ಪ್ರಮಾಣವಚನ ಸ್ವೀಕರಿಸಿದ ಎಂಎಲ್ ಸಿ ಸಿ.ಟಿ.ರವಿಗೆ ಅಭಿನಂದನೆ

| Published : Jun 26 2024, 12:31 AM IST

ಪ್ರಮಾಣವಚನ ಸ್ವೀಕರಿಸಿದ ಎಂಎಲ್ ಸಿ ಸಿ.ಟಿ.ರವಿಗೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಕಡೂರು ಹಾಗೂ ಚಿಕ್ಕ ಮಗಳೂರು ಕ್ಷೇತ್ರದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಮುಖಂಡರು ಅಭಿನಂದಿಸಿದರು. ಬೆಂಗಳೂರಿನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಸಚಿವರಾದ ಸಿ.ಟಿ.ರವಿಯವರು ಪ್ರಮಾಣವಚನ ಸ್ವೀಕರಿಸಿ ವೇದಿಕೆಯಿಂದ ಅವರು ಕೆಳಗೆ ಇಳಿಯುತಿದ್ದಂತೆಯೇ ಕಾರ್ಯಕ್ರಮ ವೀಕ್ಷಣೆಗೆ ತೆರಳಿದ್ದ ಕಡೂರು ಹಾಗೂ ಚಿಕ್ಕಮಗಳೂರು ಕ್ಷೇತ್ರದ ಮುಖಂಡರಾದ ಕಡೂರು ಎ. ಮಣಿ ನೇತ್ವತ್ವದಲ್ಲಿ ಸಿ.ಟಿ ರವಿ ಅವರಿಗೆ ಶ್ರೀ ರಾಮನ ಭಾವಚಿತ್ರ ನೀಡಿ ಶುಭ ಕೋರಿದರು.

ಮುಖಂಡರಾದ ಎ.ಮಣಿ ನೇತೃತ್ವದಲ್ಲಿ ಶ್ರೀರಾಮನ ಭಾವಚಿತ್ರ ನೀಡಿ ಶುಭ ಹಾರೈಕೆ

ಕನ್ನಡಪ್ರಭ ವಾರ್ತೆ, ಕಡೂರು

ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಕಡೂರು ಹಾಗೂ ಚಿಕ್ಕ ಮಗಳೂರು ಕ್ಷೇತ್ರದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಮುಖಂಡರು ಅಭಿನಂದಿಸಿದರು.

ಬೆಂಗಳೂರಿನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಸಚಿವರಾದ ಸಿ.ಟಿ.ರವಿಯವರು ಪ್ರಮಾಣವಚನ ಸ್ವೀಕರಿಸಿ ವೇದಿಕೆಯಿಂದ ಅವರು ಕೆಳಗೆ ಇಳಿಯುತಿದ್ದಂತೆಯೇ ಕಾರ್ಯಕ್ರಮ ವೀಕ್ಷಣೆಗೆ ತೆರಳಿದ್ದ ಕಡೂರು ಹಾಗೂ ಚಿಕ್ಕಮಗಳೂರು ಕ್ಷೇತ್ರದ ಮುಖಂಡರಾದ ಕಡೂರು ಎ. ಮಣಿ ನೇತ್ವತ್ವದಲ್ಲಿ ಸಿ.ಟಿ ರವಿ ಅವರಿಗೆ ಶ್ರೀ ರಾಮನ ಭಾವಚಿತ್ರ ನೀಡಿ ಶುಭ ಕೋರಿದರು.. ಇದೇ ಸಂದರ್ಭದಲ್ಲಿ ತರೀಕೆರೆಯ ಮಾಜಿ ಶಾಸಕ ಡಿ.ಎಸ್. ಸುರೇಶ್, ಬಿಜೆಪಿಯ ಮುಖಂಡರಾದ ಚಿಕ್ಕದೇವನೂರು ರವಿ, ಉದಯಕುಮಾರ್ ಚೌಳಹಿರಿಯೂರಿನ ಮಲ್ಲಿಕಾರ್ಜುನ್ ಸೇರಿ ವಿವಿಧ ಮುಖಂಡರು, ಕಾರ್ಯಕರ್ತರು ಇದ್ದರು. .

ಇದೇ ಸಂದರ್ಭದಲ್ಲಿ ಮಾತನಾಡಿದ ಕಡೂರು ಎ ಮಣಿ, ಚಿಕ್ಕಮಗಳೂರು ಜಿಲ್ಲೆಯ ನಮ್ಮ ನಾಯಕರಾಗಿರುವ ಮಾಜಿ ಸಚಿವರಾದ ಸಿ.ಟಿ ರವಿ ಅವರನ್ನು ಭಾರತೀಯ ಜನತಾ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುವ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಆದ್ಯತೆ ನೀಡಲಾಗಿದೆ. ಇದಕ್ಕೆ ಕಾರಣವಾಗಿರುವ ಎಲ್ಲ ಮುಖಂಡರಿಗೂ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.

----------------

25ಕೆಕೆಡಿಯು4

ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಸಿ ಟಿ ರವಿ ಅವರಿಗೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಅಭಿನಂದಿಸಿದರು.