ಸಾರಾಂಶ
ರಾಜ್ಯದ ರೈತ ಸಮುದಾಯದ ಶಾಪ ಕಾಂಗ್ರೆಸ್‌ಗೆ ತಟ್ಟಿದೆ. ಬರಗಾಲದ ಸಂದರ್ಭದಲ್ಲೂ ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್ ದರ ಏರಿಕೆ, ಕೃಷಿಯ ಎಲ್ಲ ಸಾಮಗ್ರಿಗಳ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ರಾಜ್ಯದ ಜನತೆ ಸೋಲಿನ ಭಾಗ್ಯ ಉಣಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಹಿರೇಕೆರೂರು: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಜಯಶಾಲಿಯಾದ ಹಿನ್ನೆಲೆಯಲ್ಲಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ, ರಾಜ್ಯದ ರೈತ ಸಮುದಾಯದ ಶಾಪ ಕಾಂಗ್ರೆಸ್‌ಗೆ ತಟ್ಟಿದೆ. ಬರಗಾಲದ ಸಂದರ್ಭದಲ್ಲೂ ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್ ದರ ಏರಿಕೆ, ಕೃಷಿಯ ಎಲ್ಲ ಸಾಮಗ್ರಿಗಳ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ರಾಜ್ಯದ ಜನತೆ ಸೋಲಿನ ಭಾಗ್ಯ ಉಣಿಸಿದ್ದಾರೆ ಎಂದು ಹೇಳಿದರು.ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಗೆಲುವಿನಲ್ಲಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಜನತೆ ಸಿಂಹಪಾಲು ಮತಗಳನ್ನು ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸೋಲು ತುಂಬಿಕೊಡುವ ಕಾರ್ಯವನ್ನು ಈ ಕ್ಷೇತ್ರದ ಜನತೆ ಮಾಡಿದ್ದಾರೆ. ಅಭಿವೃದ್ಧಿಗೆ ನಾವೆಲ್ಲ ಸದಾ ಜತೆಯಲ್ಲಿದ್ದೇವೆ ಎಂಬ ಸಂದೇಶವನ್ನು ಕ್ಷೇತ್ರ ಹಾಗೂ ರಾಜ್ಯದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಮುಖಂಡರಾದ ಲಿಂಗರಾಜ ಚಪ್ಪರದಳ್ಳಿ, ಆರ್.ಎನ್. ಗಂಗೋಳ, ರವಿಶಂಕರ ಬಾಳಿಕಾಯಿ, ಕೆ.ಜೆ. ಪ್ರತಾಪ್, ಜಗದೀಶ ದೊಡ್ಡಗೌಡ್ರ, ಆರ್.ಬಿ. ನೀಲನಗೌಡ್ರ, ಬಸವರಾಜ ಭರಮಗೌಡ್ರ, ದುರುಗೇಶ ತಿರಕಪ್ಪನವರ, ಈರಣ್ಣ ಚಿಟ್ಟೂರ, ನಾಗರಾಜ ಬಣಕಾರ, ಗೀತಾ ದಂಡಗೀಹಳ್ಳಿ, ಕುಸುಮಾ ಬಣಕಾರ, ಮಂಜುಳಾ ಬಾಳಿಕಾಯಿ, ಶಿವಲೀಲಾ ರಂಗಕ್ಕನವರ, ಉಮಾ ಚಕ್ರಸಾಲಿ, ಕವಿತಾ ಭರಮಗೌಡ್ರ, ಪ್ರದೀಪ ಪಾಟೀಲ, ಹೊನ್ನಪ್ಪ ಸಾಲಿ, ಬಸನಗೌಡ ದೊಡ್ಡಗೌಡ್ರ ಹಾಗೂ ಕಾರ್ಯಕರ್ತರು ಇದ್ದರು.