ಬರಗಾಲದಿಂದ ಕಂಗಲಾದ ಯಾದಗಿರಿ ರೈತರಿಗೆ ಸರ್ಕಾರದಿಂದ ಈಗ ಮೊದಲ ಕಂತಿನ ಮಧ್ಯಂತರ ಪರಿಹಾರದ 2,500 ಹಣ ಬಿಡುಗಡೆಯಾಗಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಬರಗಾಲದಿಂದ ಕಂಗಲಾದ ಯಾದಗಿರಿ ರೈತರಿಗೆ ಸರ್ಕಾರದಿಂದ ಈಗ ಮೊದಲ ಕಂತಿನ ಮಧ್ಯಂತರ ಪರಿಹಾರದ ₹2,500 ಹಣ ಬಿಡುಗಡೆಯಾಗಿದೆ.ಗುರುವಾರ, ಬೆಂಗಳೂರನಿಂದಲೇ ವೀಡಿಯೋ ಕಾನ್ಪೇರೆನ್ಸ್ ಮೂಲಕ ಯಾದಗಿರಿ ರೈತರು ಹಾಗೂ ಡಿಸಿ ರಾಹುಲ್ ಪಾಂಡ್ವೆ ಜತೆ ಚರ್ಚೆ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಿಂದಲೇ ಪರಿಹಾರದ ಹಣ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಡುಗಡೆ ಮಾಡಿದ್ದಾರೆ.
ಐವರು ರೈತರೊಂದಿಗೆ ಸಿಎಂ ಸಂವಾದ ನಡೆಸಿದ ಸಿಎಂ, ಅವರ ಅಳಲಿಗೆ ದನಿಯಾದರು. ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ಬರ ಕುರಿತು ಮಾಹಿತಿ ನೀಡಿದರು. ₹2500 ಹಣ ಬಿಡುಗಡೆ ಮಾಡಿದಕ್ಕೆ ಸಿಎಂಗೆ ಧನ್ಯವಾದಗಳನ್ನು ರೈತರು ಸಲ್ಲಿಸಿದಾಗ, ಹಂತ ಹಂತವಾಗಿ ಉಳಿದ ಹಣ ಪಾವತಿ ಮಾಡಲಾಗುತ್ತದೆ ಎಂದು ಸಿಎಂ ರೈತರಿಗೆ ಭರವಸೆ ನೀಡಿದರು.ಯಾದಗಿರಿ ಜಿಲ್ಲೆಯ 1,06,122 ರೈತರಿಗೆ ಸರ್ಕಾರ ₹2500 ಹಣ ಬಿಡುಗಡೆ ಮಾಡಿದ್ದು, ಯಾದಗಿರಿ ಜಿಲ್ಲೆಯಿಂದಲೇ ರಾಜ್ಯದಲ್ಲಿ ಮೊದಲ ಬಾರಿಗೆ ಪರಿಹಾರ ಹಣ ಪಾವತಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ತುಕಾರಾಂ ಮಾಹಿತಿ ನೀಡಿದರು.