ಇಂದು ಚಲುವೇಗೌಡರಿಗೆ ಅಭಿನಂದನೆ, ಛಲಗಾರ ಚಲುವ ಕೃತಿ ಬಿಡುಗಡೆ

| Published : Jan 05 2025, 01:31 AM IST

ಇಂದು ಚಲುವೇಗೌಡರಿಗೆ ಅಭಿನಂದನೆ, ಛಲಗಾರ ಚಲುವ ಕೃತಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ವಯೋ ನಿವೃತ್ತಿಗೊಂಡ ಕನ್ನಡ ಉಪನ್ಯಾಸಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎನ್.ಚಲುವೇಗೌಡರಿಗೆ ಎನ್.ಚಲುವೇಗೌಡ ಅಭಿನಂದನಾ ಸಮಿತಿಯಿಂದ ಅಭಿನಂದನೆ ಹಾಗೂ ಛಲಗಾರ ಚಲುವ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭ ಜ.5ರಂದು ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎನ್.ಚಲುವೇಗೌಡ ಅಭಿನಂದನಾ ಸಮಿತಿ ಇತ್ತೀಚೆಗೆ ವಯೋ ನಿವೃತ್ತಿಗೊಂಡ ಕನ್ನಡ ಉಪನ್ಯಾಸಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎನ್.ಚಲುವೇಗೌಡರಿಗೆ ಅಭಿನಂದನೆ ಹಾಗೂ ಛಲಗಾರ ಚಲುವ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭ ಜ.5ರಂದು ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆಯಲಿದೆ.

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸುವರು. ಇದೇ ಛಲಗಾರ ಚಲುವ ಅಭಿನಂದನಾ ಕೃತಿಯನ್ನು ಖ್ಯಾತ ವಾಗ್ಮಿ ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಬಿಡುಗಡೆ ಮಾಡುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಚಲುವೇಗೌಡರನ್ನು ಕುರಿತು ಅಭಿನಂದನಾ ಭಾಷಣ ಮಾಡಲಿದ್ದಾರೆ. ವಿದ್ಯಾ ಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ. ಬಸವರಾಜು ಅಭಿನಂದನೆ ಸಲ್ಲಿಸುವರು.

ಅಭಿನಂದನೆ ಕೃತಿ ಕುರಿತು ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡುವರು. ವಿಶೇಷ ಆಹ್ವಾನಿತರಾಗಿ ಶಾಸಕ ಕೆ.ವಿವೇಕಾನಂದ, ಮಾಜಿ ಶಾಸಕ ಎನ್.ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಕೆಪಿಸಿಸಿ ಸದಸ್ಯ ಡಾ.ಬಿ.ರೇವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಕರ್ನಾಟಕ ವೈದ್ಯಕೀಯ ಪರಿಷತ್ ನಿರ್ದೇಶಕ ಡಾ.ಎಚ್.ಎನ್.ರವೀಂದ್ರ, ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಪಿ.ನಿಂಗರಾಜೇಗೌಡ, ಮೈಸೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಿ.ಗಿರಿಗೌಡ, ಎಂ.ಕೆ.ಕೆಂಪೇಗೌಡ ನಿವೃತ್ತ ನಿರ್ದೇಶಕರು, ಪಂಚಾಯತ್ ರಾಜ್ ಇಲಾಖೆ, ವಿದ್ಯಾ ಪ್ರಚಾರ ಸಂಘದ ಉಪಾಧ್ಯಕ್ಷೆ ಶಾಂತಮ್ಮ, ಸಹ ಕಾರ್ಯದರ್ಶಿ ಬಿ.ಎಸ್.ಗೋಪಾಲಸ್ವಾಮಿ, ಖಜಾಂಚಿ ಎನ್.ರಾಮೇಗೌಡ, ನಿರ್ದೇಶಕರಾದ ಕೆ.ಸೋಮೇಗೌಡ, ಡಾ.ಎಂ.ಮಾಯಿಗೌಡ, ಸುನೀತಾ ಪುಟ್ಟಣ್ಣಯ್ಯ, ಎಲ್.ಡಿ.ರವಿ, ಡಾ.ಎಚ್.ಜಿ. ಲೋಕನಾಥ್, ಕೆ.ಬಿ.ಕುಮಾರಸ್ವಾಮಿ, ಡಾ.ಕೆ.ಖಾಬು, ಎಂ.ಎಸ್.ಮರಿಸ್ವಾಮಿಗೌಡ, ಸಿ.ಬಿ.ಚಂದ್ರಶೇಖರ್, ಪಿ.ಎಸ್.ಅಂಗರಾಜು, ವಿಶ್ರಾಂತ ಪ್ರಾಂಶುಪಾಲ ಪ್ರೊ.ಬಿ.ನಾರಾಯಣಗೌಡ, ಎಸ್.ನಾಗರಾಜು, ಡಿ.ಕೆ.ದೇವೆಗೌಡ, ಬಿ.ಸುರೇಶ್ ಯಡಿಯಾಳ್, ಅಭಿನಂದನಾ ಗ್ರಂಥದ ಸಂಪಾದಕ ಲೋಕೇಶ್ ಚಂದಗಾಲು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಇದೇ ವೇಳೆ ಗ್ರಾಮರಂಗ ಸಾಂಸ್ಕೃತಿಕ ವೇದಿಕೆಯ ಬಿ.ಎಸ್.ನಾಗಲಿಂಗೇಗೌಡ ಮತ್ತವರ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್.ಚಲುವೇಗೌಡ ಅಭಿನಂದನಾ ಸಮಿತಿಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.