ಸಾರಾಂಶ
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಹಾಗೂ ವಿ. ಸೋಮಣ್ಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಮುಂದಾಗಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಮುಂದಾಗಿ ಬ್ಯಾನರ್ ಹರಿದ ಘಟನೆ ತಾಲೂಕಿನ ಗಳಿಗೆಕರೆಯಲ್ಲಿ ಭಾನುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಹಾಗೂ ವಿ. ಸೋಮಣ್ಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಮುಂದಾಗಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಮುಂದಾಗಿ ಬ್ಯಾನರ್ ಹರಿದ ಘಟನೆ ತಾಲೂಕಿನ ಗಳಿಗೆಕರೆಯಲ್ಲಿ ಭಾನುವಾರ ನಡೆದಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ನರೇಂದ್ರ ಮೋದಿ, ಸೋಮಣ್ಣಗೆ ಶುಭ ಕೋರಿ ಬ್ಯಾನರ್ ಹಾಕಿ ವಿಜಯೋತ್ಸವ ಆಚರಿಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ನರೇಂದ್ರ ಮೋದಿ ಭಾವಚಿತ್ರಕ್ಕೆ ಹಾರಹಾಕಿ ವಿ.ಸೋಮಣ್ಣ ಪೋಟೋ ಅರೆದು ಹಾಕಿ ಕಲ್ಲು ತೊರಾಟ ಮಾಡಿ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೆಲೆ ಹಲ್ಲೆ ಮಾಡಿದ್ದು, ಮಾತಿನ ಚಕಮಾಕಿ ನಡೆದು ಕೈ ಕೈ ಮೀಲಾಯಿಸಿದರು.ಜಗಳ ಆಡುತ್ತಿರುವಾಗ ಗಂಡನನ್ನು ಬೀಡಸಲು ಬಂದ ದೇವರಾಜಮ್ಮ(38) ಎಂಬ ಮಹಿಳೆಗೆ ಹಲ್ಲೆ ಮಾಡಿದ್ದಾರೆ. ದೇವರಾಜಮ್ಮರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗ ದಾಖಲಿಸಲಾಗಿದೆ. ದೇವರಾಜು ಹಾಗೂ ದೇವರಾಜಮ್ಮ ಇಬ್ಬರಿಗೂ ಪೇಟಾಗಿದೆ.ಬಿಜೆಪಿ ಮುಖಂಡ ಎಸ್ .ಡಿ. ದಿಲೀಪ್ ಕುಮಾರ್ ಮಾತನಾಡಿ, ವಿಜಯೋತ್ಸವ ಆಚರಿಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿ ಸೋಮಣ್ಣ ಬ್ಯಾನರ್‌ಳಿಗೆ ಕಲ್ಲು ತೋರಿ, ಕಾರ್ಯಕರ್ತರು ಮೇಲೆ ಹಲ್ಲೆ ಮಾಡಿದ್ದು ಖಂಡನೀಯ. ಕೂಡಲೇ ಈ ಗಲಾಟೆಯಲ್ಲಿ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನು ಚೇಳೂರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಚೇಳೂರು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.