ಸಹಕಾರಿ ಬ್ಯಾಂಕುಗಳು ಉದ್ಯೋಗ ಸೃಷ್ಠಿಗೆ ನೆರವಾಗಲಿ: ಎಚ್.ಕೆ.ಪಾಟೀಲ್

| Published : Jul 28 2024, 02:07 AM IST

ಸಹಕಾರಿ ಬ್ಯಾಂಕುಗಳು ಉದ್ಯೋಗ ಸೃಷ್ಠಿಗೆ ನೆರವಾಗಲಿ: ಎಚ್.ಕೆ.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ನಿರುದ್ಯೋಗ ನಿವಾರಣೆಯಾದರೆ ಎಲ್ಲ ಕಡೆ ಶಾಂತಿ ಮೂಡುತ್ತದೆ. ಸಹಕಾರಿ ಬ್ಯಾಂಕುಗಳು ಉದ್ಯೋಗ ಸೃಷ್ಠಿ ಮಾಡುವ ಕಾರ್ಯಕ್ಕೆ ನೆರವು ನೀಡಬೇಕು ಎಂದು ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

- ತರೀಕೆರೆಯಲ್ಲಿ ಶಿವ ಸಹಕಾರಿ ಬ್ಯಾಂಕ್ ನಿ.ರಜತ ಮಹೋತ್ಸವ ಸಮಾರಂಭಕನ್ನಡಪ್ರಭ ವಾರ್ತೆ, ತರೀಕೆರೆ

ನಿರುದ್ಯೋಗ ನಿವಾರಣೆಯಾದರೆ ಎಲ್ಲ ಕಡೆ ಶಾಂತಿ ಮೂಡುತ್ತದೆ. ಸಹಕಾರಿ ಬ್ಯಾಂಕುಗಳು ಉದ್ಯೋಗ ಸೃಷ್ಠಿ ಮಾಡುವ ಕಾರ್ಯಕ್ಕೆ ನೆರವು ನೀಡಬೇಕು ಎಂದು ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಶನಿವಾರ, ಶ್ರೀ ಗುರು ರೇವಣಸಿದ್ದೇಶ್ವರ ಮಾಂಗಲ್ಯ ಮಂದಿರದಲ್ಲಿ ಏರ್ಪಡಿಸಿದ್ದ ಶಿವ ಸಹಕಾರಿ ಬ್ಯಾಂಕ್ ರಜತ ಮಹೋತ್ಸವದಲ್ಲಿ ಮಾತನಾಡಿ, ಸಹಕಾರಿ ಬಂಧುಗಳನ್ನು ಸನ್ಮಾನಿಸಿದ್ದೀರಿ ಇದು ಅತ್ಯಂತ ಮಹತ್ವದ ಕಾರ್ಯಕ್ರಮ, ಸಹಕಾರಿ ಸಂಸ್ಥೆ ಗಳ ರಜತ, ಸ್ವರ್ಣ ಮತ್ತು ವಜ್ರ ಮಹೋತ್ಸವಗಳು ಬ್ಯಾಂಕ್‌ಗಳ ದೊಡ್ಡ ಬೆಳವಣಿಗೆಯ ನಿದರ್ಶನ ಎಂದು ವ್ಯಾಖ್ಯಾನಿಸಿದರು.

ಇಂತಹ ಕಾರ್ಯಕ್ರಮಗಳು ಸಿಂಹಾವಲೋಕನಕ್ಕೆ ಪ್ರೇರಣೆ ನೀಡುತ್ತದೆ. ಶಿವ ಸಹಕಾರಿ ಬ್ಯಾಂಕ್ 9 ಲಕ್ಷ ರು. ಷೇರು ಬಂಡವಾಳದಿಂದ 103 ಕೋಟಿ ರು.ದುಡಿಯುವ ಬಂಡವಾಳ ಸೃಷ್ಠಿಸಿದೆ. ಜೀರೋ ಲೆವಲ್ ನಿಂದ ಸಂಸ್ಥೆಯನ್ನು ಬೆಳೆಸಿದ್ದೀರಿ ಸಾಲ ಮರುಪಾವತಿ ಬ್ಯಾಂಕ್ ನ ಗುಣಮಟ್ಟವನ್ನು ಅಳೆಯುತ್ತದೆ. ಶಿವ ಸಹಕಾರಿ ಬ್ಯಾಂಕ್ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

ಸಣ್ಣ ನಗರಗಳ ಸಹಕಾರಿ ಬ್ಯಾಂಕುಗಳಲ್ಲಿ ಹೆಚ್ಚು ಸೌಹಾರ್ದತೆ ಇರುತ್ತದೆ. ಅದರಂತೆ ಶಿವ ಸಹಕಾರಿ ಬ್ಯಾಂಕ್‌ ಸಹಕಾರಿ ತಂಡ ಸಾಧನೆ ಮಾಡಿದೆ. ಅಡಚಣೆ ಇಲ್ಲದೆ ಸಂಸ್ಥೆ ಮುಂದುರೆದಿರುವುದು ತುಂಬ ಸಂತೋಷ, ಮುಂದಿನ ಐದು ಹತ್ತು ವರ್ಷಗಳಲ್ಲಿ ಸಂಸ್ಥೆಯ ದುಡಿಯುವ ಬಂಡವಾಳವನ್ನು ದುಪ್ಪಟ್ಟು ಮಾಡಬೇಕು. ಬ್ಯಾಂಕ್ ನ ವ್ಯವಸ್ಥಾಪಕರು ಕೇಳಿದರೆ ಖಂಡಿತಾ ಹೆಚ್ಚು ಡೆಪಾಸಿಟ್ ಹರಿದು ಬರುತ್ತದೆ ಎಂದು ಅಭಿಪ್ರಾಯ ಪಟ್ಟರು.

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಅಮೃತೇಶ್ವರ ಸ್ವಾಮಿ ದೇವಸ್ಥಾನ ಮತ್ತು ತರೀಕೆರೆ ಪಟ್ಟಣದ ಶರಣೆ ಅಕ್ಕ ನಾಗಲಾಂಬಿಕೆ ವಿಶ್ರಾಂತಿ ಭವನ ಅಭಿವೃದ್ಧಿಗೆ ತಾವು ನೆರವು ನೀಡುವುದಾಗಿ ಆಶ್ವಾಸನೆ ನೀಡಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಪಟ್ಟಣದ ಶಿವ ಸಹಕಾರಿ ಬ್ಯಾಂಕ್‌ ಗೆ 25 ವರ್ಷ ತುಂಬಿದೆ. ಶಿವ ಸಹಕಾರಿ ಬ್ಯಾಂಕ್ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ. ಬ್ಯಾಂಕು ಅತ್ಯುತ್ತಮವಾದ ಪ್ರಗತಿ ಸಾಧಿಸಿದೆ. ಬ್ಯಾಂಕ್‌ ದೊಡ್ಡದಾಗಿ ಬೆಳೆದಿದೆ, ಬ್ಯಾಂಕ್ ನ ಪದಾದಿಕಾರಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಶಿವ ಸಹಕಾರಿ ಬ್ಯಾಂಕ್ ಇನ್ನು ಹೆಚ್ಚು ಪ್ರಗತಿ ಸಾಧಿಸಲಿ ಎಂದು ಶುಭ ಕೋರಿದರು.

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಶಿವ ಸಹಕಾರಿ ಬ್ಯಾಂಕ್ ನ ಅಭಿವೃದ್ಧಿಗೆ ಅನೇಕ ಮಹನೀಯರು ಶ್ರಮಿಸಿದ್ದಾರೆ. ಶಿವ ಸಹಕಾರಿ ಬ್ಯಾಂಕ್ 25 ವರ್ಷದಲ್ಲಿ 103 ಕೋಟಿ ರು. ಗಳ ವ್ಯವಹಾರ ಮಾಡಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರವೇ ಕಾರಣ. ಪಟ್ಟಣದಲ್ಲಿ ಮಾತ್ರವಲ್ಲದೆ ಬ್ಯಾಂಕ್ ಗ್ರಾಮಾಂತರ ಪ್ರದೇಶಗಳಲ್ಲೂ ಸ್ಥಾಪನೆಯಾಗಬೇಕು. ಕೃಷಿ ಮಾಡುವವರಿಗೆ ಹೆಚ್ಚಿನ ನೆರವು ನೀಡಬೇಕು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಚ್.ಸುರೇಶ್ ಅವರು ಬಹಳ ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಸಹಕಾರಿ ಬ್ಯಾಂಕ್ ಇಷ್ಟೊಂದು ಪ್ರಗತಿ ಸಾಧಿಸಲು ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಸಾಣೆಹಳ್ಳಿ ಶ್ರೀ ತರಳಬಾಳು ಶಾಖಾ ಮಠ ಪಟ್ಟಾಧ್ಯಕ್ಷ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಶಿವ ಸಹಕಾರಿ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ. ಬ್ಯಾಂಕ್ 103 ಕೋಟಿ ದುಡಿಯುವ ಬಂಡವಾಳ ಸಾಧಿಸಿದೆ, ಆಡಳಿತ ಮಂಡಳಿ ಸಂಸ್ಥೆಯನ್ನು ತುಂಬಾ ಚೆನ್ನಾಗಿ ಉತ್ಸಾಹದಿಂದ ನಡೆಸಿಕೊಂಡು ಬಂದ್ದಿದ್ದರ ಫಲವಾಗಿ ಉತ್ತಮ ಪ್ರಗತಿ ಸಾಧಿಸಿದೆ. ಬ್ಯಾಂಕ್‌ ನಿಂದ ನೆರವು ಪಡೆಯಬೇಕು. ಗ್ರಾಹಕರು ಮತ್ತು ಅಡಳಿತ ಮಂಡಳಿ ಎರಡೂ ಸೇರಿದರೆ ಬ್ಯಾಂಕ್ ಮತ್ತಷ್ಟು ಪ್ರಗತಿ ಸಾಧಿಸುತ್ತದೆ ಎಂದು ಪ್ರತಿಪಾದಿಸಿದರು.

ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಆರ್.ಗಂಗಾಧರಪ್ಪ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಬಸವರಾಜಪ್ಪ ಮಾತನಾಡಿದರು. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಚ್.ಸುರೇಶ್, ಬ್ಯಾಂಕ್ ನಿರ್ದೇಶಕ ಎಚ್.ಒ.ದಯಾನಂದ, ಶಾಂತ ಆನಂದ್, ನಿರ್ದೇಶಕ ಮಂಡಳಿ, ಸಿಬ್ಬಂದಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.27ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಹಮ್ಮಿಕೊಂಡಿದ್ದ ಶಿವ ಸಹಕಾರಿ ಬ್ಯಾಂಕ್ ರಜತ ಮಹೋತ್ಸವ ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದರು. ಶಾಸಕ ಜಿ.ಎಚ್.ಶ್ರೀನಿವಾಸ್, ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಆರ್ . ಗಂಗಾಧರಪ್ಪ, ನಿರ್ದೇಶಕ ಮಂಡಳಿ ಮತ್ತಿತರರು ಇದ್ದರು.