ಸಾರಾಂಶ
ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.3ರಂದು ಮಧ್ಯಾಹ್ನ 3 ಗಂಟೆಗೆ ಹೊನ್ನಾಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಬುಧವಾರ ಟಿ.ಬಿ. ವೃತ್ತದಲ್ಲಿ ಸ್ಥಳ ಪರಿಶೀಲಿಸಿದರು.ಕನಕಪ್ರತಿಮೆ ಆವರಣ, ಟಿ.ಬಿ.ಶಾಲೆ ಹಿಂಭಾಗದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮ ಹಾಗೂ ಹೆಲಿಪ್ಯಾಡ್‌ಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶ್, ಫೆ.3ರಂದು ದಾವಣಗೆರೆಯಲ್ಲಿ ಎರಡು ದಿನದ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಹೊನ್ನಾಳಿಗೆ ಆಗಮಿಸಿ ಕನಕ ಪ್ರತಿಮೆ ಅನಾವರಣಗೊಳಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಝಡ್ ಪ್ಲಸ್ ಭದ್ರತೆ ಇರುವುದರಿಂದ ಸಕಲ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮ ನಡೆಯುವ ಸುತ್ತ ಮುತ್ತ ಪ್ರದೇಶ, ಕನಕ ಪ್ರತಿಮೆ ಅನಾವರಣ ಮಾಡುವ ಸ್ಥಳ ಮತ್ತು ಹೆಲಿಕಾಫ್ಟರ್‌ನಿಂದ ಇಳಿದು ಕಾರಿನಲ್ಲಿ ಬರುವ ದಾರಿ ತಪಾಸಣೆ ಮಾಡಲಾಗಿದೆ ಎಂದರು.ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ಪಟ್ಟರಾಜಗೌಡ, ಪೊಲೀಸ್ ಇನ್ಸ್‍ಪೆಕ್ಟರ್ ಸುನಿಲ್‍ಕುಮಾರ್, ಮುಖ್ಯಾಧಿಕಾರಿ ನಿರಂಜನಿ, ಕುರುಬ ಸಮಾಜದ ಮುಖಂಡರಾದ ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ, ಎಚ್.ಬಿ.ಶಿವಯೋಗಿ, ದಿಡಗುರು ಫಾಲಾಕ್ಷಪ್ಪ, ಎಂ.ಎಸ್. ಫಾಲಾಕ್ಷಪ್ಪ, ಮರುಳ ಸಿದ್ದಪ್ಪ, ಶ್ರೀನಿವಾಸ್, ಪುರಸಭಾ ಸದಸ್ಯ ಬಾಬು ಹೋಬಳದಾರ್, ರಂಜಿತ್ ಹಾಗೂ ಇತರರು ಇದ್ದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕೈಬಿಟ್ಟಿದ್ದು ಅಚಾತುರ್ಯ: ಫಾಲಾಕ್ಷಪ್ಪಹೊನ್ನಾಳಿ: ಸಮೀಪದ ದೇವನಾಯಕನಹಳ್ಳಿ ವೃತ್ತದಲ್ಲಿ ಫೆ.3ರಂದು ಮಧ್ಯಾಹ್ನ 3ಗಂಟೆಗೆ ಕನಕದಾಸರ ಪ್ರತಿಮೆ ಅನಾವರಣ ಕಾರ್ಯ ಕ್ರಮವನ್ನು ಹೊನ್ನಾಳಿ ತಾಲ್ಲೂಕು ಕುರುಬ ಸಂಘದ ವತಿಯಿಂದ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆ ಅನಾವರಣ ಮಾಡಿದ ನಂತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತ ನಾಡಲಿದ್ದಾರೆ ಎಂದು ಹೊನ್ನಾಳಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಎಸ್.ಫಾಲಾಕ್ಷಪ್ಪ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಆದರೆ ಈ ಕಾರ್ಯಕ್ರಮದ ಕರಪತ್ರದಲ್ಲಿ ಆಕಸ್ಮಿಕವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಹಾಗೂ ಕುರುಬ ಸಮಾಜದ ಮುಖಂಡ ಎಚ್.ಬಿ.ಮಂಜಪ್ಪ ಅವರ ಹೆಸರು ಕೈಬಿಟ್ಟಿದ್ದು ನಮ್ಮ ಅಚಾತುರ್ಯದಿಂದ ನಡೆದಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಫಾಲಾಕ್ಷಪ್ಪ ಸ್ಪಷ್ಟಪಡಿಸಿದರು.ಸಮಾಜದ ಬಂಧುಗಳು ಎಚ್.ಬಿ.ಮಂಜಪ್ಪ ಹೆಸರು ಕೈಬಿಟ್ಟಿದ್ದಕ್ಕೆ ಅನ್ಯಥಾ ಭಾವಿಸಬಾರದು ಎಂದು ಮನವಿ ಮಾಡಿರುವ ಅವರು, ಕುರುಬ ಸಮಾಜದವರು ಸೇರಿದಂತೆ ಇತರೆ ಎಲ್ಲಾ ಸಮಾಜದವರು ಕಾರ್ಯಕ್ರಮಕ್ಕೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹೊನ್ನಾಳಿ ತಾ ಕುರುಬ ಸಂಘದ ಗೌರವ ಅಧ್ಯಕ್ಷ ದಿಡಗೂರು ಫಾಲಾಕ್ಷಪ್ಪ, ಮರುಳಸಿದ್ದಪ್ಪ, ಗಾಳಿ ನಾಗರಾಜ್, ಕಾರ್ಯಾಧ್ಯಕ್ಷ ಬಾಬು ಹೋಬಳದಾರ್ ಉಪಸ್ಥಿತರಿದ್ದರು.