ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಮೂರು ವರ್ಷದ ಮಗುವಿನ ತುಂಟಾಟಿಕೆ, ಅಧಿಕಾರ ಅಂದಂಗೆ ಆಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ನಂತರ ಪರ್ತಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮೂರು ವರ್ಷದ ಸಂಭ್ರಮ ಕಾರ್ಯಕ್ರಮ ಮಾಡುವುದು, ಸಿದ್ದರಾಮಯ್ಯ ಮೂರು ವರ್ಷ ಮಗುವಿನಂತೆ ವರ್ತಿಸಿದ ಸಂಕೇತವಾಗಿದೆ. ಎಲ್ಲ ಬೆಲೆ ಏರಿಕೆ ಮಾಡಿ ಈಗ ಏನು ಮಾಡಿದ್ದಾರೆ ಎಂಬ ಕಾರಣಕ್ಕೆ ಕಾರ್ಯಕ್ರಮ ಮಾಡುತ್ತಾರೆ ಎಂದು ಪ್ರಶ್ನಿಸಿದರು.ಗ್ಯಾರಂಟಿಗಳ ಹಿನ್ನೆಲೆ ಎಲ್ಲ ದರ ಏರಿಕೆ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಶೂ ನೀಡಿಲ್ಲ. ಅಂಗನವಾಡಿ, ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ. ಮೂರು ವರ್ಷದಲ್ಲಿ ಖಜಾನೆ ಖಾಲಿ ಮಾಡಿಕೊಂಡು ಕುಳಿತಿದ್ದಾರೆ. ಮೂರು ವರ್ಷದ ಮಗುವಿನ ತುಂಟಾಟಿಕೆ ಆಡಳಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದಾಗಿದೆ ಎಂದರು.
ಸಿಎಂ ಬದಲಾವಣೆ ಚರ್ಚೆಯೇ ಕಾಂಗ್ರೆಸ್ ಅಭಿವೃದ್ಧಿ ಆಗಿದೆ. ಸಿದ್ದರಾಮಯ್ಯ ನಿಂತಿರುವ ನಾಲ್ಕು ಕಾಲುಗಳಲ್ಲಿ ಒಂದನ್ನು ಡಿ.ಕೆ. ಶಿವಕುಮಾರ ಕಿತ್ತಿಕೊಂಡಿದ್ದಾರೆ. ಈ ಖುರ್ಚಿಗಾಗಿ ಕಿತ್ತಾಟ ನಡೆದಿದೆ ಎಂದು ಆರೋಪಿಸಿದರು.ಪ್ರಧಾನಿ ಮೋದಿಯಿಂದ ಮಿತವ್ಯಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಿತವ್ಯಯ ಬಳಕೆ ಮಾಡಿದ್ದಾರೆ. ಮೋದಿ ಹೇಳಿದಂತೆ ಅವರು ಭದ್ರತಾ ವಾಹನ ಕಡಿಮೆ ಮಾಡಿದ್ದಾರೆ. ಈಗ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಹ ತಮ್ಮ ಬೆಂಗಾವಲು ಪಡೆ ಕಡಿಮೆ ಮಾಡಬೇಕು. ರಾಹುಲ್ ಗಾಂಧಿ, ಸಿದ್ದರಾಮಯ್ಯ ದೇಶ ಮುಖ್ಯ ಎನ್ನುತ್ತಿಲ್ಲ, ಅವರು ಕುಟುಂಬ ಮುಖ್ಯ ಎನ್ನುತ್ತಾರೆ. ಮೋದಿ ಅವರಿಗೆ ಬೆದರಿಕೆಗಳಿದ್ದರೂ ಬೆಂಗಾವಲು ಪಡೆ ಕಡಿಮೆ ಮಾಡಿದ್ದಾರೆ. ಈಗ ಕಾಂಗ್ರೆಸ್‌ನವರು ಬೆಂಗಾವಲು ಪಡೆ ಕಡಿಮೆ ಮಾಡಬೇಕು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶ ಆಳ್ವಿಕೆ ಮಾಡಿದ್ದಾರೆ. ಇಂದಿರಾ ಗಾಂಧಿ ಹಾಗೂ ಚಿದಂಬರ ಸಹ ಹಿಂದೆ ಚಿನ್ನ ಖರೀದಿಸಬಾರದು ಎಂದಿದ್ದರು.
ಮೋದಿ ಹೇಳಿದ್ದಾರೆ ಎಂಬ ಕಾರಣ ವಿರೋಧ ಮಾಡುತ್ತಿದ್ದಾರೆ, ಯುದ್ದದ ಹಿನ್ನೆಲೆ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ ಕುಸಿತವಾಗಿದೆ. ಕಾಂಗ್ರೆಸ್‌ನವರು ಪ್ರಧಾನಿಯನ್ನು ಡಮ್ಮಿ ಮಾಡಿದ್ದರು. ಶಾಸಕ ರಾಯರಡ್ಡಿ ಅವರ ಸ್ಥಿತಿ ಸಹ ಹಾಗೇ ಇದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಹೇಳಿಕೊಂಡು ಚುನಾವಣೆ ಗೆದ್ದಿದ್ದಾರೆ. 2028ರಲ್ಲಿ ಅವರು ಗೆಲ್ಲೋದಿಲ್ಲ ಎಂದು ಹೇಳಿದರು.