ರಾಜ್ಯದ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಎಂದರೆ 5 ಗ್ಯಾರಂಟಿ ಯೋಜನೆ ಎಂದುಕೊಂಡಿದ್ದಾರೆ. ಅತಿವೃಷ್ಟಿ, ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಇಲ್ಲ. ನಿಗಮ ಮಂಡಳಿಗಳಲ್ಲಿ ಸಂಬಳ ತೆಗೆದುಕೊಳ್ಳುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಇಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಎಂದರೆ 5 ಗ್ಯಾರಂಟಿ ಯೋಜನೆ ಎಂದುಕೊಂಡಿದ್ದಾರೆ. ಅತಿವೃಷ್ಟಿ, ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಇಲ್ಲ. ನಿಗಮ ಮಂಡಳಿಗಳಲ್ಲಿ ಸಂಬಳ ತೆಗೆದುಕೊಳ್ಳುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಇಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಗೊಂದಲದ ವಾತಾವರಣ ಇದೆ. ವಿರೋಧ ಪಕ್ಷದಿಂದ ಆಗಲಿ ಸಂಘಟನೆಗಳಿಂದಾಗಲಿ ಗೊಂದಲಗಳಿಲ್ಲ. ರಾಜ್ಯದಲ್ಲಿ ದರೋಡೆ ಆಗುತ್ತಿದೆ. ಪೋಲಿಸರೇ ದರೋಡೆ ಮಾಡಿಸುತ್ತಾರೆ. ಜೈಲಿನಲ್ಲಿ ಕೈದಿಗಳಿಗೆ ರಾಜಾತಿತ್ಯ, ಭಯೋತ್ಪಾದಕರಿಗೆ ಫೋನ್ ಸಿಗುತ್ತದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಎರಡೂವರೆ ವರ್ಷ ಆಯ್ತು ಅಧಿಕಾರದಿಂದ ಕೆಳಗಿಳಿಯಿರಿ, ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂದು ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಲ್ಲಿ ಇರುವ ದಲಿತ ನಾಯಕರಲ್ಲಿ ಬಾಯಿ ಕೆಲಸ ಮಾಡೋಲ್ಲ, ದಲಿತರಿಗೆ ಎಸ್ ಸಿಪಿ, ಟಿಎಸ್ ಪಿ ಮೀಸಲಿಟ್ಟ ಹಣ ಕೊಟ್ಟಿಲ್ಲ. ಎಲ್ಲರಿಗೂ ಪ್ರೀ ಇದೆ ದಲಿತರಿಗೆ ಪ್ರೀ ಇಲ್ಲ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ ಎಂದು ಕಾಂಗ್ರೆಸ್ ಹೆದರಿಸುತ್ತದೆ. ಇಂಗ್ಲಿಷ್ ಪಕ್ಷ ಮುಳುಗಿದರೆ ದಲಿತರಿಂದ ಮುಳುಗಿತು ಎಂದು ಹೇಳಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಬುದ್ಧಿವಂತಿಕೆಯಿಂದ ದಲಿತ ನಾಯಕರನ್ನು ಅಧ್ಯಕ್ಷರಾಗಿ ಮಾಡಿದರು. ಸಿ ವೋಟರ್ ಸಮೀಕ್ಷೆ ಬಂದಿದೆ. ಸಮೀಕ್ಷೆ ಪ್ರಕಾರ ದಲಿತ ಸಿಎಂ ಬಗ್ಗೆ ಮತ್ತು ಡಿ.ಕೆ.ಶಿವಕುಮಾರ್‌ ಸಿಎಂ ಆಗುವ ಬಗ್ಗೆ ಯಾರ ವಿಶ್ವಾಸವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ರಾಜ್ಯದ ಜನತೆ ನೆಮ್ಮದಿ ಕಳೆದುಕೊಂಡಿದ್ದಾರೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಪಡೆದ ನಿವೇಶಗಳನ್ನು ವಾಪಸ್ ಕೊಟ್ಟರೆ ಕೇಸ್ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟಿಗೆ ಏರ್ಪೋರ್ಟ್ ನೀಡಿದ ನಿವೇಶನವನ್ನು ಅವರು ವಾಪಸ್ ಕೊಟ್ಟರು. ಅದಕ್ಕೋಸ್ಕರ ಕೇಸ್ ಇಲ್ಲ ಎಂದು ಕುಟುಕಿದರು.

ಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್‌ ಮತ್ತಿತರರು ಇದ್ದರು.