ಯಾವ ಸಚಿವರಿಗೆ ಯಾವ ಖಾತೆ ಕೊಡಬೇಕು ಎನ್ನುವುದನ್ನು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ತೀರ್ಮಾನ ಮಾಡಿ ಜವಾಬ್ದಾರಿ ಕೊಡುತ್ತಾರೆ ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ಮಡಿಕೇರಿ: ಯಾವ ಸಚಿವರಿಗೆ ಯಾವ ಖಾತೆ ಕೊಡಬೇಕು ಎನ್ನುವುದನ್ನು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ತೀರ್ಮಾನ ಮಾಡಿ ಜವಾಬ್ದಾರಿ ಕೊಡುತ್ತಾರೆ ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು. ಬುಧವಾರ ಹಾರಂಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಸಚಿವ ಸ್ಥಾನ ಸಿಗದಿರುವ ಬಗ್ಗೆ ಒಂದಷ್ಟು ದಿನ ಅಸಮಾಧಾನ ಕೆಲವರಿಗೆ ಇರುತ್ತೆ. ಒಂದು ಮನೆಯಲ್ಲಿ ಅಣ್ಣ-ತಮ್ಮಂದಿರಿಗೆ ಕಿತ್ತಾಟ ಬರುವ ರೀತಿಯಲ್ಲಿ ಆಕಾಂಕ್ಷಿಗಳಿಗೆ ಬೇಸರ ಸಹಜ ಎಂದರು.

ಕಾಂಗ್ರೆಸಿಗರಲ್ಲಿ ಗುಂಪುಗಾರಿಕೆ ಎನ್ನುವುದು ಸಾಧ್ಯವಿಲ್ಲ. ನಾವೆಲ್ಲ 2029ಕ್ಕೆ ರಾಹುಲ್ ಗಾಂಧಿಯ ಅವರನ್ನು ಪ್ರಧಾನಮಂತ್ರಿಯಾಗಿ ಕಾಣುವ ದಿಕ್ಕಿನಲ್ಲಿ ಕೆಲಸ ಮಾಡುವಂಥ ಶ್ರಮಿಕರು. ನಮ್ಮ ಮನೆ ಒಳಗಿನ ವಿಚಾರ. ಅದೇನೇ ಇದ್ದರೂ ನಾವು ಸರಿ ಮಾಡಿಕೊಳ್ಳುತ್ತೇವೆ. ಮುನಿಸಿಕೊಂಡಿರೋವರನ್ನು ನಾವು ಮತ್ತು ನಮ್ಮ ನಾಯಕರು ಸರಿಪಡಿಸ್ತೀವಿ. ಇನ್ನೊಂದೆರಡು ದಿನದಲ್ಲಿ ಎಲ್ಲವೂ ಸರಿ ಹೋಗುತ್ತದೆ. ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾವು ಆಡಳಿತಕ್ಕೆ ಬರುವುದೇ ಜನಾಭಿಪ್ರಾಯದ ಮೇಲೆ. ಸದಸ್ಯರ ಸಂಖ್ಯಾಬಲದ ಮೇಲೆ. ಹಾಗಾಗಿ ಮೇಲ್ಮನೆಯಲ್ಲೂ ಸಂಖ್ಯಾಬಲ ಹೆಚ್ಚಿದೆ ಅಂತ ಹೇಳಿದರೆ ಬೇರೆ ಚರ್ಚೆ ಅಗತ್ಯವಿಲ್ಲ. ಇನ್ನು ಈ ವಿಚಾರ ಹೊರಗಡೆ ಚರ್ಚೆ ಮಾಡುವ ವಿಷಯ ಅಲ್ಲ. ಅದನ್ನು ಮೇಲ್ಮನೆಯಲ್ಲಿ ನಮ್ಮ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.