-ಯುವಾತ್ಮಾ ತಂಡದ ಮಾದರಿ ಕಾರ್ಯ

----

-ಆಗಷ್ಟ 2 ರಿಂದ ಶುರುವಾಗಲಿರುವ ಶ್ರೀ ಜಯತೀರ್ಥರ ಆರಾಧನೆ

----

ಕನ್ನಡಪ್ರಭ ವಾರ್ತೆ ಕಲಬುರಗಿ


ಸೇಡಂ ತಾಲೂಕಿನ ಮಳಖೇಡದಲ್ಲಿ ಬರಲಿರುವ ಆಗಷ್ಟ್‌ 2 ರಿಂದ ಆಗಷ್ಟ್‌ 4ರವರೆಗೆ, ಆಶಾಢ ಮಾಸ ಕೃಷ್ಣಪಕ್ಷ ಚತುರ್ಥಿ, ಪಂಚಮಿ ಹಾಗೂ ಷಷ್ಠಿಯ ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ಜಯತೀರ್ಥರ ಆರಾಧನೆಗೆ ಸ್ವಚ್ಚತೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಭರದ ಸಿದ್ಧತೆಗಳು ಸಾಗಿವೆ.

ಏತನ್ಮಧ್ಯೆ ಹೈದ್ರಾಬಾದ್‌ನ ಯುವಾತ್ಮಾ ತಂಡದ ನೂರಾರು ಸದಸ್ಯರು ಮಳಖೇಡಕ್ಕೆ ಆಗಮಿಸಿ, ಇಲ್ಲಿನ ಕಾಗಿಣಾ ನದಿ ಪಪಿರಸರ, ವೃಂದಾವನ ಪರಿಸರ, ಮೊಗಸಾಲೆ, ಇಂದ್ರ ಭವನ, ರಥ ಕೋಣೆ, ಭೋಜನ ಶಾಲೆ ಸೇರಿದಂತೆ ಮಳಖೇಡ ಜಯತೀರ್ಥರ ವೃಂದಾವನ ಸಮುಚ್ಚಯದ ಎಲ್ಲಾ ಭಾಗಗಳಲ್ಲಿ ಭರದ ಸ್ವಚ್ಚತೆ ಕೆಲಸ ಕೈಗೆತ್ತಿಕೊಂಡಿದ್ದಾರೆ.

ಹೈದ್ರಾಬಾದ್‌ನ ಭಾಗ್ಯ ನಗರದಲ್ಲಿರುವ ಯುವಾತ್ಮಾ ತಂಡದಲ್ಲಿರುವವರೆಲ್ಲರು ಅಲ್ಲಿನ ಸಾಫ್ಟವೇರ್‌ ಇಂಜಿನಿಯರ್‌ಗಳೇ ಆಗಿದ್ದಾರೆ. ಕಳೆದ 3 ವರ್ಷದಿಂದ ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥರ ಪ್ರೇರಣೆಯಿಂದ ಯುವಾತ್ಮಾ ತಂಡ ಕಟ್ಟಿಕೊಂಡು ಈ ಸಮಾಜ ಸೇವೆಯಲ್ಲಿ ತಮ್ಮನ್ನೆಲ್ಲ ತೊಡಗಿಸಿಕೊಂಡಿದ್ದಾರೆ.

ಈ ಯುವಾತ್ಮಾ ತಂಡದಲ್ಲಿ ಯುವಕರು, ಯುವತಿಯರು ಎಲ್ಲರೂ ಇದ್ದಾರೆ. ಕಳೆದ 2 ದಿನದಿಂದ ಮಳಖೇಡದಲ್ಲಿ ಬಿಡಾರ ಹೂಡಿರುವ ಈ ತಂಡದ ಸದಸ್ಯರು ಕಾಗಿಣಾ ನದಿ ನಪಿರಸರದ ಮಾರ್ಗ, ನೀರು ತುಂಬುವುದು ಪರಿಸರದಲ್ಲಿ ಭರದ ಸ್ವಚ್ಚತೆ ನಡೆಸಿದೆ.

ಇಲ್ಲಿ ಬೆಳೆದಿದ್ದ ಮುಳ್ಳು ಪೊದೆಗಳನ್ನೆಲ್ಲ ಕಿತ್ತು ಹಾಕಲಾಗಿದೆ.

ಇದಲ್ಲದೆ ಭೋಜನ ಶಾಲೆ, ಇಂದ್ರ ಭವನ ಮಂದಿರದಲ್ಲಿಯೂ ಭರದ ಸ್ವಚ್ಚತೆ ಕೈಗೆತ್ತಿಕೊಂಡಿದ್ದ ಇನ್ನೂ 2 ದಿನ ಮಳಖೇಡದಲ್ಲಿದ್ದು, ಸ್ವಚ್ಚತೆ ಕೆಲಸ ಕಾರ್ಯಗಳನ್ನು ಕೈಗಂತ್ತಿಕೊಳ್ಳಲಿದೆ ಎಂದು ತಂಡದ ಮಾರ್ಗದರ್ಶಕ ಪಂ. ವಾಸುದೇವಾಚಾರ್ಯ ಕಾನಗೋವಿ ಹೇಳಿದ್ದಾರೆ.

ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಉತ್ತರಾದಿ ಮಠಾಧೀಶರ ಪ್ರೇರಣೆಯೇ ಯುವಕರು ಇಲ್ಲಿಗೆ ಬಂದು ಇಂತಹ ಸ್ವಚ್ಚತೆ ಕೆಲಸಗಳಲ್ಲಿ ಕೈ ಜೋಡಿಸಲು ಮೂಲ ಕಾರಣ. ಕಳೆದ 3 ವರ್ಷದಿಂದ ಹೈದ್ರಾಬಾದ್‌ನ ಯುವಾತ್ಮಾ ತಂಡದವರು ಇಲ್ಲಿಗೆ ಬರುತ್ತಿದ್ದಾರೆ. ತಾವೂ ಸಹ ಇವರೊಂದಿಗೆ ಬಂದು ಮಾರ್ಗದರ್ಶನ ನೀಡುತ್ತಿರೋದಾಗಿ ವಾಸುದೇವಾಚಾರ್ಯ ಹೇಳಿದ್ದಾರೆ.

ಹೈದ್ರಾಬಾದ್‌ ಯುವಾತ್ಮಾ ತಂಡದ ಯುವಕರ ಜೊತೆಗೆ ಮಳಖೇಡ ಉತ್ತರಾದಿ ಮಠ, ಸ್ಥಳೀಯ ಕಲಬುರಗಿ ಸತ್ಯಾತ್ಮತೀರ್ಥರ ಭಕ್ತವೃಂದದವರು ಅನೇಕ ಯುವಕರು ಈ ಕೆಲಸದಲ್ಲಿ ಪಾಲ್ಗೊಂಡು ಸ್ವಚ್ಚತೆಯ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಮಳಖೇಡದ ವ್ಯವಸ್ಥಾಪಕ ಪಂ. ವೆಂಕಣ್ಣಾಚಾರ್ಯ ಪೂಜಾರಿ ತೀರ್ಥ ಪ್ರಸಾದ, ವಸತಿ ವ್ಯವಸ್ಥೆ ಕಲ್ಪಿಸಿ ಸ್ವಚ್ಚತೆಯ ಸೇವೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

--

ಫೋಟೋ- ಯುವಾತ್ಮಾ 1 ಮತ್ತು 2

ಮಳಖೇಡದ ಕಾಗಿಣಾ ನದಿ ತೀರದಲ್ಲಿರುವ ಸ್ನಾನಘಟ್ಟದಲ್ಲಿನ ಮುಳ್ಳು ಪೊದೆ ಸ್ವಚ್ಚತೆ ಮಾಡುತ್ತಿರುವ ಯುವಾತ್ಮಾ ತಂಡದ ಸದಸ್ಯರು.

--

ಫೋಟೋ- ಯುವಾತ್ಮಾ 3 ಮತ್ತು 4

ಯುವಾತ್ಮಾ ತಂಡದ ಮಹಿಳೆಯರು ಭೋಜನ ಶಾಲೆ, ಅಡುಗೆ ಮನೆ, ಇಂದ್ರ ಭವನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭರದ ಸ್ವಚ್ಚತೆ ಕೈಗೊಂಡಿರುವುದು.