ತಡಸದಲ್ಲಿ ಮಿನಿ ಬಸ್ ನಿಲ್ದಾಣ ನಿರ್ಮಿಸಲು ಒತ್ತಾಯ

| Published : Feb 04 2025, 12:30 AM IST

ಸಾರಾಂಶ

ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಪಂಚಾಯಿತಿ ಮುಂಭಾಗದಲ್ಲಿ ಗೇಟ್ ಹತ್ತಿರ ಮಿನಿ ಬಸ್ ನಿಲ್ದಾಣ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಸಂಘಟನೆ ವತಿಯಿಂದ ಬಸ್ ನಿಲ್ದಾಣ ಕಂಟ್ರೋಲರ್‌ಗೆ ಮನವಿ ಸಲ್ಲಿಸಲಾಯಿತು.

ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದ ಪಂಚಾಯಿತಿ ಮುಂಭಾಗದಲ್ಲಿ ಗೇಟ್ ಹತ್ತಿರ ಮಿನಿ ಬಸ್ ನಿಲ್ದಾಣ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಸಂಘಟನೆ ವತಿಯಿಂದ ಬಸ್ ನಿಲ್ದಾಣ ಕಂಟ್ರೋಲರ್‌ಗೆ ಮನವಿ ಸಲ್ಲಿಸಲಾಯಿತು.ನಂತರ ಮಾತನಾಡಿದ ಕರವೇ ಗಜಪಡೆ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ, ಸಾರ್ವಜನಿಕರ ಅನುಕೂಲಕ್ಕಾಗಿ ತಡಸ ಗ್ರಾಮ ಪಂಚಾಯತ್ ಎದುರುಗಡೆ ಹುಬ್ಬಳ್ಳಿ-ಶಿರಸಿ ರೋಡ್ ಪಕ್ಕ ಮಿನಿ ಬಸ್ ನಿಲ್ದಾಣ ಅವಶ್ಯಕತೆ ಇರುತ್ತದೆ. ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ವೃದ್ಧರಿಗೆ ವಿಶೇಷಚೇತನರಿಗೆ ಮಳೆಗಾಲದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ಬಹಳ ತೊಂದರೆ ಆಗುತ್ತಿರುವುದರಿಂದ ಈ ಭಾಗದ ಜನರಿಗೆ ಅನುಕೂಲಕರವಾಗುವಂತೆ ಮಿನಿ ಬಸ್ ನಿಲ್ದಾಣ ನಿರ್ಮಿಸಿ ಕೊಡಬೇಕೆಂದು ಕೋರಿದರು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರ ಕಚೇರಿ ಎದುರುಗಡೆ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ಬಸ್ ನಿಲ್ದಾಣದ ಕಂಟ್ರೋಲರ್ ಸರಸ್ವತಿ ಕಮ್ಮಾರ ಈ ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶಂಕರ ಬಡಿಗೇರ, ಜಿಲ್ಲಾ ಗೌರವಾಧ್ಯಕ್ಷ ಗಂಗಾಧರಯ್ಯ ಪಾಟೀಲ್ , ಜಿಲ್ಲಾ ಮಹಿಳಾ ಅಧ್ಯಕ್ಷ ಗೀತಾಬಾಯಿ ಲಮಾಣಿ, ಜಿಲ್ಲಾ ಉಪಾಧ್ಯಕ್ಷ ಯೊಸುಫ್ ಸೈಕಲಗಾರ, ವಾಗೀಸ್ ಎಮ್ಮಿ, ಬಸವರಾಜ ಪಟ್ಟಣಶೆಟ್ಟಿ, ಈರಪ್ಪ ಅಂಗಡಿ, ರೇಶ್ಮಾ ಬೀರಬ್ಬಿ, ರವಿ ಮಾಮನಿ, ಜ್ಯೋತಿ ಅರಕಸಾಲಿ, ಮಹಾವೀರ ಹಳ್ಳಿಯವರ, ರಾಮಣ್ಣ ಕಮ್ಮಾರ, ಕಾಸಪ್ಪ ಪೂಜಾರ, ಈರಣ್ಣ ಬೋಸ್ಲೆ, ಸಿದ್ದಯ್ಯ ಹಿರೇಮಠ್, ಬ್ರಹ್ಮಾನಂದ ಕಮ್ಮಾರ್, ನಾಗರಾಜ್ ಬಡಿಗೇರ್, ರವಿ ಪಾಸ್ಟರ , ಮೂಗಣ್ಣ ತಡಸ, ಕೃಷ್ಣಾ ಬಡಿಗೇರ ಇತರರು ಇದ್ದರು.