು.