ಸಾರಾಂಶ
ಈ ಹಿಂದೆ ವಿವಿಧ ರೀತಿಯ ನಮೂನೆವುಳ್ಳ ಅರ್ಜಿಗಳನ್ನು ಭರ್ತಿ ಮಾಡಿ ಮತದಾರರ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ, ಈಗ ಮೊಬೈಲ್ ಮೂಲಕ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ.
ಕನಕಗಿರಿ:
ಮುಂಬರುವ ಮತದಾರರ ಪರಿಷ್ಕರಣೆಗೆ ಬೂತ್ ಮಟ್ಟದ ಅಧಿಕಾರಿಗಳು ಮೊಬೈಲ್ ತರಬೇತಿ ಪಡೆದು ಮತದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಬಿಎಲ್ಒಗಳ ಮೊಬೈಲ್ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.
ಈ ಹಿಂದೆ ವಿವಿಧ ರೀತಿಯ ನಮೂನೆವುಳ್ಳ ಅರ್ಜಿಗಳನ್ನು ಭರ್ತಿ ಮಾಡಿ ಮತದಾರರ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ, ಈಗ ಮೊಬೈಲ್ ಮೂಲಕ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ. ಪರಿಷ್ಕರಣೆಯನ್ನು ಯಾವ ರೀತಿ? ಹೇಗೆ ಮಾಡಬೇಕು ಎನ್ನುವುದನ್ನು ಬಿಎಲ್ಒಗಳು ಅರಿತುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಮತದಾರರ ಪರಿಷ್ಕರಣೆ ಸಂದರ್ಭದಲ್ಲಿ ಮೊಬೈಲ್ ಮೂಲಕವೇ ತಿದ್ದುಪಡಿ, ತೆಗೆದು ಹಾಕುವುದು, ಹೊಸ ಸೇರ್ಪಡೆ ಸೇರಿದಂತೆ ನಾನಾ ನಮೂನೆಗಳನ್ನು ಮೊಬೈಲ್ ಆ್ಯಪ್‌ನಲ್ಲಿಯೇ ತುಂಬುವುದಕ್ಕೆ ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಈ ವಿನೂತನ ಪರಿಷ್ಕರಣೆಯಲ್ಲಿ ಬಿಎಲ್ಒಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆ ಎಂದು ತಿಳಿಸಿದರು.ಪ್ರಾಧ್ಯಾಪಕರಾದ ಮಂಜುನಾಥ, ಮರ್ವಿನ್ ಡಿಸೋಜಾ, ವಿರೇಶ ಕೆಂಗಲ್ ಅವರಿಂದ ಪರಿಷ್ಕರಣೆ ಕುರಿತು ತರಬೇತಿ ನೀಡಿದರು.
ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ, ಚುನಾವಣಾ ವಿಭಾಗದ ಶರಣು, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಬಿಎಲ್ಒಗಳಾದ ಕನಕರೆಡ್ಡಿ ಮಾದಿನಾಳ, ಶಿವಾನಂದ ಬೆಲ್ಲದ, ವೆಂಕೋಬ ಪೂಜಾರ, ರಂಗಾರೆಡ್ಡಿ, ಮಲ್ಲಿಕಾರ್ಜುನ ಕುಷ್ಠಗಿ, ಮಲ್ಲಿಕಾರ್ಜುನ ಶಿರಿಗೇರಿ, ಉಮೇಶ ಕಂದಕೂರು ಸೇರಿದಂತೆ ಇತರರಿದ್ದರು.