ಸಾರಾಂಶ
ಮುಜರಾಯಿ ಇಲಾಖಾ ವ್ಯಾಪ್ತಿಗೆ ಬರುವ ತಾಲೂಕಿನ ಮಾರಿಕೊಪ್ಪದ ಪ್ರಸಿದ್ಧ ಹಳದಮ್ಮದೇವಿ ದೇವಾಲಯದ ಕಾಣಿಕೆ ಹುಂಡಿಯನ್ನು ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ತೆರೆದು ಕಾಣಿಕೆ ಹಣವನ್ನು ಎಣಿಕೆ ಮಾಡಿದ್ದು, ಹುಂಡಿಯಲ್ಲಿ ಒಟ್ಟು ₹21,82,250 ಸಂಗ್ರಹವಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ತಿಳಿಸಿದ್ದಾರೆ.
ಹೊನ್ನಾಳಿ: ಮುಜರಾಯಿ ಇಲಾಖಾ ವ್ಯಾಪ್ತಿಗೆ ಬರುವ ತಾಲೂಕಿನ ಮಾರಿಕೊಪ್ಪದ ಪ್ರಸಿದ್ಧ ಹಳದಮ್ಮದೇವಿ ದೇವಾಲಯದ ಕಾಣಿಕೆ ಹುಂಡಿಯನ್ನು ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ತೆರೆದು ಕಾಣಿಕೆ ಹಣವನ್ನು ಎಣಿಕೆ ಮಾಡಿದ್ದು, ಹುಂಡಿಯಲ್ಲಿ ಒಟ್ಟು ₹21,82,250 ಸಂಗ್ರಹವಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಆರಂಭವಾದ ಹುಂಡಿ ಹಣ ಎಣಿಕೆ ಕಾರ್ಯ ಸಂಜೆಯವರೆಗೆ ನಡೆಯಿತು. ಈ ಸಂದರ್ಭ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರಾದ ರಮೇಶ್, ಮುನೇಶ್, ಕಂದಾಯ ಇಲಾಖೆಯ ಮುಜರಾಯಿ ಗುಮಾಸ್ತೆ ಚಂದ್ರಕಲಾ, ಶಿಲ್ಪ, ಸಿಬ್ಬಂದಿ, ಮಾರಿಕೊಪ್ಪದ ಮುಖಂಡರು ಹಾಗೂ ಹತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಹಳದಪ್ಪ, ಚನ್ನಪ್ಪ, ಪ್ರಭಣ್ಣ, ಟಿ.ತಿಮ್ಮಪ್ಪ, ದೇವಸ್ಥಾನದ ಅರ್ಚಕರಾದ ವೀರೇಶಪ್ಪ,ಮಲ್ಲಿಕಾರ್ಜುನ, ಗ್ರಾಮದ ಮುಖಂಡರು ಇದ್ದರು.- - - -30ಎಚ್.ಎಲ್.ಐ2: