ಗ್ಯಾರಂಟಿ ಬೆನ್ನು ಹತ್ತಿದ ಸಿಎಂ ಸೋಮಾರಿ: ನಟ ಚೇತನ

| Published : May 26 2024, 01:34 AM IST

ಗ್ಯಾರಂಟಿ ಬೆನ್ನು ಹತ್ತಿದ ಸಿಎಂ ಸೋಮಾರಿ: ನಟ ಚೇತನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ರಾಜ್ಯದಲ್ಲಿ ಅಲೇಮಾರಿ ಜನಾಂಗದ ಬದುಕಿಗೆ ಆಸರೆಯಾಗಬೇಕಾಗಿದ್ದ ಸಿಎಂ ಸಿದ್ದರಾಮಯ್ಯ ಗ್ಯಾರಂಟಿಗಳ ಬೆನ್ನು ಹತ್ತಿ ಸೋಮಾರಿ ಸಿದ್ದರಾಮಯ್ಯ ಆಗಿದ್ದಾರೆ ಎಂದು ನಟ ಚೇತನ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರಾಜ್ಯದಲ್ಲಿ ಅಲೇಮಾರಿ ಜನಾಂಗದ ಬದುಕಿಗೆ ಆಸರೆಯಾಗಬೇಕಾಗಿದ್ದ ಸಿಎಂ ಸಿದ್ದರಾಮಯ್ಯ ಗ್ಯಾರಂಟಿಗಳ ಬೆನ್ನು ಹತ್ತಿ ಸೋಮಾರಿ ಸಿದ್ದರಾಮಯ್ಯ ಆಗಿದ್ದಾರೆ ಎಂದು ನಟ ಚೇತನ ಲೇವಡಿ ಮಾಡಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಪಟ್ಟಣದ ರಾಮನಗರ ಅಲೆಮಾರಿ ಜನಾಂಗದವರಿಗೆ ಸೂರು ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಹನುಮ ಜನ್ಮಭೂಮಿ ಆಂಜನಾದ್ರಿ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತಾರೆ. ಅದೆ ಪರಂಪರಾಗತವಾಗಿ ಕಲೆಯನ್ನು ಉಳಿಸಿಕೊಂಡ ಬಂದ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಕೆ ಮಾಡುವಂತೆ ಅವರು ಆಗ್ರಹಿಸಿದರು.

ಚಿಕ್ಕೋಡಿ, ರಾಮನಗರದಲ್ಲಿ 82 ಕುಟುಂಬಗಳು ಇನ್ನೂ ಬಡತನದಲ್ಲಿವೆ. ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಲೆಮಾರಿ ಜನಾಂಗಕ್ಕೆ ಬಜೆಟ್‌ದಲ್ಲಿ ಒಂದು ರುಪಾಯಿ ಹಣ ನೀಡಿಲ್ಲ. ಅದನ್ನು ಬಿಟ್ಟು ಹನುಮಾನ ಜನ್ಮ ಭೂಮಿಗೆ ₹100 ಕೊಟ್ಟಿದ್ದೆ ಸರ್ಕಾರದ ಆದ್ಯತೆನಾ? ಸಿದ್ದರಾಮಯ್ಯ ಅಹಿಂದ ಪರ ಕೆಲಸ ಮಾಡುತ್ತಿಲ್ಲ, ಅವರೊಬ್ಬ ಸೋಮಾರಿ ಸಿದ್ದರಾಮಯ್ಯ ಆಗಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.ಈ ವೇಳೆ ಸಿದ್ದು ಪಾಟೀಲ, ಮಚ್ಚೇಂದ್ರ ಕಾಡಾಪೂರೆ ಉಪಸ್ಥಿತರಿದ್ದರು.