ಸಾರಾಂಶ
ಸಮುದಾಯವನ್ನು ಒಗ್ಗೂಡಿಸುವ ಇಂತಹ ಜಯಂತಿಗಳ ಆಚರಣೆಯಿಂದ ಸಮಾಜಕ್ಕೆ ಕೊಡುಗೆ ನೀಡುವಂತಹ ಕಾರ್ಯವಾಗಬೇಕು. ನಾವು ಆರ್ಥಿಕ, ಸಾಮಾಜಿಕ ಹಾಗೂ ಶಿಕ್ಷಣದಲ್ಲಿ ಮುಂದುವರಿಯಬೇಕು. ಮಕ್ಕಳಿಗೆ ಮುಖ್ಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕು.
ಕುಷ್ಟಗಿ:
ತಾಲೂಕಿನ ತಾವರಗೇರಾ ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಜಂಗಮ ಸಮಾಜದ ವತಿಯಿಂದ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಗದ್ಗುರು ಶ್ರೀರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ನಡೆಯಿತು. ಈ ವೇಳೆ ವೀರಗಾಸೆ ಕಲಾವಿದರು ಮತ್ತು ಚಂಡಿಕೆ ಮೇಳ, ಮಹಿಳೆಯರು ಕಳಸ, ಕುಂಭ ಹೊತ್ತುಕೊಂಡು ಸಾಗಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಡಶೇಸಿ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಸಮುದಾಯವನ್ನು ಒಗ್ಗೂಡಿಸುವ ಇಂತಹ ಜಯಂತಿಗಳ ಆಚರಣೆಯಿಂದ ಸಮಾಜಕ್ಕೆ ಕೊಡುಗೆ ನೀಡುವಂತಹ ಕಾರ್ಯವಾಗಬೇಕು. ನಾವು ಆರ್ಥಿಕ, ಸಾಮಾಜಿಕ ಹಾಗೂ ಶಿಕ್ಷಣದಲ್ಲಿ ಮುಂದುವರಿಯಬೇಕು. ಮಕ್ಕಳಿಗೆ ಮುಖ್ಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಹೇಳಿದರು.ಕುಷ್ಟಗಿ ಮದ್ದಾನಿ ಮಠದ ಶ್ರೀಕರಿಬಸವ ಶಿವಾಚಾರ್ಯ ಸ್ವಾಮೀಜಿ ಜಂಗಮ ಸಮಾಜದ ಐದು ಪೀಠಗಳು, ಬಸವಣ್ಣನವರ ವಿಚಾರಗಳನ್ನು ತಿಳಿಸಿದರು.
ಸಿ.ಪಿ. ಹಿರೇಮಠ ಕುಟುಂಬದ ವತಿಯಿಂದ ಸ್ಥಳೀಯ ಸಂಗೀತ ವಿದ್ವಾಂಸ ವೇದಮೂರ್ತಿ ಶಿವರಾಜ ಶಾಸ್ತ್ರೀ ಸಾಧನೆ ಗುರುತಿಸಿ ಜಂಗಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ವೇಳೆ ಜಂಗಮ ಸಮಾಜದ ತಾಲೂಕಾಧ್ಯಕ್ಷ ಶಿವುಕುಮಾರ ಗಂಧದಮಠ, ಗುರುಮೂರ್ತಯ್ಯ ಹಿರೇಮಠ, ಅಮರೇಶ ಸ್ವಾಮಿ, ಮಹೇಶಸ್ವಾಮಿ ಹಿರೇಮಠ, ಸಂಗಮೇಶ ಹಿರೇಮಠ, ಸಂಗಯ್ಯ, ಉಮೇಶ ಹಿರೇಮಠ, ಶಾಂತಯ್ಯ, ವೀರಭದ್ರಯ್ಯ ಹೊಸಮಠ, ಶ್ರೀಕರ ಸ್ವಾಮಿ, ದೊಡ್ಡಬಸಯ್ಯ, ಲೋಕೇಶ, ಮಲ್ಲಪ್ಪ ಜುಮಲಾಪೂರ ಮತ್ತು ಜಂಗಮ ಸಮಾಜದ ಯುವಕರು, ಮಹಿಳೆಯರು ಇದ್ದರು.