ಹವಾಮಾನ ವೈಪರಿತ್ಯದಿಂದ ವ್ಯಾಪಕವಾಗಿ ಹರಡುತ್ತಿದೆ ಎಲೆಚುಕ್ಕಿ ರೋಗ: ಡಾ.ನಾಗರಾಜಪ್ಪ

| Published : Oct 21 2024, 12:32 AM IST

ಹವಾಮಾನ ವೈಪರಿತ್ಯದಿಂದ ವ್ಯಾಪಕವಾಗಿ ಹರಡುತ್ತಿದೆ ಎಲೆಚುಕ್ಕಿ ರೋಗ: ಡಾ.ನಾಗರಾಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಸತತ ಭಾರೀ ಮಳೆಯಿಂದ ಹವಾಮಾನ ವೈಪರೀತ್ಯದ ಪರಿಣಾಮ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಶಿಲೀಂದ್ರ, ಔಷಧಿ ಸಿಂಪಡಣೆ ಯಿಂದ ಈ ರೋಗ ಹತೋಟಿಗೆ ತರಬಹುದಾಗಿದೆ ಎಂದು ಶಿವಮೊಗ್ಗ ನೆವುಲೆ ಅಡಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ನಾಗರಾಜಪ್ಪ ಹೇಳಿದರು.

ತಾಲೂಕಿನ ಅಡಕೆ ಎಲೆಚುಕ್ಕಿ ರೋಗ ಪೀಡಿತ ಪ್ರದೇಶಗಳಿಗೆ ವಿಜ್ಞಾನಿಗಳ ತಂಡ ಭೇಟಿ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸತತ ಭಾರೀ ಮಳೆಯಿಂದ ಹವಾಮಾನ ವೈಪರೀತ್ಯದ ಪರಿಣಾಮ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಶಿಲೀಂದ್ರ, ಔಷಧಿ ಸಿಂಪಡಣೆ ಯಿಂದ ಈ ರೋಗ ಹತೋಟಿಗೆ ತರಬಹುದಾಗಿದೆ ಎಂದು ಶಿವಮೊಗ್ಗ ನೆವುಲೆ ಅಡಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ನಾಗರಾಜಪ್ಪ ಹೇಳಿದರು.

ತಾಲೂಕಿನ ಅಡಕೆ ಎಲೆಚುಕ್ಕಿ ರೋಗ ಪೀಡಿತ ಪ್ರದೇಶಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ವ್ಯಾಪಕ ಮಳೆಯಾಗುತ್ತಿರುವುದರಿಂದ ತಂಪು ವಾತಾವರಣದಿಂದ ಸೋಗೆಗಳ ಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಚಿಕ್ಕಗಾತ್ರದ ಚುಕ್ಕಿಗಳನ್ನು ಶಿಲೀಂದ್ರ ಗಳು ಉಂಟು ಮಾಡುತ್ತದೆ. ಅಂತಹ ಚುಕ್ಕಿಗಳ ಸುತ್ತ ಹಳದಿ ಬಣ್ಣದ ಆವರಣವಿದ್ದು ಗರಿಗಳು ಒಣಗಲು ಪ್ರಾರಂಭವಾಗಿ ಅಸ್ತಿತ್ವ ಕಳೆದುಕೊಳ್ಳುತ್ತದೆ.

ಇಂತಹ ಸಂದರ್ಭದಲ್ಲಿ ಕೊಟ್ಟಿಗೆ ಗೊಬ್ಬರದ ಜೊತೆ ಶಿಫಾರಿತ ಪೋಷಕಾಂಶಗಳಾದ ಸಾರಜನಕ, ರಂಜಕ, ಪೋಟಾಶ್, ನೀಡಬೇಕು. ಹೆಚ್ಚಿನ ಮಾಹಿತಿಗೆ ತೋಟಗಾರಿಕಾ ಇಲಾಖೆ ಅಥವಾ ಅಡಕೆ ಸಂಶೋಧನಾ ಕೇಂದ್ರ ಸಂಪರ್ಕಿಸಬಹುದು ಎಂದರು.

ಶಿವಮೊಗ್ಗದ ಸಸ್ಯರೋಗ ತಜ್ಞ ಡಾ.ಶ್ರೀಶೈಲ್ ಸೋನಿಯಲ್ ಮಾತನಾಡಿ ರೋಗಭಾದಿತ ಗರಿಗಳನ್ನು ತೆಗೆದು ನಾಶಪಡಿಸಬೇಕು. ತೋಟಗಲ್ಲಿ ಬಿಸಿಲು ಬೀಳುವಂತೆ ಮಾಡಬೇಕು. ಕಾಡು ಮರಗಳ ಕಡಿತಲೆ ಮಾಡಬೇಕು. ಸೂಕ್ತ ಸಮಯದಲ್ಲಿ ಔಷಧಿ ಸಿಂಪಡಣೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ವಿಜ್ಞಾನಿಗಳ ತಂಡ ತಾಲೂಕಿನ ಅತಿ ಹೆಚ್ಚು ಹಾನಿಗೊಳಗಾದ ಎಲೆ ಚುಕ್ಕಿ ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಡಾ.ಪ್ರದೀಪ್ ಗೋಪಾಕ್ಕಳಿ, ಡಾ.ಪ್ರಶಾಂತ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶ ಕ ಶ್ರೀಕೃಷ್ಣ , ಸ್ಥಳೀಯ ರೈತರು ಇದ್ದರು.

20 ಶ್ರೀ ಚಿತ್ರ 2-

ಶೃಂಗೇರಿ ತಾಲೂಕಿನ ಅಡಕೆ ಎಲೆ ಚುಕ್ಕಿ ಪೀಡಿತ ತೋಟಗಳಿಗೆ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರಿಶೀಲಿಸುತ್ತಿರುವುದು.