ಸಾರಾಂಶ
ತೆಂಗು ಉತ್ಪಾದನೆಯನ್ನು ಹೆಚ್ಚಿಸಲು ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯನ್ನು ರೂಪಿಸಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ೩೫೦೦ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದ್ದು, ಇದರಲ್ಲಿ ಮೊದಲಿಗೆ ೪೦೦ ಹೆಕ್ಟೇರ್ ತೆಂಗು ಬೆಳೆ ಪ್ರದೇಶವನ್ನು ಆಯ್ಕೆ ಮಾಡಿ, ಅದರಲ್ಲಿಯೂ ೧೫ ವರ್ಷ ಮೇಲ್ಪಟ್ಟ ತೆಂಗಿನ ಮರಗಳನ್ನು ಆಯ್ಕೆ ಮಾಡಿ, ಯೋಜನೆಯ ಅನುಸಾರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಹೊಳೆನರಸೀಪುರ: ತೆಂಗು ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯ ಸಲಹೆ, ಕೀಟಗಳ ನಿಯಂತ್ರಣದ ಜತೆಗೆ ಔಷಧಿ ಹಾಗೂ ಯೋಜನೆಯ ಅನುಸಾರ ಸವಲತ್ತುಗಳನ್ನು ಒದಗಿಸಲಾಗುತ್ತದೆ ಹಾಗೂ ನಿರಂತರವಾಗಿ ಜರುಗುವ ಯೋಜನೆಯಾದ್ದರಿಂದ ರೈತರು ಅಗತ್ಯ ಪಹಣಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಘು ಸಲಹೆ ನೀಡಿದರು.
ತಾಲೂಕಿನ ಮೂಡಲಹಿಪ್ಪೆ ಗ್ರಾಮದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಹೊಸ ತೆಂಗಿನ ತೋಟಗಳ ಪ್ರಾತ್ಯಕ್ಷಿತೆ ಹಾಗೂ ರೈತರಿಗೆ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತೆಂಗು ಉತ್ಪಾದನೆಯನ್ನು ಹೆಚ್ಚಿಸಲು ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯನ್ನು ರೂಪಿಸಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ೩೫೦೦ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದ್ದು, ಇದರಲ್ಲಿ ಮೊದಲಿಗೆ ೪೦೦ ಹೆಕ್ಟೇರ್ ತೆಂಗು ಬೆಳೆ ಪ್ರದೇಶವನ್ನು ಆಯ್ಕೆ ಮಾಡಿ, ಅದರಲ್ಲಿಯೂ ೧೫ ವರ್ಷ ಮೇಲ್ಪಟ್ಟ ತೆಂಗಿನ ಮರಗಳನ್ನು ಆಯ್ಕೆ ಮಾಡಿ, ಯೋಜನೆಯ ಅನುಸಾರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅದೇ ರೀತಿ ವರ್ಷ ಪೂರ್ತಿ ನಿರಂತರವಾಗಿ ಜರಗುವ ಕಾರ್ಯಕ್ರಮವಾದ್ದರಿಂದ ೩೫೦೦ ಹೆಕ್ಟೇರ್‌ಗೂ ಯೋಜನೆಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರೈತರು ತೋಟಗಾರಿಕೆ ಇಲಾಖೆಯಲ್ಲಿ ಅಗತ್ಯ ಪಹಣಿ ಹಾಗೂ ಮಾಹಿತಿ ನೀಡಿ, ನೋಂದಣಿ ಮಾಡಿಸಿಕೊಂಡಲ್ಲಿ ಯೋಜನೆಯ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದರು. ಗ್ರಾಪಂ ಅಧ್ಯಕ್ಷ ಮಂಜುನಾಥ್, ರೈತರ ಉತ್ಪಾದಕರ ಸಂಘಟನೆಯ ಮೂಡಲಹಿಪ್ಪೆ ವಲಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿದರು. ರೈತರಿಗೆ ತೆಂಗಿನ ಕೀಟ ಬಾಧೆಯ ರಕ್ಷಣೆಗೆ ಔಷಧಿ, ಹೆಚ್ಚಿನ ಇಳುವರಿಗೆ ಬೇವಿನ ಹಿಂಡಿ ಹಾಗೂ ಇತರೆ ಪರಿಕರಗಳನ್ನು ವಿತರಿಸಲಾಯಿತು.ತೆಂಗಿನ ಮರದ ಬಿಳಿ ನೊಣ, ಕೀಟಬಾಧೆ ಹಾಗೂ ಇತರೆ ರೋಗ ಲಕ್ಷಣಗಳು ಹಾಗೂ ನಿವಾರಣೆ ಕುರಿತು ಸುದೀರ್ಘವಾಗಿ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಮೂಡಲಹಿಪ್ಪೆ ಗ್ರಾಪಂ. ಮಾಜಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಪ್ರಕಾಶ್, ತೋಟಗಾರಿಕೆ ಇಲಾಖೆಯ ಎಎಚ್‌ಒ ರಂಗಸ್ವಾಮಿ ಎಂ.ಸಿ. ಹಾಗೂ ನೌಕರರಾದ ಪುಟ್ಟರಾಜು, ದೊಡ್ಡೇಗೌಡ, ಬೋರೇಗೌಡ, ರವೀಶ್, ಇತರರು ಇದ್ದರು.