ಎಸ್ಸಿ, ಎಸ್ಟಿ, ಓಬಿಸಿ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು: ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ

| Published : Jan 25 2025, 01:02 AM IST

ಎಸ್ಸಿ, ಎಸ್ಟಿ, ಓಬಿಸಿ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು: ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ
Share this Article
  • FB
  • TW
  • Linkdin
  • Email

ಸಾರಾಂಶ

ಈ ದೇಶದ ಎಸ್ಸಿ, ಎಶ್ಟಿ, ಓಬಿಸಿಗಳ ಬಗ್ಗೆ ಕಾಂಗ್ರೆಸ್‌ ಭ್ರಮಾಲೋಕ ಹುಟ್ಟು ಹಾಕುತ್ತಿದೆ, ಬರೀ ಮೊಸಳೆ ಕಮ್ಣೀರು ಸುರಿಸುತ್ತಿದಯೇ ವಿನಹಃ ಅವರ ಪ್ರಗತಿಗೆ ಏನೇನೂ ಮಾಡಿಲ್ಲವೆಂದು ಬಿಜೆಪಿ ಓಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಕೆ.ಲಕ್ಷ್ಮಣ ಆರೋಪಿಸಿದರು.

ಸಂವಿಧಾನ ಸನ್ಮಾನ ಅಭಿಯಾನ । ಸಂವಿಧಾನ ಬದಲಾಯಿಸಿದ್ದು ಯಾರು? ಪುಸ್ತಕ ಬಿಡುಗಡೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ದೇಶದ ಎಸ್ಸಿ, ಎಶ್ಟಿ, ಓಬಿಸಿಗಳ ಬಗ್ಗೆ ಕಾಂಗ್ರೆಸ್‌ ಭ್ರಮಾಲೋಕ ಹುಟ್ಟು ಹಾಕುತ್ತಿದೆ, ಬರೀ ಮೊಸಳೆ ಕಮ್ಣೀರು ಸುರಿಸುತ್ತಿದಯೇ ವಿನಹಃ ಅವರ ಪ್ರಗತಿಗೆ ಏನೇನೂ ಮಾಡಿಲ್ಲವೆಂದು ಬಿಜೆಪಿ ಓಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಕೆ.ಲಕ್ಷ್ಮಣ ಆರೋಪಿಸಿದರು.

ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ನಿಂದ ಶುಕ್ರವಾರ ಇಲ್ಲಿನ ರಂಗ ಮಂದಿರದಲ್ಲಿ ನೆಡದ ಸಂವಿಧಾನ ಸನ್ಮಾನ ಅಭಿಯಾನ ಮತ್ತು ಸಂವಿಧಾನ ಬದಲಾಯಿಸಿದ್ದು ಯಾರು ಎಂಬ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್‌ ಅವರನ್ನು ರಾಜಕೀಯವಾಗಿ ಸೋಲಿಸಿದ್ದೇ ಕಾಂಗ್ರೆಸ್‌ ಪಕ್ಷ, ಅದರಲ್ಲೂ ನೆಹರು ಅವರಂತೂ ್ಂಬೇಡ್ಕರ್‌ ಅಂದ್ರೆ ಆಗಿ ಬರದಂತೆ ಇದ್ದರು. ಕಾಕಾ ಕಾಲೇಕರ್‌ ಕಮೀಷನ್‌ ನೀಡಿದ್ದ ಶೋಷಿತ ಸಮುದಾಯದ ಅಭ್ಯುದಯದ ಕನಸು ಹೊತ್ತ ವರದಿಯನ್ನು ನೆಹರು ಕಾಂಗ್ರೆಸ್ ಮೂಲೆಗುಂಪು ಮಾಡಿತೆಂದು ತಿವಿದರು.

ಎಸ್ಸಿ, ಎಸ್ಟಿ, ಓಬಿಸಿ ಸೇರಿದಂತೆ ಶೋಷಿತ ಸಮಾಜದ ಮತಗಳು ಕಾಂಗ್ರೆಸ್‌ಗೆ ಬೇಕು. ಅವರ ಪ್ರಗತಿ ಬೇಡ ಎಂಬಂತೆ ಆ ಪಕ್ಷ ಧೋರಣೆ ಹೊಂದಿದೆ. ಸಂವಿಧಾನವನ್ನ 99 ಬಾರಿ ಬದಲಾಯಿಸುವ ಮೂಲಕ ಕಾಂಗ್ರೆಸ್‌ ಸಂವಿಧಾನದ ಸ್ವರೂಪವನ್ನೇ ಬದಲಿಸಿದೆ. ತಾನೆಲ್ಲವನ್ನು ಮಾಡಿ ಬಿಜೆಪಿಯತ್ತ ಬೆರಳು ತೋರುತ್ತಿದೆ ಎಂದರು.

ಬಿಜೆಪಿ ಅಂಬೇಡ್ಕರ್‌ ಅವರಿಗೆ ಸಮ್ಮಾನ್‌ ಮಾಡಿದರೆ ಕಾಂಗ್ರೆಸ್‌ ವಮಾನಿಸಿದೆ. ಈಚೆಗೆ ಮೋದಿಯವರು ಪಚತೀರರ್ಥ ಗಳನ್ನು ಅಭಿವೃದ್ಧಿ ಪಡಿಸಿ ಅಂಬೇಡ್ಕರ್‌ ಅವರಿಗೆ ಇನ್ನೂ ಗೌರವಿಸಿದ್ದಾರೆ. ಇದು ಬಿಜೆಪಿ ಸಂಸ್ಕೃತಿ. ಆರ್ಥಿಕವಾಗಿ ಹಿಂದುಳಿದಿರುವವರಿಗೆ ಮೀಸಲಿರಲಿ ಎಂದು ಕಾಂಗ್ರೆಸ್‌ ವಾದಿಸಿದ್ದರೆ ನಮ್ಮ ಪ್ರಧಾನಿಗಳು ಅಸ್ಪೃಶ್ಯತೆ ಇರೋವರೆಗೂ ಮೀಸಲಾತಿ ಮುಂದುವರಿಯಲಿ ಎಂದಿದ್ದಾರೆ. ಜೊತೆಗೇ ಇಡಬ್ಲೂಎಸ್‌ ಶೇ. 10 ಕೋಟಾ ನೀಡಿದ್ದಾರೆಂದು ಬಣ್ಣಿಸಿದರು.

ಮಾಜಿ ಸಚಿವ ಎನ್‌ ಮಹೇಶಮಾತನಾಡುತ್ತ ಬಾಬಾ ಸಾಹೇಬರ ಕುರಿತಂತೆ ಹಾಗೂ ಅವರು ನಂಬಿಕೊಂಡು ಬಂದ ಮೂಲ ತತ್ವಗಳಲ್ಲಿ ಹಲವನ್ನು ಮುಚ್ಚಿಟ್ಟಿದ್ದಾರೆ, ಅವುಗಳನ್ನೆಲ್ಲ ಬಿಟ್ಟಿಡುವುದೇ ಸಂವಿಧಾನ ಸಮ್ಮಾನ್‌ ಆಂದೋಲಾನದ ಮೂಲ ಗುರಿ ಎಂದರು. ಆಂದೋಲನ ಶುರುವಾಗಿ 2 ತಿಂಗಳಲ್ಲಿ ಹೊಸ ಅಲೆ ಹುಟ್ಟು ಹಾಕಿದ. ಜನರಲ್ಲಿ ಸಂವಿಧಾನ, ಅಂಬೇಡ್ಕರ್‌ ಪ್ರತಿ ಇನ್ನೂ ಹೆಚ್ಚಿನ ಅರಿವು ಮೂಡುತ್ತಿದೆ ಎಂದರು.

ಅಂಬೇಡ್ಕರ್‌ ಅವರಿಗೆ ಗೌರವಿಸಿದವರು, ಅಗೌರವಿಸಿದವರು ಯಾರು? ಎಂಬುದನ್ನು ಅರಿಯಲೇಬೇಕಿದೆ. ಕಾಂಗ್ರೆಸ್ಸಿಗರು ಅಂಬೇಡ್ಕರ್‌, ಸಂವಿಧಾನದ ಪ್ರತಿ ಸುಳ್ಳು ಹೇಳುತ್ತ ನಂಬಿಸುತ್ತಿದ್ದಾರೆ. ಇವರ ಸುಳ್ಳು ಊರು ಸುತ್ತಿ ಬರುತ್ತಿರೋವಾಗ ನಾವು ಅಂಬೇಡ್ಕರ್‌, ಸಂವಿಧಾನದ ಕುರಿತಂತೆ ಸತ್ಯ, ವಾಸ್ತವ ಸಂಗತಿಗಳನ್ನು ಜನರ ಮುಂದೆ ಬಿಚ್ಚಿಡಲು ಮುಂದಾಗಿದ್ದೇವೆ ಎಂದರು.

ಭಾರತ ಸಂವಿಧಾನ ಸಮರ್ಪಣೆಯ 75ನೇ ವರ್ಷದ ಅಮೃತ ಮಹೋತ್ಸವ ನಿಮಿತ್ತ ನಡೆದ ಸಮಾರಂಭದಲ್ಲಿ ಸಂಘಟನೆ ಮುಖ್ಯಸ್ಥ ವಾದಿರಾಜ ಕಾರ್ಯಕ್ರಮದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು.

ಬಿಜೆಪಿ ಶಾಸಕರಾದ ಬಸವರಾಜ ಮತ್ತಿಮಡು, ಬಿಜಿ ಪಾಟೀಲ್‌, ಅವಿನಾಶ ಜಾಧವ್‌, ಶಶಿಲ್‌ ನಮೋಶಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್‌ ರೇವೂರ್‌, ರಾಜಕುಮಾರ್‌ ತೇಲ್ಕೂರ್‌, ಸುಭಾಸ ಗುತ್ತೇದಾರ್‌, ಮಾಜಿ ಸಂಸದ ಡಾ. ಉಮೇಶ ಜಾದವ್‌, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್‌, ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ಟ್‌ ಕಲಬುರಗಿ ಭಾಗದ ಪ್ರಮುಖರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ್‌ ಇದ್ದರು.