ನಗರಸಭೆ ನೀಡುವ ಸೌಲಭ್ಯ ಬಳಸಿಕೊಂಡು ಮುನ್ನೆಲೆಗೆ ಬನ್ನಿ: ಆಂಜನೇಯಲು ಮನವಿ

| Published : Oct 05 2025, 01:00 AM IST

ನಗರಸಭೆ ನೀಡುವ ಸೌಲಭ್ಯ ಬಳಸಿಕೊಂಡು ಮುನ್ನೆಲೆಗೆ ಬನ್ನಿ: ಆಂಜನೇಯಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರು ಉಚಿತ ಗ್ಯಾಸ್ ಸ್ಟೌವ್‌ನ ಸದ್ಬಳಸಿಕೊಂಡು, ಹೊಗೆ ರಹಿತ ಅಡುಗೆಯನ್ನು ತಯಾರಿಸಲು ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಬಡವರು ಸರ್ಕಾರದಿಂದ ಕೊಡುವ ಸೌಲತ್ತುಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ನಗರಸಭೆ ಆಯುಕ್ತ ಆಂಜನೇಯಲು ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಗ್ಯಾಸ್ ಸ್ಟೌವ್ ವಿತರಣಾ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ನಗರೋತ್ಥಾನ ಅನುದಾನದಡಿ ನಗರದ ೩೫ ವಾರ್ಡ್ಗಳಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಈ ಸೌಲತ್ತುಗಳನ್ನು ನೀಡುತ್ತಿದ್ದು, ಒಂದು ಸಿಲಿಂಡರ್ ಮತ್ತು ಸ್ಟೌವ್‌ಗೆ ೪.೪೦೦ ರು. ಗಳನ್ನು ನಗರಸಭೆ ವತಿಯಿಂದ ನೀಡಲಾಗಿದೆ ಎಂದರು.

೪೫೦ ಫಲಾನುಭವಿಗಳು:

ನಗರದ ೩೫ ವಾರ್ಡ್ಗಳಲ್ಲಿ ಗ್ಯಾಸ್ ಇಲ್ಲದವರಿಗೆ ಉಚಿತವಾಗಿ ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರ್‌ಗೆ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು, ಒಟ್ಟು ೨೬೦೦ ಅರ್ಜಿಗಳು ಬಂದಿದ್ದು, ಇದರಲ್ಲಿ ಅರ್ಹ ೪೫೦ ಫಲಾನುಭವಿಗಳನ್ನು ಆಯ್ಕೆ ಮಾಡಿ ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲರಿಗೂ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದರು.

ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಬಡವರು ಉಚಿತ ಗ್ಯಾಸ್ ಸ್ಟೌವ್‌ನ ಸದ್ಬಳಸಿಕೊಂಡು, ಹೊಗೆ ರಹಿತ ಅಡುಗೆಯನ್ನು ತಯಾರಿಸಲು ಅನುಕೂಲವಾಗಲಿದೆ ಎಂದರು.

ನಗರಸಭೆ ಅಧ್ಯಕ್ಷೆ ಇಂದಿರಾ ಗಾಂಧಿ ಮಾತನಾಡಿ, ನಗರಸಭೆ ವತಿಯಿಂದ ಇಷ್ಟೊಂದು ದೊಡ್ಡಮಟ್ಟದಲ್ಲಿ ಮೊದಲನೇ ಬಾರಿಗೆ ಸ್ಟೌವ್ ಮತ್ತು ಸಿಲಿಂಡರ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಬಡ ಹೆಣ್ಣು ಮಕ್ಕಳು ಇನ್ನು ಮುಂದೆ ಸೌಧೆ ಒಲೆಯನ್ನು ಬಿಟ್ಟು ಗ್ಯಾಸ್‌ನಿಂದ ಅಡುಗೆ ಮಾಡಲು ಸಹಕಾರಿಯಾಗಲಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯರಾದ ಕರುಣಾಕರನ್, ಜಯಪಾಲ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.