ಲಕ್ಷ್ಮೀನಾರಾಯಣ್ ಮೇಲೆ ಹಲ್ಲೆಗೆ ಖಂಡನೆ

| Published : Oct 01 2024, 01:17 AM IST

ಸಾರಾಂಶ

ಕೋಲಾರದ ಕಾಂಗ್ರೇಸ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಾಣ ಮತ್ತು ಕೋಲಾರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬುರ ಮೇಲೆ ನಡೆದಿರುವ ಹಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎಂ.ಮಂಜುನಾಥ್ ಖಂಡಿಸಿದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆಕೋಲಾರದ ಕಾಂಗ್ರೇಸ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಾಣ ಮತ್ತು ಕೋಲಾರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬುರ ಮೇಲೆ ನಡೆದಿರುವ ಹಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎಂ.ಮಂಜುನಾಥ್ ಖಂಡಿಸಿದರು.ಪಟ್ಟಣದ ಶ್ರೀ ಸಾಯಿ ಕಂಟ್ರಾಕ್ಟರ್ಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಉಸ್ತುವಾರಿಗಳು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಗಳ ಎದುರು ಈ ರೀತಿ ಹಲ್ಲೆ ನಡೆದಿದಿರುವುದು ಅತ್ಯಂತ ಬೇಸರದ ಸಂಗತಿ ಎಂದರು.ಸಹಿಸಲು ಸಾಧ್ಯವಿಲ್ಲ

ಹಿಂದುಳಿದ ವರ್ಗಗಳ ನಾಯಕರ ಮೇಲೆ ಇತ್ತೀಚೆಗೆ ತೇಜೋವಧೆ, ದೌರ್ಜನ್ಯ ಹಲ್ಲೆಗಳು ನಡೆಯುತ್ತಿವೆ, ಕೋಲಾರದಲ್ಲಿ ಹಿಂದುಳಿದ ವರ್ಗಗಳ ಮಖಂಡರೂ ಆಗಿರುವ ಲಕ್ಷ್ಮೀನಾರಾಯಣ ಮತ್ತು ಪ್ರಸಾದ್ ಬಾಬು ಮೇಲೆ ಹಲ್ಲೆ ದೌರ್ಜನ್ಯ ನಡೆದಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.ಸಂಬಂಧಪಟ್ಟವರು ಈ ಕೂಡಲೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಅವರು ಇನ್ನು ಮುಂದೆ ಇದೇ ರೀತಿ ಹಿಂದುಳಿದ ನಾಯಕರ ಮೇಲೆ ದೌರ್ಜನ್ಯಗಳು ನಡೆದರೆ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಒಕ್ಕೂಟದ ಗೌರವಾಧ್ಯಕ್ಷ ಎಲ್.ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಚಿನ್ನಿವೆಂಕಟೇಶ್, ಜಂಟಿ ಕಾರ್ಯದರ್ಶಿ ಎಸ್.ಬಿ.ವೆಂಕಟೇಶ್, ಸಂಚಾಲಕ ಆದಿನಾರಾಯಣ ಇದ್ದರು.