ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಸಂತಾಪ

| Published : Sep 26 2025, 01:00 AM IST

ಸಾರಾಂಶ

ಎಲ್ ಭೈರಪ್ಪನವರ ನಿಧನಕ್ಕೆ ಹೋಬಳಿ ಕೇಂದ್ರದಲ್ಲಿ ವಿವಿಧ ಸಂಘ ಸಂಸ್ಥೆಗಳು, ಗ್ರಾಮಸ್ಥರು ಗುರುವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಸಾಹಿತಿ ಎಸ್ ಎಲ್ ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜಗನ್ನಾಥ್ ಮಾತನಾಡಿ, ಎಸ್ ಎಲ್ ಭೈರಪ್ಪನವರು ನಮ್ಮ ತಂದೆಯವರಾದ ದಿವಂಗತ ಶ್ರೀನಿವಾಸ್ ಅಯ್ಯಂಗಾರ್ ಅವರ ಶಿಷ್ಯರಾಗಿದ್ದರು. ನಮ್ಮ ತಂದೆಯವರು ಬದುಕಿದ್ದ ಸಂದರ್ಭದಲ್ಲಿ ಅನೇಕ ಬಾರಿ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಬಹಳ ಸರಳವಾದ ವ್ಯಕ್ತಿತ್ವ ಅವರದ್ದು. ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮಾಡಿಸಿದ್ದರು ಎಂದು ನೆನೆದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ ನಿಧನಕ್ಕೆ ಹೋಬಳಿ ಕೇಂದ್ರದಲ್ಲಿ ವಿವಿಧ ಸಂಘ ಸಂಸ್ಥೆಗಳು, ಗ್ರಾಮಸ್ಥರು ಗುರುವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.ಹೋಬಳಿ ಕೇಂದ್ರದ ಪೊಲೀಸ್ ಠಾಣೆ ಮುಂಭಾಗ ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಮತ್ತು ಗ್ರಾಮಸ್ಥರು ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದರು. ಸಾಹಿತಿ ಎಸ್ ಎಲ್ ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜಗನ್ನಾಥ್ ಮಾತನಾಡಿ, ಎಸ್ ಎಲ್ ಭೈರಪ್ಪನವರು ನಮ್ಮ ತಂದೆಯವರಾದ ದಿವಂಗತ ಶ್ರೀನಿವಾಸ್ ಅಯ್ಯಂಗಾರ್ ಅವರ ಶಿಷ್ಯರಾಗಿದ್ದರು. ನಮ್ಮ ತಂದೆಯವರು ಬದುಕಿದ್ದ ಸಂದರ್ಭದಲ್ಲಿ ಅನೇಕ ಬಾರಿ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಬಹಳ ಸರಳವಾದ ವ್ಯಕ್ತಿತ್ವ ಅವರದ್ದು. ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮಾಡಿಸಿದ್ದರು. ಅವರ ಕೃತಿಗಳು ಕೇವಲ ಭಾರತ ದೇಶವಲ್ಲದೆ ವಿಶ್ವದ ಗಮನ ಸೆಳೆದಿದೆ. ಅವರು ನಮ್ಮ ಹೋಬಳಿಯಲ್ಲಿ ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಅವರ ಹುಟ್ಟೂರಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಹೋಬಳಿ ಕಸಾಪ ಅಧ್ಯಕ್ಷ ದೊರೆಸ್ವಾಮಿ, ಉಪ ತಹಸೀಲ್ದಾರ್ ಪೂರ್ಣಿಮಾ, ಪಿಎಸ್ಐ ಭರತ್ ರೆಡ್ಡಿ, ಗ್ರಾ ಪಂ ಅಧ್ಯಕ್ಷ ಎನ್ಎಸ್ ಮಂಜುನಾಥ್, ವೀರಶೈವ ಮುಖಂಡರಾದ ಕೃಪಾ ಶಂಕರ್, ಜೆ ಮಾವಿನಹಳ್ಳಿ ಸುರೇಶ್, ಗಿರೀಶ್, ಎನ್. ಸಿ ಉಮೇಶ್, ಆನಂದ್, ಪ್ರದೀಪ್, ಗ್ರಾಮದ ಪ್ರಮುಖರಾದ ಎಚ್. ಜೆ. ಕಿರಣ್, ಎನ್. ಜೆ. ಸೋಮನಾಥ್, ಎನ್ಎಸ್ ಲಕ್ಷ್ಮಣ್, ಎನ್ ಆರ್ ಶಿವಕುಮಾರ್, ಮಹಮದ್ ಜಾವೀದ್, ಎನ್ಎಸ್ ಪ್ರಕಾಶ್, ವಿಕ್ಟರ್, ನಟರಾಜ್ ಯಾದವ್, ಹೊನ್ನೇಗೌಡ, ಕಿರಣ್ ಗವಿರಂಗಯ್ಯ, ಎನ್ ಎನ್, ಮಹೇಶ್, ಅಕ್ಕು, ನಾರಾಯಣಗೌಡ, ಮೆಡಿಕಲ್ ಸಂತೋಷ್, ಬ್ಯಾಂಕ್ ರಾಜು, ರವಿಶಾಚಾರ್, ವಿರುಪಾಕ್ಷ, ಎನ್ ಆರ್‌ ಚಂದ್ರು, ಫ್ರೂಟ್ ಸ್ಟಾಲ್ ಗಣೇಶ್, ಬ್ಯಾಂಕ್ ರಾಜು, ಜಯ ಕೀರ್ತಿ ಸೇರಿದಂತೆ ಇತರರು ಹಾಜರಿದ್ದರು.