ಸೀತೂರು ಗ್ರಾಪಂ ವ್ಯಾಪ್ತಿಯ 6 ಉಣುಗು ಮಾದರಿ ಸಂಗ್ರಹ: ಡಾ ಆಕರ್ಷ್

| Published : Nov 22 2024, 01:15 AM IST

ಸೀತೂರು ಗ್ರಾಪಂ ವ್ಯಾಪ್ತಿಯ 6 ಉಣುಗು ಮಾದರಿ ಸಂಗ್ರಹ: ಡಾ ಆಕರ್ಷ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕಳೆದ ವರ್ಷ ಸೀತೂರು ಗ್ರಾಮ ಪಂಚಾಯಿತಿಯ ಕೆರೆಗದ್ದೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮುಂಜಾಗ್ರತವಾಗಿ ಆರೋಗ್ಯ ಇಲಾಖೆಯಿಂದ ಈ ಭಾಗದಲ್ಲಿ 6 ಉಣುಗು ಮಾದರಿ ಸಂಗ್ರಹಿಸಿ ಶಿವಮೊಗ್ಗದ ಪರಮಾಣು ಕ್ರಿಮಿ ಪ್ರಯೋಗಶಾಲೆಗೆ ಕಳುಹಿಸಲಾಗಿದೆ ಎಂದು ಸರ್ಕಾರಿ ಆಸ್ಪತ್ರೆ ಸಾಂಕ್ರಾಮಿಕ ರೋಗ ಶಾಸ್ತ್ರ ತಜ್ಞ ಡಾ.ಆಕರ್ಷ್ ತಿಳಿಸಿದರು.

ಶಿವಮೊಗ್ಗ ಪ್ರಯೋಗ ಶಾಲೆಗೆ ರವಾನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಳೆದ ವರ್ಷ ಸೀತೂರು ಗ್ರಾಮ ಪಂಚಾಯಿತಿಯ ಕೆರೆಗದ್ದೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮುಂಜಾಗ್ರತವಾಗಿ ಆರೋಗ್ಯ ಇಲಾಖೆಯಿಂದ ಈ ಭಾಗದಲ್ಲಿ 6 ಉಣುಗು ಮಾದರಿ ಸಂಗ್ರಹಿಸಿ ಶಿವಮೊಗ್ಗದ ಪರಮಾಣು ಕ್ರಿಮಿ ಪ್ರಯೋಗಶಾಲೆಗೆ ಕಳುಹಿಸಲಾಗಿದೆ ಎಂದು ಸರ್ಕಾರಿ ಆಸ್ಪತ್ರೆ ಸಾಂಕ್ರಾಮಿಕ ರೋಗ ಶಾಸ್ತ್ರ ತಜ್ಞ ಡಾ.ಆಕರ್ಷ್ ತಿಳಿಸಿದರು.

ಗುರುವಾರ ಸೀತೂರಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಮಾತನಾಡಿ, ಸೀತೂರು ಗ್ರಾಮ ಪಂಚಾಯಿತಿಯಲ್ಲಿ ಮಂಗನಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹಸುಗಳ ಮೇಲೆ ಇರುವ ಉಣುಗು, ಅರಣ್ಯದಲ್ಲಿರುವ ಉಣುಗು ಸೇರಿದಂತೆ 6 ಉಣುಗು ಮಾದರಿಯನ್ನು ಸಂಗ್ರಹಿಸಿದ್ದೇವೆ. ಅಲ್ಲದೆ ಕಳೆದ ವರ್ಷ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದ ಕಾನೂರು ಗ್ರಾಮ ಪಂಚಾಯಿತಿ ಕಟ್ಟಿನಮನೆ, ತಟ್ಟೇಸರ, ಗುಬ್ಬಿಗಾ ಗ್ರಾಮ ಪಂಚಾಯಿತಿಯ ವಗಡೆಕಲ್ಲು, ಮಾಳೂರು ದಿಣ್ಣೆ ಭಾಗದ ಅರಣ್ಯದಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ಉಣುಗು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪಿ. ಪವನ್ ಕರ್, ಆಪ್ತ ಸಮಾಲೋಚಕ ಸುಹಾಸ್, ಸೀತೂರು ಗ್ರಾಮ ಪಂಚಾಯಿತಿ ಪಿಡಿಓ ಶ್ರೀನಿವಾಸ್, ಸಮುದಾಯ ಆರೋಗ್ಯ ಅಧಿಕಾರಿ ರಮ್ಯಕೃಷ್ಣ, ಆಶಾ ಕಾರ್ಯ ಕರ್ತೆಯರಾದ ಮಾಲಿನಿ, ವಸಂತಿ, ಹೇಮಾವತಿ ಇದ್ದರು.