ಕನ್ನಡಪ್ರಭ ವಾರ್ತೆ ಬೆಂಗಳೂರು

ಚಾಮರಾಜಪೇಟೆಯಲ್ಲಿರುವ ಶ್ರೀ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಯತಿಗಳಾದ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮಿಗಳು ಗುರುಪೂರ್ಣಿಮೆಯ ಸಂದರ್ಭದಲ್ಲಿ ಚಾತುರ್ಮಾಸ್ಯ ಸಂಕಲ್ಪ ಆರಂಭಿಸಿದರು. ಇದೇ ವೇಳೆ ವ್ಯಾಸಪೂಜೆಯನ್ನು ಕೂಡ ನೆರವೇರಿಸಿದರು,ಬಳಿಕ ಮಾತನಾಡಿದ ಅವರು, ‘ಅಜ್ಞಾನವನ್ನು ಜ್ಞಾನದಿಂದ ಅಳಿಸಬೇಕು. ಸನಾತನ ಧರ್ಮದ ಉಳಿವಿಗಾಗಿ ಶಂಕರಾಚಾರ್ಯರು ಹಾಕಿಕೊಟ್ಟ ಮಾರ್ಗ ಅನುಸರಣೀಯ’ ಎಂದರು. ಈ ವೇಳೆ ವಿದ್ವಾನ್ ರಾಜೇಶ್ವರ ಶಾಸ್ತ್ರಿಗಳು, ಗೋವಿಂದಭಟ್ಟ ಘನಪಾಠಿಗಳು, ನಾರಾಯಣ ಜೋಯಿಸ್‌, ಹನುಮಂತ ಭಟ್ಟ ಜೋಶಿ ಕುಂಕೂರ, ಅಶ್ವತ್ಥನಾರಾಯಣ, ಗುರುದತ್ತ ದೇಶಪಾಂಡೆ, ಶಂಕರ ಕುಲಕರ್ಣಿ, ನಿನಾದ್‌ ಕಾಶೀಕರ್‌, ವಿಶ್ವಂಭರ ಜೋಶಿ, ಪ್ರಕಾಶ ನಾಡಿಗೇರ ಇದ್ದರು.