ಜೆಜೆಎಂ ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಿ

| Published : Jul 06 2025, 01:50 AM IST

ಜೆಜೆಎಂ ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಮಗಾರಿಗಳನ್ನು ಆದಷ್ಟು ಬೇಗನೆ ಮುಕ್ತಾಯಗೊಳಿಸಿ ಹರ್ ಘರ್ ಜಲ ಗ್ರಾಮವೆಂದು ಘೋಷಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಗ್ರಾಮೀಣ ಕುಡಿಯುವ ನೀರು ಮತು ನೈರ್ಮಲ್ಯ ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ.ಕೆ ಅಧ್ಯಕ್ಷತೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳ ಮತ್ತು ಬಹು ಗ್ರಾಮ ಕುಡಿಯುವ ನೀರು ಮತ್ತು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿತು.

ಬೆಳಗಾವಿ ವಿಭಾಗದ ಕಾರ್ಯಪಾಲಕ ಅಭಿಯಂತರ ಕಿರಣ ಘೋರ್ಪಡೆ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1235 ಗ್ರಾಮಗಳಿದ್ದು, 2183 ಜನವಸತಿಗಳಿವೆ. ಅವುಗಳಲ್ಲಿ 8,55,842 ಮನೆಗಳಿವೆ. ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ 705 ಗ್ರಾಮಗಳಿದ್ದು 912 ಜನವಸತಿಗಳಿವೆ. ಅವುಗಳಲ್ಲಿ 4,04,607 ಮನೆಗಳಿವೆ. ಬೆಳಗಾವಿ ವಿಭಾಗ ವ್ಯಾಪ್ತಿಯ ಜನವಸತಿಗಳಲ್ಲಿಯ 1,55,407 ಮನೆಗಳಿಗೆ ನಳ ಸಂಪರ್ಕವಿದ್ದು, ಜಲ ಜೀವನ್ ಮಿಷನ್ ಯೋಜನೆಯಡಿಯ ಹಂತ-1 ರಲ್ಲಿ 337 ಜನವಸತಿಗಳಲ್ಲಿ 1,12,867 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಗುರಿಯನ್ನು ಹೊಂದಿದ್ದು, 332 ಜನವಸತಿಗಳ ಕಾಮಗಾರಿ ಪೂರ್ಣಗೊಳಿಸಿ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸಲಾಗಿದೆ. 05 ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ. ಜಲ ಜೀವನ್ ಮಿಷನ್ ಯೋಜನೆಯಡಿ ಹಂತ-2 ರಲ್ಲಿ 575 ಜನವಸತಿಗಳಲ್ಲಿ 1,32,626 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ 435 ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆಯಾಗಿದ್ದು, 435 ಕಾಮಗಾರಿಗಳಿಗೆ ಗುತ್ತಿಗೆ ಕಾರ್ಯಾದೇಶ ನೀಡಲಾಗಿದೆ. 273 ಕಾಮಗಾರಿಗಳು ಪೂರ್ಣಗೊಂಡಿದ್ದು, 162 ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ ಎಂದರು.

ಜಲ ಜೀವನ್ ಮಿಷನ್ ಯೋಜನೆಯಡಿ ಹಂತ-3 ರಲ್ಲಿ 97 ಕಾಮಗಾರಿಗಳಲ್ಲಿ 3257 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಕಾಮಗಾರಿಗಳ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, 97 ಕಾಮಗಾರಿಗಳಿಗೆ ಗುತ್ತಿಗೆ ಕಾರ್ಯಾದೇಶ ನೀಡಲಾಗಿದೆ. 78 ಕಾಮಗಾರಿಗಳು ಪೂರ್ಣಗೊಂಡಿದ್ದು, 19 ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ. ಜಲ ಜೀವನ್ ಮಿಷನ್ಯೋಜನೆಯಡಿಯ ಹಂತ-4 ರಲ್ಲಿ 42 ಕಾಮಗಳಲ್ಲಿ 450 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಕಾಮಗಾರಿಗಳ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, 42 ಕಾಮಗಾರಿಗಳಿಗೆ ಗುತ್ತಿಗೆ ಕಾರ್ಯಾದೇಶ ನೀಡಲಾಗಿದೆ. 29 ಕಾಮಗಾರಿಗಳು ಪೂರ್ಣಗೊಂಡಿದ್ದು, 13 ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಕಾಮಗಾರಿಗಳನ್ನು ಆದಷ್ಟು ಬೇಗನೆ ಮುಕ್ತಾಯಗೊಳಿಸಿ ಹರ್ ಘರ್ ಜಲ ಗ್ರಾಮವೆಂದು ಘೋಷಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ 25 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು 262 ಜನವಸತಿಗಳಿಗೆ ನದಿ ಜಲ-ಮೂಲದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ 4 ಬಹುಗ್ರಾಮ ಯೋಜನೆಗಳನ್ನು ಯೋಜಿಸಲಾಗಿದ್ದು. ಒಟ್ಟಾರೆ 4 ಬಹುಗ್ರಾಮ ಯೋಜನೆಗಳು ಅನುಷ್ಠಾನಕ್ಕೆ ₹1444.00 ಕೋಟಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಈ 4 ಬಹುಗ್ರಾಮ ಯೋಜನೆಗಳ ಅನುಷ್ಠಾನದಿಂದ ಬೆಳಗಾವಿ ವಿಭಾಗ ವ್ಯಾಪ್ತಿಯ ತಾಲೂಕುಗಳ ಗ್ರಾಮಗಳು ಸಮಗ್ರವಾಗಿ ಕುಡಿಯುವ ನೀರಿನ ಸೌಲಭ್ಯ ಪಡೆಯುತ್ತವೆ ಎಂದು ನಿರ್ದೇಶಕರಿಗೆ ವಿವರಿಸಿದರು.

ಬೆಳಗಾವಿ ಕಾರ್ಯಪಾಲಕ ಅಭಿಯಂತರ ಕಿರಣ ಘೋರ್ಪಡೆ ಮಾತನಾಡಿ, ರಾಮದುರ್ಗ ತಾಲೂಕಿನ ಅವರಾದಿ ಬಹುಗ್ರಾಮ ಯೋಜನೆಯು ಮುಕ್ತಾಯ ಹಂತದಲ್ಲಿದ್ದು, ಬರುವ ನವೆಂಬರ್‌ - ಡಿಸೆಂಬರ್‌ 2025ರ ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಲೋಕಾರ್ಪಣೆ ಮಾಡುವ ಗುರಿ ಇದೆ ಎಂದು ಸಭೆಗೆ ತಿಳಿಸಿದರು. ಸದರಿ ಸಭೆಯಲ್ಲಿ ಉಪಸ್ಥಿತ ಗುತ್ತಿಗೆದಾರರಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ದೇಶಕರು ಸೂಚಿಸಿದರು.

ಚಿಕ್ಕೋಡಿ ಕಾರ್ಯಪಾಲಕ ಅಭಿಯಂತರರು ಪಾಂಡುರಂಗರಾವ್ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ 2 ವಿಭಾಗಗಳಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗ ವ್ಯಾಪ್ತಿಯಡಿ 8 ತಾಲೂಕುಗಳಿದ್ದು, ಇವುಗಳಲ್ಲಿ 517 ಗ್ರಾಮಗಳಿದ್ದು, 1240 ಜನ ವಸತಿಗಳಿವೆ. ಇವುಗಳಲ್ಲಿ 4,47,328 ಮನೆಗಳಿವೆ ದಿನಾಂಕ 15-08-2019 ರವರೆಗೆ 99,437 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಜೋಡಣೆಯಾಗಿರುತ್ತವೆ. ಬಾಕಿ ಉಳಿದ 3,47,891 ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಡಿ ನಾಲ್ಕು ಹಂತಗಳಲ್ಲಿ 1361 ಕಾಮಗಾರಿಗಳಿಗೆ ₹1252.06 ಕೋಟಿಗಳ ಮೊತ್ತಕ್ಕೆ ಕ್ರಿಯಾ ಯೋಜನೆ ಅನುಮೋದನೆಯಾಗಿರುತ್ತದೆ. ಒಟ್ಟು 1361 ಕಾಮಗಾರಿಗಳಡಿ 1070 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಉಳಿದ 291 ಕಾಮಗಾರಿಗಳು ವಿವಿಧ ಹಂತದಲ್ಲಿರುತ್ತವೆ. ಸದರಿ ಕಾಮಗಾರಿಗಳಿಗೆ ಇಲ್ಲಿಯವರೆಗೆ ₹620.24 ಕೋಟಿ ವೆಚ್ಚ ಭರಿಸಲಾಗಿದೆ. 3,47,891 ಮನೆಗಳ ಜೆ.ಜೆ.ಎಂ ಯೋಜನೆಯಡಿ ಇಲ್ಲಿಯವರೆಗೆ 2,95,548 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಜೋಡಣೆಯಾಗಿರುತ್ತವೆ. ಇದರೊಂದಿಗೆ ಜಲ ಜೀವನ ಮಿಷನ್ ಯೋಜನೆಯಡಿ 9 ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ₹1285.99 ಕೋಟಿಗಳಿಗೆ ಅನುಮೋದನೆಯಾಗಿರುತ್ತವೆ. ಸದರಿ 9 ಯೋಜನೆಗಳಲ್ಲಿ 8 ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ. ಉಳಿದ 1 ಯೋಜನೆ ಡಿ.ಪಿ.ಆರ್ ಅನುಮೋದನೆ ಹಂತದಲ್ಲಿದೆ. ಇಲ್ಲಿಯವರೆಗೆ ಶೇ.45 ಭೌತಿಕ ಪ್ರಗತಿ ಸಾಧಿಸಲಾಗಿದೆ. ₹356.15 ಕೋಟಿಗಳು ವೆಚ್ಚಭರಿಸಲಾಗಿದೆ. ಚಿಕ್ಕೋಡಿ ವಿಭಾಗ ವ್ಯಾಪ್ತಿಯಡಿಯಲ್ಲಿ ವಿಭಾಗ ಮಟ್ಟದಲ್ಲಿ ರಾಸಾಯನಿಕ ಮತ್ತು ಮೈಕ್ರೋ ಬಯೋಲಾಜಿ ಪ್ರಯೋಗಾಲಯಳಿವೆ, ಹಾಗೂ ತಾಲೂಕು ಮಟ್ಟದಲ್ಲಿ ಎರಡು ಪ್ರಯೋಗಾಲಯಗಳು ಸ್ಥಾಪಿಸಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರರು ಚಿಕ್ಕೋಡಿಯವರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಧಾನ ಇಂಜೀನಿಯರ್‌ ಎಜಾಜ್ ಹುಸೇನ್ ಜಾಫರ್‌ ಷರೀಫ್ ಸುತಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪಕಾರ್ಯದರ್ಶಿ ಮತ್ತು ಕೇಂದ್ರ ಕಚೇರಿಯ ಸಿಬ್ಬಂದಿ ಶ್ರೀ ಕುಂಬಾರ್ ಅಧೀಕ್ಷಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಬೆಳಗಾವಿ ಹಾಗೂ ರವಿ ಬಂಗಾರೆಪ್ಪನ್ನರ, ಯೋಜನಾ ನಿರ್ದೆಶಕರು ಜಿಲ್ಲಾ ಪಂಚಾಯತಿ ಬೆಳಗಾವಿ ಹಾಗೂ ಕಿರಣ ಘೋರ್ಪಡೆ ಬೆಳಗಾವಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಮತ್ತು ಪಾಂಡುರಂಗ ರಾವ್ ಚಿಕ್ಕೋಡಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಗೂ ಜಿಲ್ಲೆಯ ಎಲ್ಲ ಸಹಾಯಕ ಕಾರ್ಯಪಾಲಕ ಅಭಿಯಂತರರು, ಶಾಖಾಧಿಕಾರಿಗಳು ಮತ್ತು ವಿಭಾಗದ ಸಿಬ್ಬಂದಿ ಹಾಜರಿದ್ದರು.

ಬೆಂಗಳೂರು, ಜಾಫರ್‌ ಷರೀಫ್ ಸುತಾರ, ಉಪಕಾರ್ಯದರ್ಶಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಮತ್ತು ಕೇಂದ್ರ ಕಚೇರಿಯ ಸಿಬ್ಬಂದಿ ಶ್ರೀ ಕುಂಬಾರ್, ಅಧೀಕ್ಷಕ ಅಭಿಯಂತರರು ಗ್ರಾಮೀಣ ಕುಡಿಯುವ ಜಿಲ್ಲಾ ಪಂಚಾಯತಿ ನೀರು ಮತ್ತು ನೈರ್ಮಲ್ಯ ವೃತ್ತ ಬೆಳಗಾವಿ ಹಾಗೂ ಯೋಜನಾ ನಿರ್ದೆಶಕರು ರವಿ ಬಂಗಾರೆಪ್ಪನ್ನರ ಹಾಗೂ ಕಿರಣ ಘೋರ್ಪಡೆ ಬೆಳಗಾವಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಮತ್ತು ಪಾಂಡುರಂಗ ರಾವ್ ಚಿಕ್ಕೋಡಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಗೂ ಜಿಲ್ಲೆಯ ಎಲ್ಲ ಸಹಾಯಕ ಕಾರ್ಯಪಾಲಕ ಅಭಿಯಂತರರು, ಶಾಖಾಧಿಕಾರಿಗಳು ಮತ್ತು ವಿಭಾಗದ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.