ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ: ಶಾಸಕ ಮಧು ಜಿ.ಮಾದೇಗೌಡ ವಿಶ್ವಾಸ

| Published : Nov 06 2024, 12:44 AM IST

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ: ಶಾಸಕ ಮಧು ಜಿ.ಮಾದೇಗೌಡ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಶಾಲೆ ಅಭಿವೃದ್ಧಿಗಾಗಿ ನನ್ನ ಅನುದಾನದಲ್ಲಿ 4 ಲಕ್ಷ ರು. ಹಣ ನೀಡಿದ್ದೇನೆ. ಶಾಲೆಯನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲದ ಹೊಣೆಯಾಗಿದೆ. ಈ ಹಿಂದೆಯೂ ಮೆಣಸಗೆರೆ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾವನ್ನು ನೀಡಿದ್ದೇನೆ. ನಮ್ಮ ತಂದೆ ಜಿ.ಮಾದೇಗೌಡರು ಈ ಗ್ರಾಮಕ್ಕೆ ಬಹಳ ವಿಶೇಷ ಗೌರವವನ್ನು ನೀಡುತ್ತಿದ್ದರು. ನನ್ನ ಪುತ್ರ ಆಶಯ್‌ಮಧು ಸಹ ಈ ಶಾಲೆಗೆ ಕೈಲಾದ ಸಹಾಯ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಭಾರತೀನಗರ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.ಮೆಣಸಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ನಮ್ಮ ಕ್ಷೇತ್ರದ ಪಕ್ಕವೇ ಇರುವ ಚನ್ನಪಟ್ಟಣಕ್ಕೆ ಬಹಳಷ್ಟು ಸಂಬಂಧಗಳು ಬೆಳೆದಿವೆ. ಜೊತೆಗೆ ನಮ್ಮ ವಿದ್ಯಾಸಂಸ್ಥೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಚನ್ನಪಟ್ಟಣ ಕ್ಷೇತ್ರದಿಂದ ಬಂದು ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಅಂತಹವರನ್ನು ಈಗಾಗಲೇ ನಮ್ಮ ಕಾರ್ಯಕರ್ತರು ಸಂಪರ್ಕಿಸಿದ್ದಾರೆ ಎಂದರು.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ವರಿಷ್ಠರು, ನಾಯಕರು ಸಿ.ಪಿ.ಯೋಗೇಶ್ವರ್ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಹಾಗಾಗಿ ಅವರ ಗೆಲುವು ನಿಶ್ಚಿತ ಎಂದು ತಿಳಿಸಿದರು.ಶಾಲೆಗೆ 4 ಲಕ್ಷ ರು. ಅನುದಾನ:ಗ್ರಾಮದ ಶಾಲೆ ಅಭಿವೃದ್ಧಿಗಾಗಿ ನನ್ನ ಅನುದಾನದಲ್ಲಿ 4 ಲಕ್ಷ ರು. ಹಣ ನೀಡಿದ್ದೇನೆ. ಶಾಲೆಯನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲದ ಹೊಣೆಯಾಗಿದೆ. ಈ ಹಿಂದೆಯೂ ಮೆಣಸಗೆರೆ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾವನ್ನು ನೀಡಿದ್ದೇನೆ. ನಮ್ಮ ತಂದೆ ಜಿ.ಮಾದೇಗೌಡರು ಈ ಗ್ರಾಮಕ್ಕೆ ಬಹಳ ವಿಶೇಷ ಗೌರವವನ್ನು ನೀಡುತ್ತಿದ್ದರು. ನನ್ನ ಪುತ್ರ ಆಶಯ್‌ಮಧು ಸಹ ಈ ಶಾಲೆಗೆ ಕೈಲಾದ ಸಹಾಯ ಮಾಡಿದ್ದಾರೆ ಎಂದರು.ಇದೇ ವೇಳೆ ಗ್ರಾಮದ ವತಿಯಿಂದ ಶಾಸಕ ಮಧು ಜಿ.ಮಾದೇಗೌಡರನ್ನು ಅಭಿನಂದಿಸಲಾಯಿತು. ನಿವೃತ್ತ ಕಾರ್ಯಪಾಲಕ ಅಭಿಯಂತರ ಬಿ.ಬಸವರಾಜೇಗೌಡ, ತಾಪಂ ಮಾಜಿ ಸದ್ಯ ಬಿ.ಗಿರೀಶ್, ಭರತೇಶ್, ಮುಖಂಡರಾದ ಮಣಿಗೆರೆ ಕಬ್ಬಾಳಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಸೋಮು, ಮುಖ್ಯಶಿಕ್ಷಕಿ ಎಂ.ಎಸ್.ಮಮತ, ಪಂಚಾಯಿತಿ ಸದಸ್ಯರಾದ ರಾಜು, ಶ್ರೀನಿವಾಸ್, ಮಾಜಿ ಸದಸ್ಯರಾದ ಮಧುಸೂಧನ್, ರವೀಂದ್ರ, ಎಂಪಿಸಿಎಸ್ ಅಧ್ಯಕ್ಷ ಜಯರಾಮು, ಆಲೂರಯ್ಯ, ನಂಜುಂಡಸ್ವಾಮಿ, ಸತೀಶ್, ರಾಜೇಗೌಡ, ಜೈಕೃಷ್ಣ, ಮುನಿಯ, ಬಸವರಾಜು ಸೇರಿದಂತೆ ಹಲವರಿದ್ದರು.