₹175 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ : ಶಾಸಕ ಕೆ.ಎಸ್.ಆನಂದ್‌

| N/A | Published : Jul 12 2025, 12:32 AM IST / Updated: Jul 12 2025, 10:32 AM IST

₹175 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ : ಶಾಸಕ ಕೆ.ಎಸ್.ಆನಂದ್‌
Share this Article
  • FB
  • TW
  • Linkdin
  • Email

ಸಾರಾಂಶ

 ಬಡವರು ಮತ್ತು ಜನ ಸಾಮಾನ್ಯರು ಶುಭ ಸಮಾರಂಭಗಳನ್ನು ನಡೆಸಲು ದೊಡ್ಡ ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್‌ ಹೇಳಿದರು.

 ಕಡೂರು :  ಬಡವರು ಮತ್ತು ಜನ ಸಾಮಾನ್ಯರು ಶುಭ ಸಮಾರಂಭಗಳನ್ನು ನಡೆಸಲು ದೊಡ್ಡ ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್‌ ಹೇಳಿದರು.

ತಾಲೂಕಿನ ಅಂತರಘಟ್ಟೆಯ ಶ್ರೀ ದುರ್ಗಾಂಬ ದೇವಾಲಯದ ಆವರಣದಲ್ಲಿ ವಿ.ಜೆ.ಎನ್.ಎಲ್. ನಿಂದ ₹175 ಲಕ್ಷ ವೆಚ್ಚದ ಸಮುದಾಯಭವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ವಿಧಾನಸಭಾ ಚುನಾವಣೆ ಸಮಯದಲ್ಲಿ ತಾಲೂಕಿನ ತಾಯಿ ಅಧಿ ದೇವತೆ ಶ್ರೀ ಅಂತರಗಟ್ಟಮ್ಮ ಬಲಗೈ ಪ್ರಸಾದ ನೀಡುವ ಮುಖೇನ ತಮಗೆ ಮಾಡಿದ ಆಶೀರ್ವಾದದಿಂದ ಇಂದು ಶಾಸಕನಾಗಿದ್ದೇನೆ. ನನ್ನ ಅವಧಿಯಲ್ಲಿ ದೇವರಿಗೆ ಕೊಡುಗೆ ನೀಡಬೇಕೆಂಬ ನಿಟ್ಟಲ್ಲಿ ವಿ.ಜೆ.ಎನ್. ಎಲ್ ನಿಂದ ₹175 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಈ ಭಾಗದ ರೈತರು ಮತ್ತು ಬಡವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಎಂಜಿನಿಯರ್ ಬರುವ ಜಾತ್ರೆಯೊಳಗೆ ಭವನ ನಿರ್ಮಿಸಿ ನೀಡಿದರೆ ತುಂಬಾ ಅನುಕೂಲವಾಗಲಿದೆ ಎಂದರು. ಈ ಭಾಗ ಸದಾ ಬರಗಾಲದಿಂದ ತತ್ತರಿಸುವ ಮುಖೇನ ರೈತರು ಸಂಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಈ ಭಾಗಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ಹನಿ ನೀರಾವರಿ ಆಗಲಿದೆ. ಮೆಗಾ ಎಂಜಿನಿಯರಿಂಗ್ ಅವರಿಂದ ₹550 ಕೋಟಿ ಈ ಯೋಜನೆಯಲ್ಲಿ ನಮ್ಮ ಭಾಗದಲ್ಲಿ ₹380 ಕೋಟಿ ಕಾಮಗಾರಿ ನಡೆಯಲಿದ್ದು 9 ಪಂಪ್ ಹೌಸ್ ಗಳ ನಿರ್ಮಾಣದ ಜೊತೆ ಶ್ರೀ ಅಮ್ಮನವರ ದೇವಾಲಯ ಸುತ್ತಮುತ್ತಲಲ್ಲಿ ಕಾಮಗಾರಿ ಮೂಲಕ ತೋಟಗಾರಿಕ ಬೆಳೆಗಳಿಗೆ ನೀರು ಸಿಗಲಿದೆ. ಇದು ರೈತನ ಮಗನಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಇಲ್ಲಿ ₹15 ಲಕ್ಷ ವೆಚ್ಚದಲ್ಲಿ ಮತ್ತೊಂದು ಸಮುದಾಯ ಭವನಕ್ಕೆ ಚಾಲನೆ ನೀಡಲಾಗಿದೆ.

ಹರಿಜನ ಕಾಲೋನಿ ದೇವಸ್ಥಾನಕ್ಕೆ ಹಣ ನೀಡಿದ್ದೇನೆ. ಇನ್ನು ಶಾಸಕರು ಗಡಿಭಾಗಕ್ಕೆ ಬರುವುದೇ ಕಡಿಮೆ ಎಂಬ ಮಾತಿತ್ತು. ಈ ಆರೋಪ ದೂರ ಮಾಡಿದ್ದು, ಮುಂದೆ ಇನ್ನು ಹೆಚ್ಚು ಕೆಲಸ ಮಾಡಲಿದ್ದೇನೆ.₹110 ಲಕ್ಷ ದಲ್ಲಿ ಜೆಜೆಎಂ. ಕಾಮಗಾರಿಯಲ್ಲಿ ಹೊಸ ಪೈಪ್ ಲೈನ್ ಅಳವಡಿಕೆ, ಗುಣಮಟ್ಟದ ಕೆಲಸ ನಡೆಯುತ್ತಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿದ್ದು, ನಿಮ್ಮ ಜೊತೆ ಸದಾ ಸಂಪರ್ಕದಲ್ಲಿದ್ದು ಜಾತ್ಯಾತೀತ ವ್ಯಕ್ತಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಬಡವರು ಸ್ವಾಭಿಮಾನಿ ಗಳಾಗಲು ರಾಜ್ಯ ಸರಕಾರ ನೆರವಾಗಿದೆ. ವರ್ಷಕ್ಕೆ ₹24 ಸಾವಿರ ಜೊತೆ ಅಕ್ಕಿ, ವಿದ್ಯುತ್, ಬಸ್ ಸೇರಿ ಜನರಿಗೆ ಅನುಕೂಲ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಜಿ. ಅಶೋಕ್, ವಿಜೆಎನ್ ಎಲ್ ನ ಎಇಇ ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಮಾಜಿ ಉಪಾಧ್ಯಕ್ಷ ಹನುಮಂತಪ್ಪ, ಕಾಂತರಾಜು, ರಾಜಣ್ಮ, ಜಯಣ್ಣ, ಶೇಖರ್, ಗಿರೀಶ್, ಆಂಜನಪ್ಪ, ನಾಗರಾಜ್, ಸಿದ್ದೇಶ್ ಮತ್ತಿತರರು ಇದ್ದರು. 

Read more Articles on