ಸಂವಿಧಾನದ ಆಶಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ

| Published : Sep 16 2024, 01:56 AM IST

ಸಾರಾಂಶ

ರಾಮನಗರ: ಸಂವಿಧಾನದ ಮಹತ್ವವನ್ನು ಮತ್ತು ಆಶಯಗಳನ್ನು ಮುಂದಿನ ಪೀಳಿಗೆಗೂ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.

ರಾಮನಗರ: ಸಂವಿಧಾನದ ಮಹತ್ವವನ್ನು ಮತ್ತು ಆಶಯಗಳನ್ನು ಮುಂದಿನ ಪೀಳಿಗೆಗೂ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಎಲ್ಲ ರೀತಿಯ ಹಕ್ಕು ನೀಡಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿ ಹಿಡಿಯಲು ಈ ದಿನವನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ರಾಮನಗರ ಜಿಲ್ಲೆಯಲ್ಲಿ ಶೇಷಗಿರಿಹಳ್ಳಿಯಿಂದ ಪ್ರಾರಂಭಗೊಂಡು ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಗಡಿಯವರೆಗೆ ಮಾನವ ಸರಪಳಿ ನಿರ್ಮಿಸಲಾಗಿತ್ತು. ಬೆಳಿಗ್ಗೆ 9 ಗಂಟೆಗೆಯಿಂದ ರಾಮನಗರ ಜಿಲ್ಲೆಯ ಗಡಿಭಾಗವಾದ ವೆಳ್ಳಿಯಪ್ಪ ಟೆಸ್ಟೈಲ್ಸ್ ನಿಂದ ಪ್ರಾರಂಭವಾಗಿ ಶೇಷಗಿರಿಹಳ್ಳಿ, ಮಂಚನಾಯಕನಹಳ್ಳಿ ಲಕ್ಷ್ಮೀಸಾಗರ, ಭೀಮೇನಹಳ್ಳಿ, ಬಿಲ್ಲಕೆಂಪನಹಳ್ಳಿ, ಭೈರಮಂಗಲ ಕ್ರಾಸ್, ಬಿಡದಿ ಟೌನ್, ಕೆಂಚನಕುಪ್ಪೆಗೇಟ್, ಕಲ್ಲುಗೋಪಹಳ್ಳಿ, ಕೆಂಪನಹಳ್ಳಿಗೇಟ್, ಮಾಯಗನಹಳ್ಳಿ, ಮಾದಾಪುರಗೇಟ್, ಕೇತೋಹಳ್ಳಿ ಗೇಟ್, ಬಸವನಪುರ ಗೇಟ್, ವಡೇರಹಳ್ಳಿ, ಜಿಲ್ಲಾಧಿಕಾರಿಗಳ ಕಚೇರಿ, ರಾಮನಗರ ಟೌನ್ ಅರ್ಚಕರಹಳ್ಳಿ, ಜಾನಪದ ಲೋಕ, ಕೆಂಗಲ್, ವಂದಾರಗುಪ್ಪೆ, ಪೊಲೀಸ್ ತರಬೇತಿ ಕೇಂದ್ರ, ಶೇರು ಹೋಟೆಲ್ ವೃತ್ತ, ಚನ್ನಪಟ್ಟಣ ಟೌನ್, ದೊಡ್ಡಮಳೂರು, ಭೈರಾಪಟ್ಟಣ, ಮತ್ತಿಕೆರೆ, ಬೆಳಕೆರೆ, ಮುದಗೆರೆ ಗೇಟ್, ಮತ್ತು ಕೋಲೂರು ಗೇಟ್ (ಗಾಂಧಿಗ್ರಾಮ) ವರೆಗೆ ಅಂದಾಜು 51.20 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎನ್. ನಟರಾಜು ಗಾಣಕಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್ಪಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಉಪವಿಭಾಗಧಿಕಾರಿ ಬಿನೋಯ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಮುದಾಯ ಮುಖಂಡರು ಭಾಗವಹಿಸಿದ್ದರು.

15ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು.

2.ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಮುಖಂಡರು ಮಾನವ ಸರಪಳಿ ರಚಿಸಿದರು.