ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸ್ವಚ್ಛತೆ ಅನ್ನುವುದು ನಮ್ಮ ದಿನ ನಿತ್ಯ ಕಾಯಕ ಆಗಬೇಕು ಇದರಿಂದ ನಮ್ಮ ಅರೋಗ್ಯವೂ ಸದೃಢವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ 156 ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಯವರ 121 ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾಲ್ಗೊಂಡು ಮಾತನಾಡಿದರು.
ಪ್ಲಾಸ್ಟಿಕ್ ದಿಢೀರ್ ನಿಷೇಧ ಅಸಾಧ್ಯಸ್ವಚ್ಛತೆ ನಮ್ಮ ದೈನಂದಿನ ಜೀವನದ ಕರ್ತವ್ಯವಾಗಬೇಕು. ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಹಸಿರು ಯುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ಲಾಸ್ಟಿಕ್ ನಿಷೇಧಿಸಿ ಘೋಷಣೆ ಮಾಡಬಹುದು, ಕಳೆದ ನಾಲ್ಕುದಶಕಗಳ ಕಾಲದಿಂದ ಪ್ಲಾಸ್ಟಿಕ್ ಜನತೆಯ ಜೀವನಾಡಿಯಾಗಿ ಬಿಟ್ಟಿದೆ. ಏಕಾ ಏಕಿ ಪ್ಲಾಸ್ಟಿಕ್ ನಿಷೇಧ ಅಸಾಧ್ಯ. ಪ್ಲಾಸಿಕ್ ಕವರ್‌ಗಳ ಬದಲಿಗೆ ಬಟ್ಟೆ ಮತ್ತು ಇತರೆ ಪರ್ಯಾಯ ಚೀಲಗಳನ್ನು ಬಳಸುವಂತೆ ತಿಳಿಸಬೇಕು. ಆಗ ಹಂತ ಹಂತವಾಗಿ ಪ್ಲಾಸಿಕ್ ಬಳಕೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ನೂರಾರು ವಿದ್ಯಾರ್ಥಿಗಳು ಭಾಗಿಈ ವೇಳೆ ನೂರಾರು ವಿದ್ಯಾರ್ಥಿಗಳು, ಪೌರಕಾರ್ಮಿಕರು, ಗಣ್ಯರು, ಅಧಿಕಾರಿಗಳು, ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ವೃತ್ತದಿಂದ ಗಾಂಧಿ ಭವನದ ವರೆಗೂ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಅತೀಕ್ ಪಾಷಾ, ತಹಸೀಲ್ದಾರ್ ರಶ್ಮಿ, ಪೌರಾಯುಕ್ತ ಮನ್ಸೂರ್ ಅಲಿ, ವಾರ್ತಾ ಮತ್ತು ಸಾರ್ವಜನಿ ಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್.ಮಂಜುನಾಥ್, ಎನ್ ಎಸ್ಎಸ್ ವಿದ್ಯಾರ್ಥಿಗಳು, ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))