ರಾಹುಲ್ ಗಾಂಧಿ ಮೊಹಬತ್ ಕಾ ದುಖಾನ್ ಅಂತ ಹೇಳುತ್ತಾರೆ. ಆದರೆ, ಕರ್ನಾಟಕದಲ್ಲಿ ನಪರತ್ ಕಾ ಅಜೆಂಡಾ ನಡೆದಿದೆ. ದ್ವೇಷ ಭಾಷಣದೊಳಗೆ ತಮ್ಮ ವಿರುದ್ಧ ಅಭಿಪ್ರಾಯ ಹೇಳುವವರೆಗೂ ಸಿಲುಕಿಸಬೇಕು ಎಂಬ ಕಾರಣ ಈ ಬಿಲ್‌ನ್ನು ಪಾಸು ಮಾಡಿದ್ದಾರೆ.
ಧಾರವಾಡ:
ಕಾಂಗ್ರೆಸ್ ಫ್ರೆಂಡ್ಲಿ ಪಾರ್ಟಿಗಳಿಗೆಲ್ಲ ಹಿಂದೂ ದೇವತೆಗಳಿಗೆ ಅಪಮಾನ ಮಾಡುವುದೆಂದರೆ ಒಂದು ಫ್ಯಾಷನ್ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.ರಾಮ ಹಿಂದೂ ಅಲ್ಲ ಎಂದು ಟಿಎಂಸಿ ನಾಯಕ ಮದನ್ ಮಿತ್ರಾ ನೀಡಿರುವ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ಅವರು, ಮುಸ್ಲಿಂ ತುಷ್ಟೀಕರಣಕ್ಕಾಗಿ ಈ ರೀತಿ ಮಾತನಾಡುತ್ತಾರೆ. ಇವರ ಮೇಲೆ ಮಮತಾ ಬ್ಯಾನರ್ಜಿ ಏನು ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ರಾಹುಲ್ ಗಾಂಧಿ ಮೊಹಬತ್ ಕಾ ದುಖಾನ್ ಅಂತ ಹೇಳುತ್ತಾರೆ. ಆದರೆ, ಕರ್ನಾಟಕದಲ್ಲಿ ನಪರತ್ ಕಾ ಅಜೆಂಡಾ ನಡೆದಿದೆ. ದ್ವೇಷ ಭಾಷಣದೊಳಗೆ ತಮ್ಮ ವಿರುದ್ಧ ಅಭಿಪ್ರಾಯ ಹೇಳುವವರೆಗೂ ಸಿಲುಕಿಸಬೇಕು ಎಂಬ ಕಾರಣ ಈ ಬಿಲ್‌ನ್ನು ಪಾಸು ಮಾಡಿದ್ದಾರೆ. ರಾಹುಲ್ ಗಾಂಧಿ ಬೇರೆಯವರ ಬಗ್ಗೆ ಮಾತನಾಡುತ್ತಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ಮಧ್ಯೆ ಮೊಹಬ್ಬತ್ ಏರ್ಪಡಿಸಿಲ್ಲ. ಇವರಿಬ್ಬರ ಮಧ್ಯೆ ಮೊಹಬ್ಬತ್ ಗಾಯಬ್ ಆಗಿದೆ ಎಂದು ವ್ಯಂಗ್ಯವಾಡಿದರು.ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿದ ಜೋಶಿ, ಸಿಎಂ, ಡಿಸಿಎಂ ಇಬ್ಬರನ್ನು ಸರಿ ಮಾಡದಿದ್ದಲ್ಲಿ ಪಕ್ಷ ಹಾಳಾಗಿ ಹೋಗುತ್ತದೆ ಎಂದು ಕಾಂಗ್ರೆಸ್‌ನಲ್ಲಿದ್ದ ವಿ.ಆರ್. ಸುದರ್ಶನ್ ಪತ್ರ ಬರೆದಿದ್ದಾರೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಕ್ಸ್‌ಪೋರ್ಟ್ 413 ಬಿಲಿಯನ್ ಡಾಲರ್ ಇತ್ತು. ನಮ್ಮ ಅವಧಿಯಲ್ಲಿ 820 ಬಿಲಿಯನ್ ಡಾಲರ್ ಆಗಿದೆ ಎಂದರು.