ಸಾರಾಂಶ
ನರಸಿಂಹರಾಜಪುರ: ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಹಿಳೆಯರಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದು ತಕ್ಷಣ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಅರಗಿ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿ, ರವಿಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು.ಈ ಹಿಂದೆಯೂ ರವಿಕುಮಾರ್ ಅವರು ಮಹಿಳಾ ಜಿಲ್ಲಾಧಿಕಾರಿಗಳಿಗೆ ಅಪಮಾನ ಮಾಡಿದ್ದರು. ಈ ರೀತಿ ಮಹಿಳೆಯರನ್ನು ಪದೇ, ಪದೇ ಅಪಮಾನ ಮಾಡಿ ಮಹಿಳೆ ಆತ್ಮ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿರುವುದು ಯಾವ ಸಂಸ್ಕೃತಿ. ಇದು ಬಿಜೆಪಿ ಸಂಸ್ಕೃತಿಯೇ ಎಂಬುದನ್ನು ಬಿಜಿಪಿ ನಾಯಕರೇ ಸೃಷ್ಟಪಡಿಸಬೇಕು ಎಂದರು.ಇಂತಹ ಮಹಿಳಾ ವಿರೋಧಿ ಬಿಜೆಪಿ ತಮ್ಮ ಪಕ್ಷದಲ್ಲಿ ಇಟ್ಟುಕೊಂಡಿರುವುದು ನೋಡಿದರೆ ಅವರ ಮಾತುಗಳಿಗೆ ಬಿಜೆಪಿ ಪಕ್ಷದ ಬೆಂಬಲವೂ ಸಹ ಇರುವಂತೆ ಕಾಣುತ್ತದೆ. ಈ ಬಗ್ಗೆ ಬಿಜೆಪಿ ಮಹಿಳಾ ನಾಯಕರು ತಮ್ಮ ನಿಲುವನ್ನು ಸಾರ್ವಜನಿಕವಾಗಿ ತಿಳಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮಹಿಳೆಯರ ಪರವಾಗಿ ನಿಲ್ಲುವುದಾದರೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಪಕ್ಷದಿಂದ ಹೊರ ಹಾಕಬೇಕು ಎಂದು ಯುವ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ತಿಳಿಸಿದರು.